ಚಂದ್ರಗುತ್ತೆಮ್ಮ ದೇವಿ ಜಾತ್ರಾ ಮಹೋತ್ಸವ

ಬ್ಯಾಡಗಿ,ಮಾ23: ಪಟ್ಟಣದ ಶ್ರೀಚಂದ್ರಗುತ್ತೆಮ್ಮ ದೇವಿಯ ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀದೇವಿಯ ಮೂರ್ತಿಯ ಮೆರವಣಿಗೆಯು ಸೋಮವಾರದಂದು ನೂರಾರು ಭಕ್ತರ ಹರ್ಷೋದ್ಗಾರದೊಂದಿಗೆ ಬಹುವಿಜೃಂಭಣೆಯಿಂದ ಜರುಗಿತು..
ಅಂದು ಸಂಜೆ ನೆಹರೂ ನಗರದ ಶ್ರೀಸೋಮೇಶ್ವರ ದೇವಸ್ಥಾನದಿಂದ ಪ್ರಾರಂಭಗೊಂಡ ಶ್ರೀದೇವಿಯ ಮೆರವಣಿಗೆಯು ಸಕಲ ವಾದ್ಯವೃಂದ, ವೈಭವಗಳೊಂದಿಗೆ ಪಟ್ಟಣದ ಮುಖ್ಯರಸ್ತೆಯ ಮೂಲಕ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ದೇವಿಯ ಜಾತ್ರಾ ಮಂಟಪವನ್ನು ತಲುಪಿದ ನಂತರ ಹೂವಿನ ತೇರು ಹಾಗೂ ಪ್ರಸಾದ ವಿತರಣೆ ಕಾರ್ಯಕ್ರಮ ಜರುಗಿತು.
ಇಂದು ರಾತ್ರಿ 8ಗಂಟೆಗೆ ದೊಡ್ಡ ರಥೋತ್ಸವ..!!
ಇಂದು ಸಂಜೆ 4ಗಂಟೆಗೆ ಪಾಲಕಿ ಉತ್ಸವವು ವೈಭವದಿಂದ ಅಗಸನಹಳ್ಳಿಯವರೆಗೆ ಹೋಗಿ ಬರುವುದು. ರಾತ್ರಿ 8ಗಂಟೆಗೆ ದೊಡ್ಡ ರಥೋತ್ಸವವು ಶ್ರೀದೇವಿಯ ದೇವಸ್ಥಾನದಿಂದ ಬಹುವಿಜೃಂಭಣೆಯಿಂದ ಹೊರಟು ನಗರದಲ್ಲಿ ಸಂಚರಿಸುವುದು. ನಂತರ ಪ್ರಸಾದ ವಿತರಣೆ ನಡೆಯುವುದು. ದಿ. 24 ರಂದು ಬೆಳಿಗ್ಗೆ 8 ಗಂಟೆಗೆ ಓಕಳಿಯು ನಡೆಯಲಿದೆ.