ಚಂದ್ರನ ಮೇಲೆ ನೀರು ಬಹಿರಂಗ

ಪ್ಯಾರೀಸ್,ಅ.೨೭- ಈ ಹಿಂದೆ ಯೋಚಿಸಿದಕ್ಕಿಂತಲೂ ಚಂದ್ರನ ಮೇಲ್ಮೈನಲ್ಲಿ ಹೆಚ್ಚು ನೀರು ಇರಬಹುದು ಎಂಬ ಅಂಶ ಎರಡು ಅಧ್ಯಯನಗಳಿಂದ ತಿಳಿದು ಬಂದಿದೆ.
ಭವಿಷ್ಯದ ಬಾಹ್ಯಾಕಾಶ ಯಾತ್ರೆಗಳಲ್ಲಿನ ಗಗನ ಯಾತ್ರಿಗಳು ಚಂದ್ರನ ಮೇಲ್ಮೈಯಲ್ಲಿ ಉಲ್ಲಾಸ ಕಂಡುಕೊಳ್ಳಬಹುದು ಬಹುಶಃ ಇಂಧನವನ್ನೂ ಸಹ ಪಡೆಯಬಹುದಾಗಿದೆ ಎಂದು ಅಧ್ಯಯನ ತಿಳಿಸಿದೆ.
ಒಂದು ದಶಕದ ಹಿಂದೆ ಚಂದ್ರನ ಮೇಲ್ಮೈಂiiಲ್ಲಿ ಸಿಕ್ಕಿಹಾಕಿಕೊಂಡ ನೀರಿನ ಕುರುಹುಗಳನ್ನು ಹೊಂದಿದ್ದಾರೆಂಬ ಬಗ್ಗೆ ಸರಣಿ ಸಂಶೋಧನೆಗಳು ಸೂಚಿಸುವತನಕ ಚಂದ್ರನ ಮೇಲ್ಮೈ ಒಣಗಿತ್ತು ಎಂದು ನಂಬಲಾಗಿತ್ತು. ಆದರೆ. ಈಗ ಚಂದ್ರನ ಮೇಲೆ ಹೆಚ್ಚು ನೀರು ಇರಬಹುದು ಎಂದು ವಿಜ್ಞಾನಿಗಳು ನಡೆಸಿದ ಅಧ್ಯಯನದಿಂದ ಬೆಳಕಿಗೆ ಬಂದಿದೆ.
ನೈಸರ್ಗಿಕ ಖಗೋಳ ವಿಜ್ಞಾನದಲ್ಲಿ ನಿನ್ನೆ ಪ್ರಕಟವಾದ ಎರಡು ಹೊಸ ಅಧ್ಯಯನಗಳು ಚಂದ್ರನ ಧೃವ ಪ್ರದೇಶಗಳಲ್ಲಿ ಶಾಶ್ವತವಾಗಿ ನೆರಳಿನ ಶೀತ ಬಲೆಗಳಲ್ಲಿ ಸಂಗ್ರಹವಾಗಿರುವ ಮಂಜು ಸೇರಿದಂತೆ ಈ ಹಿಂದೆ ಯೋಚಿಸಿದ್ದಕ್ಕಿಂತ ಹೆಚ್ಚಿನ ನೀರು ಇರಬಹುದೆಂದು ಸೂಚಿಸುತ್ತದೆ.
ಹಿಂದಿನ ಸಂಶೋಧನೆಯು ಮೇಲ್ಮೈಯನ್ನು ಸ್ಕ್ಯಾನ್ ಮಾಡುವ ಮೂಲಕ ಚಂದ್ರನಲ್ಲಿ ನೀರಿರುವ ಸೂಚನೆಗಳನ್ನು ಕಂಡು ಹಿಡಿದಿದೆ. ಆದರೆ, ಇವುಗಳು ನೀರು ಮತ್ತು ಹೈಡ್ರಾಕ್ಸಿನ್ ಒಂದು ಪರಮಾಣು ಮತ್ತು ಆಮ್ಲಜನಕ ಪರಮಾಣುವಿನಿಂದ ಮಾಡಲ್ಪಟ್ಟ ಅಣುವಿನ ನಡುವೆ ವ್ಯತ್ಯಾಸವನ್ನು ಕಂಡು ಹಿಡಿಯಲು ಸಾಧ್ಯವಾಗಿರಲಿಲ್ಲ.
ಈಗ ಹೊಸ ಅಧ್ಯಯನವು ಸೂರ್ಯನ ಬೆಳಕು ಪ್ರದೇಶಗಳಲ್ಲಿಯೂ ಸಹ ಚಂದ್ರನು ನೀರನ್ನು ಹಿಡಿದಿಟ್ಟುಕೊಳ್ಳುತ್ತಾನೆ ಎಂಬುದಕ್ಕೆ ಸಿಕ್ಕಿರುವ ಮತ್ತಷ್ಟು ರಾಸಾಯನಿಕ ಪುರಾವೆಗಳನ್ನು ಒದಗಸಿವೆ ಎಂದು ಹವಾಯಿ, ಭೌಗೋಳಿಕ ಮತ್ತು ಗ್ರಹಗಳ ಮೇಲೆ ಅಧ್ಯಯನ ನಡೆಸಿರುವ ಸಹ ಲೇಖಕ ಕೆ.ಸಿ. ಪೊನ್ನಿಬಾಲ್ ತಿಳಿಸಿದ್ದಾರೆ.
ನೀರು ಗಾಜಿನ ಮಣಿಗಳಲ್ಲಿ ಸಿಕ್ಕಿಹಾಕಿಕೊಳ್ಳಬಹುದು ಅಥವಾ ಕಠಿಣವಾದ ಚಂದ್ರನ ವಾತಾವರಣದಿಂದ ಅದನ್ನು ರಕ್ಷಿಸುವ ಮತ್ತೊಂದು ವಸ್ತುವಾಗಿದೆ ಎಂದು ಸಂಶೋಧಕರು ನಂಬಿದ್ದಾರೆ ಎಂದು ಅವರು ಹೇಳಿದರು.