ಚಂದ್ರಮಾನ ಯುಗಾದಿ ಪ್ರಯುಕ್ತ ಶ್ರೀಶೈಲಂ ಹೆಚ್ಚುವರಿ ಬಸ್ ಕಾರ್ಯಾಚರಣೆ

ಕಲಬುರಗಿ:ಮಾ.28:ಚಂದ್ರಮಾನ ಯುಗಾದಿ ಪ್ರಯುಕ್ತ ಏಪ್ರಿಲ್ 9 ರಂದು ಆಂಧ್ರಪ್ರದೇಶ ರಾಜ್ಯದ ಶ್ರೀಶೈಲಂನಲ್ಲಿ ಜರುಗುವ ಶ್ರೀ ಮಲ್ಲಿಕಾರ್ಜುನ ದೇವರ ಜಾತ್ರೆಗೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವ್ಯಾಪ್ತಿಯ ಕೆಳಕಂಡ ವಿಭಾಗಗಳಿಂದ 2024ರ ಏಪ್ರಿಲ್ 1 ರಿಂದ 11 ರವರೆಗೆ ಹೆಚ್ಚಿನ ಸಂಖ್ಯೆಯಲ್ಲಿ ವಿಶೇಷ/ಹೆಚ್ಚುವರಿ ವಾಹನಗಳನ್ನು ಕಾರ್ಯಾಚರಣೆ ಮಾಡಲಾಗುತ್ತಿದ್ದು, ಸಾರ್ವಜನಿಕ ಪ್ರಯಾಣಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.

ರಾಯಚೂರು ವಿಭಾಗ-250, ವಿಜಯಪುರ ವಿಭಾಗ-250, ಕಲಬುರಗಿ ವಿಭಾಗ-50, ಯಾದಗಿರ ವಿಭಾಗ-30 ಹಾಗೂ ಬಳ್ಳಾರಿ ವಿಭಾಗ-40 ವಾಹನಗಳನ್ನು ಶ್ರೀಶೈಲಕ್ಕೆ ಕಾರ್ಯಾಚರಣೆ ಮಾಡಲು ಯೋಜನೆ ಹಾಕಿಕೊಳ್ಳಲಾಗಿದ್ದು, ಈ ಜಾತ್ರೆಗೆ ಹೋಗಲು ಒಟ್ಟಿಗೆ 50 ಜನ ಪ್ರಯಾಣಿಕರು ಇದ್ದಲ್ಲಿ, ಒಂದು ವಾಹನವನ್ನು ತಮ್ಮ ಗ್ರಾಮ/ಸ್ಥಳದಿಂದ ಎಲ್ಲಿಯೂ ನಿಲುಗಡೆ ಮಾಡದೇ ಬೈಪಾಸ್ ಮೂಲಕ ನೇರವಾಗಿ ಶ್ರೀಶೈಲಂಗೆ ಕಾರ್ಯಾಚರಣೆ ಮಾಡಲಾಗುವುದು. ಆಸಕ್ತ ಪ್ರಯಾಣಿಕರು ಈ ಕೆಳಕಂಡ ವಿಭಾಗೀಯ ಸಂಚಾರ ಅಧಿಕಾರಿಗಳ ಮೊಬೈಲ್ ಸಂಖ್ಯೆ ಸಂಪರ್ಕಿಸಿ ಇದರ ಉಪಯೋಗ ಪಡೆದುಕೊಳ್ಳಬೇಕು.

ವಿಭಾಗವಾರು ಅಧಿಕಾರಿಗಳ ಮೊಬೈಲ್ ಸಂಖ್ಯೆ ವಿವರ ಇಂತಿದೆ. ಕಲಬುರಗಿ ವಿಭಾಗ-1 ಮೊಬೈಲ್ ಸಂಖ್ಯೆ-7760992102, ಕಲಬುರಗಿ ವಿಭಾಗ-2 ಮೊಬೈಲ್ ಸಂಖ್ಯೆ-7760984086, ಯಾದಗಿರಿ-7760992452, ಬೀದರ-7760992202, ರಾಯಚೂರು-7760992352, ಕೊಪ್ಪಳ-7760992402, ಬಳ್ಳಾರಿ-7760992152, ಹೊಸಪೇಟೆ-7760992302 ಹಾಗೂ ವಿಜಯಪುರ-7760992252 ಗಳಿಗೆ ಸಂಪರ್ಕಿಸಲು ಕೋರಲಾಗಿದೆ.