ಚಂದ್ರಕಾಂತ ಪಾಟೀಲ ಕಾಲೇಜಿಗೆ ಅತ್ಯುತ್ತಮ ಫಲಿತಾಂಶ: ಡಾ.ಬಿ.ಜಿ.ಪಾಟೀಲ ಸಂತಸ

ಕಲಬುರಗಿ,ಏ,11-ನಗರದ ಚಂದ್ರಕಾಂತ ಪಾಟೀಲ ವಿಜ್ಞಾನ ಮತ್ತು ವಾಣಿಜ್ಯ ಪಿಯು ಕಾಲೇಜಿಗೆ ಈ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಫಲಿತಾಂಶ ಲಭಿಸಿರುವುದಕ್ಕೆ ಸಂಸ್ಥೆಯ ಅಧ್ಯಕ್ಷರೂ ಆದ ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ ಅವರು ಸಂತಸ ವ್ಯಕ್ತಪಡಿಸಿದ್ದಾರೆ.
ವಿಜ್ಞಾನ ವಿಭಾಗದಲ್ಲಿ 46 ವಿದ್ಯಾಥಿಗಳು ಅಗ್ರಶ್ರೇಣಿಯಲ್ಲಿ, 293 ವಿದ್ಯಾರ್ಥಿಗಳು ಪ್ರಥಮ ದರ್ಜೆ, 47 ದ್ವಿತೀಯ ದರ್ಜೆ ಮತ್ತು 2 ವಿದ್ಯಾರ್ಥಿಗಳು ಉತ್ತೀರ್ಣರಾಗಿರುವುದಕ್ಕೆ, ವಾಣಿಜ್ಯ ವಿಭಾಗದಲ್ಲಿ 11 ವಿದ್ಯಾಥಿಗಳು ಅಗ್ರಶ್ರೇಣಿಯಲ್ಲಿ, 51ವಿದ್ಯಾರ್ಥಿಗಳು ಪ್ರಥಮ ದರ್ಜೆ, 17ದ್ವಿತೀಯ ದರ್ಜೆ ಮತ್ತು 4 ವಿದ್ಯಾರ್ಥಿಗಳು ಉತ್ತೀರ್ಣರಾಗಿರುವುದಕ್ಕೆ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ವಿದ್ಯಾರ್ಥಿಗಳಾದ ಅವಿನಾಶ ಮತ್ತು ರಿಯಾ ಅವರು ಶೇ 95.5 ಅಂಕ ಪಡೆದು, ವಾಣಿಜ್ಯ ವಿಭಾಗದಲ್ಲಿ ವಿದ್ಯಾರ್ಥಿನಿ ತಹೆರಾಬೇಗಂ ಶೇ 93.50 ಅಂಕ ಪಡೆದು ಕಾಲೇಜಿಗೆ ಟಾಪರ್ ಆಗಿರುವುದಕ್ಕೆ ಅವರು ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.
ಉಪನ್ಯಾಸಕರ ವಿನೂತನ ರೀತಿಯ ಬೋಧನೆಯ ಶೈಲಿ ಮತ್ತು ವಿದ್ಯಾರ್ಥಿಗಳ ಸತತ ಪರಿಶ್ರಮದಿಂದ ದ್ವಿತೀಯ ಪಿಯುಸಿಯಲ್ಲಿ ಕಾಲೇಜಿಗೆ ಅತ್ಯುತ್ತಮ ಫಲಿತಾಂಶ ಲಭಿಸಿದೆ. ನಿರಂತರ ಪರೀಕ್ಷೆಗಳನ್ನು ನಡೆಸಿ ಉಪನ್ಯಾಸಕರು ಮಕ್ಕಳಲ್ಲಿನ ಪರೀಕ್ಷೆಯ ಭಯ ಹೋಗಲಾಡಿಸಿರುವಲ್ಲಿ ಯಶಸ್ವಿಯಾಗಿದ್ದಾರೆ. ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ತೋರಿದ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಲಿ ಎಂದು ಅವರು ಶುಭ ಹಾರೈಸಿದ್ದಾರೆ.