ಚಂದ್ರಗಿರಿ ಗ್ರಾ.ಪಂ. ಅಧ್ಯಕ್ಷರಾಗಿ ನರಸಿಂಹಯ್ಯ ಅವಿರೋಧ ಆಯ್ಕೆ

ಮಧುಗಿರಿ, ಜೂ. ೨೪- ತಾಲ್ಲೂಕಿನ ದೊಡ್ಡೇರಿ ಹೋಬಳಿಯ ಚಂದ್ರಗಿರಿ ಗ್ರಾಮ ಪಂಚಾಯ್ತಿಯ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಮಲ್ಲೇನಹಳ್ಳಿ ಗ್ರಾಮದ ಕಾಂಗ್ರೆಸ್ ಬೆಂಬಲಿತ ಸದಸ್ಯ ನರಸಿಂಹಯ್ಯ ನವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈ ಹಿಂದೆ ಅಧ್ಯಕ್ಷರಾಗಿದ್ದ ಭಾಗ್ಯಮ್ಮ ತಿಮ್ಮಯ್ಯ ರವರು ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಪರಿಶಿಷ್ಟ ಸಮುದಾಯಕ್ಕೆ ಮೀಸಲಾಗಿದ್ದ ಸ್ಥಾನಕ್ಕೆ ಚುನಾವಣೆ ನಡೆದಿದ್ದು ಇವರ ವಿರುದ್ಧ ಯಾವೊಬ್ಬ ಸದಸ್ಯರು ನಾಮಪತ್ರ ಸಲ್ಲಿಸದ ಕಾರಣ ನರಸಿಂಹಯ್ಯನವರು ಉಳಿಕೆಯ ಅವಧಿಗೆ ಅಧ್ಯಕ್ಷರಾಗಿ ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆಯಾಗಿದ್ದು ಚುನಾವಣಾದಿ ಕಾರಿ ಯಾಗಿ ತಹಶೀಲ್ದಾರ್ ಸಿಗಬತ್ ವುಲ್ಲಾ ರವರು ಕಾರ್ಯ ನಿರ್ವಹಿಸಿದರು.
ಈ ಸಂದರ್ಭದಲ್ಲಿ ಗ್ರಾ.ಪಂ. ಸದಸ್ಯರಾದ ಲಕ್ಷ್ಮೀನಾರಾಯಣ್, ವನಜಾಕ್ಷಿ , ರೇಣುಕಮ್ಮ , ಚಿಕ್ಕತಾಯಮ್ಮ, ರಾಜಮ್ಮ, ಈರಮ್ಮ, ಕವಿತ, ಭಾಗ್ಯಮ್ಮ, ಪಿ.ಆರ್. ರವಿ, ತಿಮ್ಮಯ್ಯ, ಶ್ರೀನಿವಾಸ್, ರಂಗಶ್ಯಾಮಯ್ಯ, ಪಿಡಿಓ ಗೋಪಾಲಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.