ಚಂದ್ರಪ್ಪಾ ಹೆಬ್ಬಾಳಕರ್ ಜೀವಪರ ಸಾಹಿತಿಗಳಾಗಿದ್ದರು: ಮಾಸಿಮಾಡೆ

ಬೀದರ:ಮಾ.28: ನಗರದ ಖಾಸಗಿ ಹೋಟಲ್ ನಲ್ಲಿ ನಡೆದ ದಿವಂಗತ ಚಂದ್ರಪ್ಪಾ ಹೆಬ್ಬಾಳಕರ್ ರವರ ನುಡಿನಮನ ಕಾರ್ಯಕ್ರಮ ಉಧ್ಘಾಟಿಸಿ ಮಾತಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಪೆÇ್ರೀ ಸಿದ್ರಾಮಪ್ಪಾ ಮಾಸಿಮಾಡೆ ರವರು ಚಂದ್ರಪ್ಪಾ ಹೆಬ್ಬಾಳಕರ್ ರವರು ಜೀವಪರ ವ್ಯಕ್ತಿತ್ವ ಹೊಂದಿರುವ ಸಾಹಿತಿಗಳಾಗಿದರು ಬೀದರ ಜಿಲ್ಲೆಯಲ್ಲಿ ಧರಿನಾಡು ಕನ್ನಡ ಸಂಘ ಬೆಳೆಸಿರುವ ಶ್ರೇಯಸ್ಸು ಹೆಬ್ಬಾಳಕರ್ ಸರ್ ಮತ್ತು ದೇಶಾಂಶ ಹುಡುಗಿ ರವರಿಗೆ ಸಲ್ಲುತ್ತದೆ ಇಂದು ಹೆಬ್ಬಾಳಕರ್ ರವರು ನಮ್ಮನು ದೈಹಿಕವಾಗಿ ನಮ್ಮಿಂದ ಅಗಲಿದ್ದಾರೆ ಆದರೆ ಸಾಹಿತ್ಯದ ಮೂಲಕ ನಮ್ಮ ಮಧ್ಯವೆ ಇದ್ದಾರೆ ಎಂದು ನುಡಿದರು

ಮುಖ್ಯ ಅತಿಥಿಗಳಾದ ಸಾಹಿತಿ ಪೆÇ್ರ ಮುಯೂರ ಬಸವರಾಜ ರವರು ಮಾತನಾಡಿ ಚಂದ್ರಪ್ಪಾ ಹೆಬ್ಬಾಳಕರ್ ಬುಧ್ದ ಬಸವ ಅಂಬೇಡ್ಕರ್ ರವರ ಅನುಯಾಯಿಗಳಾಗಿದರು ಬೀದರನಲ್ಲಿ ಜರುಗಿದ್ದ 72 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮೇಳನದಲ್ಲಿ ಬೌದ್ಧ ಸಾಹಿತ್ಯ ಗೋಷ್ಠಿ ಆಯೋಜಿಸಲು ಆಯೋಜಕರಿಗೆ ಒತ್ತಾಯಿಸಿದ್ದರು ಸದಾ ಸತ್ಯದ ಪರ ಒಲುವು ತೋರುತ್ತಿದ್ದರು ಸಾಹಿತ್ಯ ಓದುಗರನ್ನು , ಮತ್ತು ಬರೆಯುವರನ್ನು ಪೆÇ್ರೀತ್ಸಾಹಿಸುವ ಕಾರ್ಯವಾಗಬೇಕಾಗಿದೆ ಎಂದು ತಿಳಿಸುತ್ತಿದ್ದರು ಎಂದು ಅವರ ಸಾಹಿತ್ಯಭಿರುಚ್ಚಿಯನ್ನು ಮೆಲುಕು ಹಾಕಿದರು

