
ಹೈದರಾಬಾದ್,ಸೆ.-೪ ಚಂದ್ರಮುಖಿ-೨ ಜನಪ್ರಿಯ ನೃತ್ಯ ನಿರ್ದೇಶಕ, ನಟ ಮತ್ತು ನಿರ್ದೇಶಕ ರಾಘವ ಲಾರೆನ್ಸ್ ಮತ್ತು ಬಾಲಿವುಡ್‌ನ ಮೋಹನಾಂಗಿ ಕಂಗನಾ ರನೌತ್ ಅಭಿನಯದ ಅದ್ಧೂರಿ ಚಿತ್ರ.
ಈ ಹಿಂದೆ ರಜನಿಕಾಂತ್ ಅಭಿನಯದ ಚಂದ್ರಮುಖಿ ಚಿತ್ರವನ್ನು ನಿರ್ದೇಶಿಸಿದ್ದ ಪಿ.ವಾಸು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಲೈಕಾ ಪ್ರೊಡಕ್ಷನ್ಸ್‌ನ ಅದ್ಧೂರಿ ಬಜೆಟ್‌ನಲ್ಲಿ ತಯಾರಾದ ಈ ಚಿತ್ರವು ವಿನಾಯಕ ಚತುರ್ಥಿಗೆ ಸಂದರ್ಭದಲ್ಲಿ ಸೆಪ್ಟೆಂಬರ್ ೧೫ ರಂದು ತೆಲುಗು ಮತ್ತು ತಮಿಳಿನಲ್ಲಿ ಬಿಡುಗಡೆಯಾಗಲಿದೆ. ತೆಲುಗು ರಾಜ್ಯಗಳಲ್ಲಿ ’ಚಂದ್ರಮುಖಿ ೨’ ಚಿತ್ರ ರಾಧಾಕೃಷ್ಣ ಎಂಟರ್‌ಟೈನ್‌ಮೆಂಟ್ಸ್ ಬ್ಯಾನರ್ ಅಡಿಯಲ್ಲಿ ವೆಂಕಟ್ ಉಪ್ಪುತುರಿ ಮತ್ತು ವೆಂಕಟ ರತ್ನಂ ಸಖಮುರಿ ಅವರಿಂದ ಬಿಡುಗಡೆಯಾಗುತ್ತಿದೆ. ಈ ಹಿನ್ನಲೆಯಲ್ಲಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಟ್ರೈಲರ್ ತುಂಬಾ ಆಸಕ್ತಿದಾಯಕವಾಗಿದೆ. ಚಂದ್ರಮುಖಿ-೨ ಚಿತ್ರವು ಥ್ರಿಲ್ಲರ್‌ನ ಎಲ್ಲಾ ಅಂಶಗಳನ್ನು ಹೊಂದಿದೆ ಎಂದು ಟ್ರೇಲರ್ ಹೇಳುತ್ತದೆ.
೧೭ ವರ್ಷಗಳ ಹಿಂದೆ ಚಂದ್ರಮುಖಿ ತಾನು ಬಂಧಿಯಾಗಿದ್ದ ಕೋಣೆಯ ಬಾಗಿಲು ತೆರೆದು ವೆಟ್ಟಯ್ಯ ರಾಜನ ಮೇಲೆ ಸೇಡು ತೀರಿಸಿಕೊಳ್ಳಲು ಯತ್ನಿಸಿ ವಿಫಲಳಾಗಿದ್ದಳು. ಇಷ್ಟು ವರ್ಷಗಳ ನಂತರ ಈಗ ತನ್ನ ಸೇಡು ತೀರಿಸಿಕೊಳ್ಳಲು ಬರುತ್ತಿದ್ದಾಳೆ. ಯಾವಾಗ… ಎಲ್ಲಿ… ಹೇಗೆ ಎಂದು ತಿಳಿಯಲು ಸೆಪ್ಟೆಂಬರ್ ೧೫ರವರೆಗೆ ಕಾಯಲೇಬೇಕು ಎನ್ನುತ್ತಾರೆ ನಿರ್ಮಾಪಕರು.
