ಚಂದ್ರಮುಖಿ-೨ ಮೊದಲ ದಿನದ ೭.೫ಕೋಟಿ ಗಳಿಕೆ

ಮುಂಬೈ,ಸೆ.೨೯-ಆಕ್ಷನ್, ಕಾಮಿಡಿ, ಹಾರರ್ ಮತ್ತು ರೊಮ್ಯಾನ್ಸ್ ತುಂಬಿರುವ ಬಹು ನಿರೀಕ್ಷಿತ ಚಿತ್ರ ಚಂದ್ರಮುಖಿ-೨’ . ಸೆಪ್ಟೆಂಬರ್ ೨೮ ರಂದು ಥಿಯೇಟರ್‌ಗೆ ಬಂದಿದೆ. ೬೦ ಕೋಟಿ ಬಜೆಟ್‌ನಲ್ಲಿ ತಯಾರಾಗಿರುವ ಚಿತ್ರದ ಮೊದಲ ದಿನದ ಕಲೆಕ್ಷನ್ ಬಹಿರಂಗವಾಗಿದೆ. ಚಿತ್ರಕ್ಕೆ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಬಾಲಿವುಡ್ ನಟಿ ಕಂಗನಾ ರಣಾವತ್ ಮತ್ತು ರಾಘವ್ ಲಾರೆನ್ಸ್ ಅಭಿನಯದ ಹಾರರ್ ಕಾಮಿಡಿ ಚಿತ್ರ ’ಚಂದ್ರಮುಖಿ-೨’ . ಚಿತ್ರ ಮೊದಲ ದಿನವೇ ಸುಮಾರು ೭.೫ ಕೋಟಿ ಬ್ಯುಸಿನೆಸ್ ಮಾಡಿದೆ.
ನಟಿ ಕಂಗನಾ ರಣಾವತ್ ಅವರ ಚಿತ್ರ ಚಂದ್ರಮುಖಿ ೨ ಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದರು.
ಚಿತ್ರದಲ್ಲಿ ಕಂಗನಾ ತುಂಬಾ ಸುಂದರವಾಗಿ ಮತ್ತು ವಿಭಿನ್ನ ಶೈಲಿಯಲ್ಲಿ ಕಾಣಿಸಿಕೊಂಡಿದ್ದಾರೆ. ’ಚಂದ್ರಮುಖಿ ೨’ ಚಿತ್ರದ ನಟನೆಯನ್ನು ಪ್ರೇಕ್ಷಕರು ತುಂಬಾ ಇಷ್ಟಪಟ್ಟಿದ್ದಾರೆ ಮತ್ತು ಚಿತ್ರದಲ್ಲಿ ಅವರ ನಟನೆಯನ್ನು ಸಹ ಪ್ರಶಂಸಿಸಲಾಗಿದೆ.
ಈ ಸೌತ್ ಚಿತ್ರವು ೨೦೦೫ ರ ಚಂದ್ರಮುಖಿ ಚಿತ್ರದ ಮುಂದುವರಿದ ಭಾಗವಾಗಿದೆ.
ಲೈಕಾ ಕಂಪನಿ ನಿರ್ಮಿಸಿರುವ ಚಂದ್ರಮುಖಿ ೨ ಚಿತ್ರದಲ್ಲಿ ಕಂಗನಾ ರಣಾವತ್ ಮತ್ತು ರಾಘವ್ ಲಾರೆನ್ಸ್ ಅವರಲ್ಲದೆ, ವಡಿವೇಲು, ರಾಧಿಕಾ ಶರತ್‌ಕುಮಾರ್, ಲಕ್ಷ್ಮಿ ಮೆನನ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಇನ್ನು ಚಿತ್ರದ ಸಂಗೀತದ ಬಗ್ಗೆ ಹೇಳುವುದಾದರೆ, ಎಂಎಂ ಕೀರವಾಣಿ ಸಂಗೀತ ಸಂಯೋಜನೆ ಮಾಡಿದ್ದಾರೆ.’ಚಂದ್ರಮುಖಿ
೨’ ಮೊದಲ ದಿನದಲ್ಲಿ ತಕ್ಕಮಟ್ಟಿಗೆ ಕಲೆಕ್ಷನ್ ಮಾಡಿದೆ.ಅದರೊಂದಿಗೆ ಬಿಡುಗಡೆಯಾದ ಎರಡು ಚಿತ್ರಗಳಾದ ದಿ ವ್ಯಾಕ್ಸಿನ್ ವಾರ್ ಮತ್ತು ಫುಕ್ರೆ ೩ ನಿಂದಾಗಿ ಚಿತ್ರದ ಗಳಿಕೆಯ ಮೇಲೆ ಪರಿಣಾಮ ಬೀರಿದೆ. ಆದರೆ, ವಾರಾಂತ್ಯದಲ್ಲಿ ಚಿತ್ರದ ಗಳಿಕೆ ಹೆಚ್ಚಾಗಬಹುದು ಎಂಬುದು ನಿರ್ಮಾಪಕರ ನಿರೀಕ್ಷೆ.