ಕಲಬುರಗಿ,ಜೂ 10: ನಗರದ ಪ್ರತಿಷ್ಠಿತ ಚಂದ್ರಕಾಂತ ಪಾಟೀಲ್ ಆಂಗ್ಲ ಮಾಧ್ಯಮ ಶಾಲೆಯು ಜೂನ್ 8 ಗುರುವಾರದಂದು ಪ್ರಸಕ್ತ 2023-24 ರ ಸಾಲಿನ ಎಲ್.ಕೆÉ.ಜಿ. ಮತ್ತು ಯು.ಕೆ.ಜಿ. ಮಕ್ಕಳನ್ನು ಶಾಲೆಗೆ ಸಂತೋಷದಿಂದ ಬರಮಾಡಿಕೊಂಡಿತು.
ನಗರದಲ್ಲಿ ಚಂದ್ರಕಾಂತ ಪಾಟೀಲ್ ಆಂಗ್ಲ ಮಾಧ್ಯಮ ಶಾಲೆಯು ಒಳ್ಳೆಯ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಶಾಲೆಯಾಗಿದ್ದು, ರಾಷ್ಟ್ರೀಯ ಶಿಕ್ಷಣ ನೀತಿಯನ್ನು ( ಎನ್ ಇ ಪಿ) ಅಳವಡಿಸಿಕೊಳ್ಳಲು ಒಂದು ಹೆಜ್ಜೆ ಮುಂದೆ ಇಟ್ಟಿದೆ. ಚಟುವಟಿಕೆ ಆಧಾರಿತ ಬೋಧನೆಗಾಗಿ ಈ ಶಿಕ್ಷಣ ಸಂಸ್ಥೆಯು ಶಿಕ್ಷಕರಿಗಾಗಿ ಬೆಂಗಳೂರು ಮತ್ತು ಹೈದ್ರಾಬಾದನ ವೃತ್ತಿಪರ ಮಾರ್ಗದರ್ಶಕರುಗಳಿಂದ ಶಿಕ್ಷಣ ಕಲಿಕಾ ಶಾಸ್ತ್ರದಲ್ಲಿ, ನವೀನ ಬೋಧನಾ ವಿಧಾನಗಳಲ್ಲಿ ತರಬೇತಿಯು ನೀಡಿದೆ. ಅದೇ ರೀತಿ ಮಕ್ಕಳಲ್ಲಿ ಸೃಜನಶೀಲತೆ ಮತ್ತು ವಿಶ್ಲೇಷಣಾತ್ಮಕ ಕೌಶಲ್ಯಗಳನ್ನು ವೃದ್ಧಿಸುವ ನಿಟ್ಟಿನಲ್ಲಿ ವೇಳಾಪಟ್ಟಿಯನ್ನು, ಶಿಕ್ಷಕರಿಂದ ಶೈಕ್ಷಣಿಕ ವರ್ಷದ ಯೋಜನೆಯನ್ನು ಸಿದ್ಧಪಡಿಸಿಕೊಂಡಿದೆ. “ಶಾಲೆಯು ಭವಿಷ್ಯದ ಉತ್ತಮ ಪ್ರಜೆಗಳನ್ನು ಸೃಷ್ಟಿಸುತ್ತಿದೆ” ಎಂದು ಸಂಸ್ಥೆಯ ಅಧ್ಯಕ್ಷರಾದ ಎಂಎಲ್‍ಸಿ ಡಾ. ಬಿ.ಜಿ.ಪಾಟೀಲ್, ವ್ಯವಸ್ಥಾಪಕ ನಿರ್ದೇಶಕರಾದ ಚಂದ್ರಕಾಂತ ಬಿ. ಪಾಟೀಲ್ ಮತ್ತು ಎಸ್.ಬಿ. ಪಾಟೀಲ್ ಸಮೂಹ ಸಂಸ್ಥೆ ನಿರ್ದೇಶಕರಾದ ಡಾ. ಕೈಲಾಸ ಬಿ. ಪಾಟೀಲ್, ಪ್ರಾಂಶುಪಾಲರಾದ ಕೆ.ರವಿಕುಮಾರ ಹಾಗೂ ಸಿಬ್ಬಂದಿ ವರ್ಗದವರು ತಿಳಿಸಿ ಹರ್ಷ ವ್ಯಕ್ತಪಡಿಸಿದ್ದಾರೆ.