ಮುಖ್ಯ ಅತಿಥಿ ಸಾಹಿತಿಗಳಾದ ಎನ್.ಬಿ.ರೇಣುಕಾ ರವರು ಮಾತನಾಡಿ ಚಂದ್ರಪ್ಪಾ ಹೆಬ್ಬಾಳಕರ್ ರವರು ಪರೋಪಕಾರಿ ಯಾಗಿದರು ನನ್ನಂತಹ ನೂರಾರು ಜನರನ್ನು ಸಾಹಿತಿಗಳಾನ್ನಾಗಿ ರೂಪಿಸಿದ್ದಾರೆ ಸದಾ ಸಕಾರಾತ್ಮಕ ಚಿಂತನೆ ಮಾಡುವ ಹೆಬ್ಬಾಳಕರ್ ರವರು ನಕಾರಾತ್ಮಕ ಶಬ್ದದ ವಿರೋಧಿಯಾಗಿದರು ತುಂಬಾ ಜನರಿಗೆ ಸಹಾಯ ಮಾಡಿದಾರೆ ಆದರೆ ಯಾವತ್ತು ಪ್ರಚಾರ ಬಯಸಿದವರಲ್ಲ ಎಂದರು

ಸಾಹಿತಿ ಭಾರತಿ ವಸ್ತ್ರದ ರವರು ಮಾತನಾಡಿದರು ಕಸಾಪ ತಾಲೂಕಾಧ್ಯಕ್ಷ ಎಂ.ಎಸ್.ಮನೋಹರ್ ಅಧ್ಯಕ್ಷತೆ ಸಾಹಿತಿಗಳಾದ ನಿರಂಹಕಾರ ಬಂಡಿ, ವಿಜಯಕುಮಾರ ಗೌರೆ, ಎಂ.ಜಿ.ಗಂಗನಪಳ್ಳಿ,ಸಾಧನಾ ರಂಜೋಕರ್, ಪುಷ್ಪ ಕನಕ, ಚೆನ್ನಮ್ಮಾ ವಲ್ಲೆಪೂರ,ಮಾಣಿಕ ನೆಳಗಿ,ಜಗದೇವಿ ದುಬಲಗುಂಡೆ, ಮಂಗಲಾ ಪಾಟೀಲ್, ಸುನೀತಾ ದಾಡಗೆ, ಶಾಂತಮ್ಮಾ ಬಲ್ಲೂರೆ ಹಾಗೂ ಶಿವಶಂಕರ ಟೋಕರೆ ರವರು ದಿ.ಚಂದ್ರಪ್ಪಾ ಹೆಬ್ಬಾಳಕರ್ ರವರ ಕುರಿತು ಕವನವಾಚನ ಮಾಡಿದರು

ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿಗಳಾದ ಎಸ್.ಎಂ.ಜನವಾಡಕರ್, ಭಿಮಶಾ ನಾಟೇಕರ್, ನಾಗೇಂದ್ರ ಸಿಂಗೋಡೆ, ಎಂ.ಪಿ.ಮುದಾಳೆ, ಓಂಪ್ರಕಾಶ ದಡ್ಡೆ, ಅಶೋಕ ದಿಡಗೆ,ಅಜೀತ ನೆಳ್ಗೆ, ಶಿವಕುಮಾರ ಚನ್ನಶೆಟ್ಟಿ, ಗೋವಿಂದ ಪೂಜಾರಿ ಇನಿತರರು ಉಪಸ್ಥಿತರಿದ್ದರು

ಶಂಭುಲಿಂಗ ವಾಲ್ದೋಡ್ಡಿ ಪ್ರಾಸ್ತಾವಿಕ ಮಾತನಾಡಿದರು ,ಕಲಾಲ್ ದೇವಿಪ್ರಸಾದ ಸ್ವಾಗತಿಸಿದರು,,ಮಹೇಶ ಗೋರನಾಳಕರ್ ನಿರೂಪಿಸಿದರು , ಜಗನಾಥ ಕಮಲಾಪೂರೆ ವಂದಿಸಿದರು.