
ಸಿರುಗುಪ್ಪ ಮೇ 07 : ತಾಲ್ಲೂಕಿನ ಶಾನವಾಸಪುರ ಗ್ರಾಮದ ಚಂದ್ರಮೌಳೇಶ್ವರ ಹಾಗೂ ಬಸವೇಶ್ವರ ದೇವರ 21ನೇ ವರ್ಷದ ಉಚ್ಚಯ್ಯ ಸಂಭ್ರಮದಿಂದ ಜರುಗಿತು.
ಉಚ್ಚಯ್ಯ ಪ್ರಯುಕ್ತ ಎಪ್ರಿಲ್ 8ರಿಂದ ಮೇ 4ವರೆಗೆ ದಾರುಕಾಶ್ರಮ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ಕೊಂಚಗೇರಿ ವೇದಮೂರ್ತಿ ಶಿವಯ್ಯ ತಾತ ಇವರ ನೇತೃತ್ವದಲ್ಲಿ ಸಪ್ತ ಭಜನೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಬೆಳಗ್ಗೆ ನಂದಿಯ ಮೆರವಣಿಗೆ ಮಾಡಲಾಯಿತು. ನಂತರ ವಿರೂಪಾಕ್ಷಯ್ಯ ಸ್ವಾಮಿ ಹಾಗೂ ಎಸ್ ಎಂ ದೊಡ್ಡ ಬಸಯ್ಯ ಸ್ವಾಮೀಜಿ ಇವರ ನೇತೃತ್ವದಲ್ಲಿ ಸಪ್ತ ಭಜನೆ ಕಾರ್ಯಕ್ರಮಕ್ಕೆ ಮಂಗಳ ಮಾಡಲಾಯಿತು.
ಸಂಜೆ ಈಶ್ವರ ದೇವರ ಮೂರ್ತಿಯನ್ನು ಸಕಲ ಮಂಗಳ ವಾದ್ಯಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಕರೆಮನೆ ಸುಂಕಪ್ಪನವರ ಮನೆ ಹತ್ತಿರದ ಈಶ್ವರ ದೇವಾಲಯದವರಿಗೆ ಉಚ್ಚಯ್ಯ ಎಳೆಯಲಾಯಿತು. ಭಕ್ತರು ಹೂ ಹಣ್ಣು ಉತ್ತುತ್ತಿ ಎಸೆದು ಭಕ್ತಿ ಸಮರ್ಪಿಸಿದರು.
ಕಾರೇಕಲ್ಲು, ಮಸೀದಿಪುರ, ಶಂಕರ ಬಂಡೆ, ಕರೂರು, ಕೊಂಚಗೇರಿ, ದಾಸಾಪುರ, ಬಾದನಹಟ್ಟಿ, ಕುರುಗೋಡು ಸೇರಿದಂತೆ ವಿವಿಧ ಗ್ರಾಮಗಳ ಭಕ್ತರು ಭಾಗವಹಿಸಿದ್ದರು.
ಬಸವೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಶಂತನಗೌಡ, ಚಂದ್ರಮೌಳೆಶ್ವರ, ವೀರಭದ್ರಗೌಡ ಸೇರಿದಂತೆ ಗ್ರಾಮದ ನೂರಾರು ಭಕ್ತರು ಇದ್ದರು.
2 Attachments • Scanned by Gmail