ಇದರಲ್ಲಿ ರಾಘವ ಲಾರೆನ್ಸ್ ಎರಡು ಶೇಡ್ ನಲ್ಲಿ ಮನಸೂರೆಗೊಂಡಿದ್ದಾರೆ. ಒಂದು ಸ್ಟೈಲಿಶ್ ಲುಕ್ ಮತ್ತು ಇನ್ನೊಂದು ವೆಟ್ಟಯ ರಾಜ ಲುಕ್. ಚಂದ್ರಮುಖಿ ಪಾತ್ರದಲ್ಲಿ ಕಂಗನಾ ರಣಾವತ್ ನಟಿಸಿದ್ದಾರೆ. ಸ್ಟಾರ್ ಕಾಮಿಡಿಯನ್ ವಡಿವೇಲು ಬಸವಯ್ಯನ ಪಾತ್ರದಲ್ಲಿ ತಮ್ಮದೇ ಆದ ಹಾಸ್ಯದ ಮೂಲಕ ಇಂಪ್ರೆಸ್ ಮಾಡಲಿದ್ದಾರೆ.
ಆಸ್ಕರ್ ಪ್ರಶಸ್ತಿ ವಿಜೇತ ಎಂ.ಎಂ.ಕೀರವಾಣಿ ಅವರ ಸಂಗೀತ ಈ ಚಿತ್ರದ ಹೈಲೈಟ್ ಎಂದೇ ಹೇಳಬೇಕು. ಅದರಲ್ಲೂ ಕೀರವಾಣಿ ಹಿನ್ನೆಲೆ ಸಂಗೀತ ಹಿಟ್ ಆಗುತ್ತೆ ಅಂತಾರೆ ಚಿತ್ರತಂಡ. ಆರ್.ಡಿ.ರಾಜಶೇಖರ್ ಅವರ ಛಾಯಾಗ್ರಹಣವೂ ಆಕರ್ಷಕವಾಗಿದೆ ಎಂಬುದು ಟ್ರೇಲರ್ ನಿಂದ ಸ್ಪಷ್ಟವಾಗಿದೆ. ಟ್ರೇಲರ್ ಚಿತ್ರದ ನಿರೀಕ್ಷೆಯನ್ನು ಹೆಚ್ಚಿಸುತ್ತಿದೆ. ’ಚಂದ್ರಮುಖಿ ೨’ ಚಿತ್ರದ ಮೂಲಕ ಮತ್ತೊಮ್ಮೆ ಬೆಳ್ಳಿತೆರೆಯಲ್ಲಿ ನಿರ್ದೇಶಕ ಪಿ.ವಾಸು ಯಾವ ರೀತಿಯ ಮ್ಯಾಜಿಕ್ ಸೃಷ್ಟಿಸಲಿದ್ದಾರೆ ಎಂಬುದನ್ನು ನೋಡಲು ಎಲ್ಲರೂ ಕಾತರದಿಂದ ಕಾಯುತ್ತಿದ್ದಾರೆ.
ಲಕ್ಷ್ಮಿ ಮೆನನ್, ಮಹಿಮಾ ನಂಬಿಯಾರ್, ರಾಧಿಕಾ ಶರತ್‌ಕುಮಾರ್, ವಿಘ್ನೇಶ್, ರವಿ ಮರಿಯಾ, ಸೃಷ್ಟಿ ಡಾಂಗೆ, ಶುಭಿಕ್ಷಾ, ವೈ.ಜಿ.ಮಹೇಂದ್ರನ್ ರಾವ್ ರಮೇಶ್, ಸಾಯಿ ಅಯ್ಯಪ್ಪನ್, ಸುರೇಶ್ ಮೆನನ್, ಶತ್ರು, ಟಿ.ಎಂ.ಕಾರ್ತಿಕ್ ಚಿತ್ರದ ಇತರ ಪಾತ್ರಗಳನ್ನು ನಿರ್ವಹಿಸಿದ್ದಾರೆ.