ಚಂದ್ರಬಾಬು ನಾಯ್ಡುರಿಂದ ನಗರದಲ್ಲಿ ನಾಳೆ ಎನ್.ಟಿ.ಆರ್ ಪ್ರತಿಮೆ ಅನಾವರಣ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಸೆ.04: ತೆಲುಗು ಭಾಷೆಯ ನಟ ಸಾರ್ವಭೌಮ, ಅಂದ್ರ ಪ್ರದೇಶದ ದಿ.ಮುಖ್ಯ ಮಂತ್ರಿ ಎನ್.ಟಿ.ಆರ್ ಅವರ ಪುತ್ಥಳಿಯನ್ನು  ನಗರದ ಕಮ್ಮ‌ಭವನದ ಮುಂದೆ ನಾಳೆ ಅನಾವರಣಗೊಳಿಸಲಾಗುತ್ತಿದೆ.
ತೆಲುಗುದೇಶಂ ಪಕ್ಷದ ನಾಯಕ ಚಂದ್ರಬಾಬು ನಾಯ್ಡು ಅವರು ಪ್ರತಿಮೆಯನ್ನು ಮಧ್ಯಾಹ್ನ 2 ಗಂಟೆಗೆ   ಅನಾವರಣ ಮಾಡಲಿದ್ದಾರೆ. ಆಂದ್ರದ ತೆನಾಲಿಯಲ್ಲಿ ನಿರ್ಮಿಸಿರುವ 7 ವರೆ ಅಡಿ ಎತ್ತರದ ಸ್ವರ್ಣ ವರ್ಣದ ಈ ಪುತ್ಥಳಿ ಅನಾವರಣಕ್ಕೆ ಸಕಲ ಸಿದ್ದತೆಗಳು ನಡೆದಿವೆ ಎಂದು ಕಮ್ಮ ಮಹಾಜನ ಸಂಘದ ಅಧ್ಯಕ್ಷ ಮುಂಡ್ಲೂರು ಅನುಪ್ ಕುಮಾರ್  ಹೇಳಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ನಾಗೇಂದ್ರ, ನಗರ ಶಾಸಕ ಭರತ್ ರೆಡ್ಡಿ, ಇನ್ನಿತರ ಜನ‌ಪ್ರತಿನಿಧಿಗಳ  ಸಂಘದ ಪದಾಧಿಕಾರಿಗಳು, ಸಮುದಾಯದ ಗಣ್ಯರು,  ಪಾಲಿಕೆ ಸದಸ್ಯರು  ಪಾಲ್ಗೊಳ್ಳಲಿದ್ದಾರಂತೆ.
ಹೈದ್ರಾಬಾದ್ ನಿಂದ  ಜಿಂದಾಲ್ ವಿಮಾನ‌ ನಿಲ್ದಾಣಕ್ಕೆ ಬರುವ ಚಂದ್ರಬಾಬು ನಾಯ್ಡು ಅವರು ಇದಕ್ಕೂ  ಮೊದಲಿಗೆ ತಾಲೂಕಿನ  ಬಾಲಾಜಿ ಕ್ಯಾಂಪಿನಲ್ಲಿ ನಿರ್ಮಿಸಿರುವ ಶಿವನ ದೇವಾಲಯ ಉದ್ಘಾಟನೆ ಮಾಡಿ ನಂತರ  ಬಳ್ಳಾರಿಗೆ ಆಗಮಿಸಿ ಎನ್ ಟಿ.ಆರ್ ಅವರ  ಪ್ರತಿಮೆ ಅನಾವರಣ ಮಾಡಲಿದ್ದಾರೆಂದು ತಿಳಿದು ಬಂದಿದೆ.
ಅವರನ್ನು ಯುವ ಸಮೂಹ ಬೈಕ್ ಱ್ಯಾಲಿ ಮೂಲಕ ಸ್ವಾಗತಿಸಲು ಸಿದ್ದತೆ ನಡೆಸಿದೆ.