ಚಂದ್ರಕಲಾ ಆಲ್ಕೋಡ್‌ಗೆ ಚಿನ್ನದ ಪದಕ

ದೇವದುರ್ಗ.ನ.೧೧-ಸಮೀಪದ ಆಲ್ಕೋಡ್ ಗ್ರಾಮದ ಚಂದ್ರಕಲಾ ಆಲ್ಕೋಡ್‌ಗೆ ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಚಿನ್ನದ ಪದಕ ನೀಡಿ ಗೌರವಿಸಿದೆ. ವಿಜಯಪುರದಲ್ಲಿ ನಡೆದ ೧೧ನೇ ವಾರ್ಷಿಕ ಘಟಕೋತ್ಸವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಅಧ್ಯಯನ, ಮಹಿಳಾ ಅಧ್ಯಯನ ವಿಭಾಗದಲ್ಲಿ ಪ್ರಥಮ ರ್‍ಯಾಂಕ್ ಪಡೆದಿದ್ದಾರೆ.