ಚಂದ್ರನ ಅಂಗಳದಲ್ಲಿ ಖನಿಜ ಪತ್ತೆಗೆ ಅವಕಾಶ

ವಾಷಿಂಗ್ಟನ್, ಸೆ.೧೧- ಚಂದ್ರನ ಅಂಗಳದಲ್ಲಿರುವ ಖನಿಜ ಸಂಪನ್ಮೂಲಗಳನ್ನು ಪತ್ತೆಹಚ್ಚಲು ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ- ನಾಸಾ ಖಾಸಗಿ ಕಂಪನಿಗಳಿಗೆ ಅವಕಾಶ ಮಾಡಿಕೊಟ್ಟಿದೆ.
ಚಂದ್ರನ ಗ್ರಹದಲ್ಲಿರುವ ಖನಿಜಗಳನ್ನು ಪತ್ತೆಮಾಡಿ ತರಲು ಖಾಸಗಿ ಕಂಪನಿಗಳಿಗೆ ಅವಕಾಶ ಮಾಡಿಕೊಳ್ಳಲಾಗುತ್ತಿದೆ ಎಂದು ನಾಸಾ ತಿಳಿಸಿದೆ
೧೯೬೭ ರ ಒಪ್ಪಂದ ವನ್ನು ಯಾವುದೇ ಕಾರಣಕ್ಕೂ ಉಲ್ಲಂಘನೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ನಾಸಾದ ಆಡಳಿತಾಧಿಕಾರಿ ಜಿಮ್ ಬ್ರಿಡೇನ್ ಸ್ಡೀವ್ ಹೇಳಿದ್ದಾರೆ.
ಚಂದ್ರನಲ್ಲಿರುವ ಕನಿಜ ಅಂಶಗಳನ್ನು ಪತ್ತೆ ಮಾಡಲು ರೋಬೋಗಳನ್ನು ಕಳಿಸುವ ಸಂಬಂಧ ಖಾಸಗಿ ಸಂಸ್ಥೆಗಳ ಜೊತೆ ಮಾತುಕತೆ ನಡೆಯುತ್ತಿದೆ ಅವರಿಗೆ ಈ ಸಂಬಂಧ ಅವಕಾಶವನ್ನು ಮಾಡಿಕೊಡಲಾಗಿದೆ ಆಸಕ್ತಿ ಉಳ್ಳವರು ಮುಂದೆ ಬರಬಹುದು ಎಂದು ನಾಸಾದ ಆಡಳಿತ ಅಧಿಕಾರಿ ಹೇಳಿದ್ದಾರೆ.
ಚಂದ್ರನಲ್ಲಿ ಖನಿಜಾಂಶಗಳನ್ನು ಪತ್ತೆ ಮಾಡುವುದರಿಂದ ಭವಿಷ್ಯದ ಯೋಜನೆಗಳಿಗೆ ಹಾಗೂ ಖಗೋಳಶಾಸ್ತ್ರಜ್ಞರಿಗೆ ಮುಂದಿನ ಅಧ್ಯಯನ ಮಾಡಲು ನೆರವಾಗಲಿದೆ ಎಲ್ಲ ಬೆಳವಣಿಗೆಯಲ್ಲಿ ಅಂಗಳದಲ್ಲಿರುವ ಖನಿಜ ಪತ್ತೆಗೆ ಮುಂದಾಗಿರುವುದಾಗಿ ತಿಳಿಸಿದ್ದಾರೆ.
ಚಂದ್ರ ಗ್ರಹಕ್ಕೆ ೨೦೨೪ರ ವೇಳೆಗೆ ಮಾನವರನ್ನು ಕಳುಹಿಸಬೇಕು ಎನ್ನುವ ಉದ್ದೇಶವನ್ನು ದಾಸ ಹೊಂದಿದೆ ಅದರ ಭಾಗವಾಗಿ ಅಮೆರಿಕ ಅಧ್ಯಕ್ಷ ಟ್ರಂಪ್ ಇಂತಹದೊಂದು ಯೋಜನೆಯನ್ನು ಹೊಂದಿದೆ.
ಚಂದ್ರ ಗ್ರಹಕ್ಕೆ ಮಾನವಸಹಿತ ನೌಕೆಯನ್ನು ಕಳಿಸಲು ಅಮೆರಿಕ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಈಗಾಗಲೇ ಮುಂದಾಗಿದ್ದು ಅದರ ಭಾಗವಾಗಿ ಚಂದ್ರನ ಅಂಗಳದಲ್ಲಿರುವ ಖನಿಜಗಳನ್ನು ಪತ್ತೆ ಮಾಡಿ ಅದನ್ನು ಬಳಸಿಕೊಳ್ಳಲು ಸೂಕ್ತವೇ ಇಲ್ಲವೇ ಎನ್ನುವುದನ್ನು ಅಧ್ಯಯನ ಮಾಡಲು ನಿರ್ಧರಿಸಿದೆ