ಬೆಂಗಳೂರು ಜು. 14- ಚಂದ್ರಯಾನ – 3 ಯಶಸ್ವಿ ಉಡಾವಣೆಯ ಮೂಲಕ ಭಾರತೀಯ ಬಾಹ್ಯಾಕಾಶ ಸಂಶೋದನಾ ಸಂಸ್ಥೆ ಹೊಸ ಮೈಲಿಗಲ್ಲು ಸ್ಥಾಪಿಸಿದೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್ ಎಸ್ ಬೋಸರಾಜ್ ಪ್ರಶಂಸಿಸಿದ್ದಾರೆ.
ಚಂದ್ರನ ಅನ್ವೇಷಣೆಯಲ್ಲಿ ವಿಶ್ವದಲ್ಲೇ ಮತ್ತೊಂದು ವಿಶಿಷ್ಟ ಮೈಲುಗಲ್ಲು ಇದಾಗಿದೆ ಎಂದು ಖುಷಿ ವಿಜ್ಞಾನಿಗಳ ಸಾಧನೆಯನ್ನು ಹಾಡಿ ಹೊಗಳಿಸಿದ್ದಾರೆ.
ಚಂದ್ರಯಾನ – 3 ರ ಯಶಸ್ಬಿ ಉಡಾವಣೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು ನಿರಂತರ ಹೊಸ ಆವಿಷ್ಕಾರಗಳು ಮತ್ತು ಸಂಶೋಧನೆಯ ಮೂಲಕ ಬಾಹ್ಯಾಕಾಶ ಪರಿಶೋಧನೆಯಲ್ಲಿ ಭಾರತ ದೇಶ ವಿಶ್ವದಲ್ಲೇ ಮುಂಚೂಣಿ ಸ್ಥಾನ ಹೊಂದುವಲ್ಲಿ ಇಸ್ರೋ ಕೊಡುಗೆ ಅಪಾರ ಎಂದು ಬಣ್ಣಿಸಿದ್ದಾರೆ.
ಚಂದ್ರಯಾನ – 1 ಮತ್ತು 2 ರ ಯಶಸ್ವಿ ಕಾರ್ಯಾಚರಣೆ ಗಳಿಂದ ಇಸ್ರೋ ಸಂಸ್ಥೆ ಬಾಹ್ಯಾಕಾಶ ಕ್ಷೇತ್ರದಲ್ಲಿ ದೊಡ್ಡ ಕನಸನ್ನು ಕಾಣಲು ಅನುವು ಮಾಡಿಕೊಟ್ಟಿದೆ. ಇಂದಿನ ಈ ಯಶಸ್ವಿ ಕಾರ್ಯಾಚರಣೆ ವಿಶ್ವದ ಚಂದ್ರನ ಅನ್ವೇಷಣೆಯ ಕ್ಷೇತ್ರದಲ್ಲಿ ವಿಶೇಷ ಮೈಲುಗಲ್ಲನ್ನು ಸಾಧಿಸಿದೆ. ಮುಂದಿನ ದಿನಗಳಲ್ಲಿ ಚಂದ್ರನ ಮಣ್ಣಿನ ಮಾದರಿಗಳನ್ನು ಸಮರ್ಥವಾಗಿ ಮರಳಿ ತರುವ ಮೂಲಕ, ಚಂದ್ರನ ಮೇಲ್ಮೈ ನ ನಮ್ಮ ತಿಳುವಳಿಕೆಯನ್ನು ವಿಸ್ತರಿಸುವ ನಿಟ್ಟಿನಲ್ಲಿ ವೈಜ್ಞಾನಿಕ ಪ್ರಯೋಗಗಳನ್ನು ನಡೆಸಲು ಅನುವು ಮಾಡಿ ಕೊಡಲಿದೆ ಎಂದಿದ್ದಾರೆ.
ಚಂದ್ರಯಾನ – 3 ರ ಯಶಸ್ಸನ್ನು ಖಾತರಿಪಡಿಸುವ ನಿಟ್ಟಿನಲ್ಲಿ ಇಸ್ರೋ ವಿಜ್ಞಾನಿಗಳು ಕೈಗೊಂಡ ತಾಂತ್ರಿಕ ಪ್ರಗತಿ ಮತ್ತು ಅಂತರರಾಷ್ಟ್ರೀಯ ಸಹಯೋಗಗಳು ಶ್ಲಾಘನೀಯ. ಇಂತಹ ಬದ್ಧತೆ ಮತ್ತು ನಿರಂತರ ಸಾಧನೆ ಭಾರತ ದೇಶವನ್ನು ಬಾಹ್ಯಾಕಾಶ ಕ್ಷೇತ್ರದಲ್ಲಿ ತನ್ನದೇ ಆದ ವಿಶೇಷ ಸ್ಥಾನ ಪಡೆದುಕೊಳ್ಳಲು ಅನುವು ಮಾಡಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.