ಚಂದಾಪೂರ: ನಿಂತ ಮಳೆ ನೀರು ದುರ್ವಾಸನೆಗೆ ಬೆಸತ್ತ ಜನರು

ಚಿಂಚೋಳಿ.ಜು.23- ಪುರಸಭೆ ವ್ಯಾಪ್ತಿಯ ಚಂದಾಪೂರ ಕಾಲೋನಿಯ ಇಲ್ಲಿಯ ವಿವಿಧ ಬಡಾವಣೆಗಳಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದ ತಗ್ಗು ಪ್ರದೇಶಗಳಲ್ಲಿ ಮಳೆ ನೀರು ನಿಂತು ಗಬೇದ್ದು ವಾಸನೆ ಬರುತ್ತಿದೆ. ಅಲ್ಲದೆ ಎಲ್ಲಾ ಚರಂಡಿಗಳು ಕಸಕಡ್ಡಿಯಿಂದ ತುಂಬಿ ಆ ನಾಲೆಗಳ ನೀರು ನಿಂತು ಸುತ್ತಲಿನ ಮನೆಗಳಿಗೆ ನುಗ್ಗುತ್ತಿವೆ.
ಈ ಬಗ್ಗೆ ಸಮಾಜ ಜಾಗೃಣ ಮಂಚ್ ಸಂಚಾಲಕರಾದ ರಮೇಶ ಯಾಕಾಪೂರ, ಅವರು, ಪುರ ಸಭೆಯ ಅಧ್ಯಕ್ಷರನ್ನು, ವಾರ್ಡ್ ಚುನಾಯಿತ ಸದಸ್ಯರಿಗೆ ಹಾಗೂ ಮುಖ್ಯ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದರೂ ಕೂಡ ಯಾವುದೇ ಕ್ರಮ ಕೈಗೊಂಡಿಲ್ಲ.
ನಿಂತ ನೀರಿನ ಕೋಳೆಯಿಂದಾಗಿ ಕಾಲಾರ, ಮತ್ತು ಇತರ ಸಂಕ್ರಾಮಿಕ ರೋಗ ಹರಡುವ ಸಾಧ್ಯತೆವಿರುತ್ತದೆ. ಸೊಳ್ಳೆÉಗಳ ಕಾಟ ಹೆಚ್ಚಾಗಿದ್ದು ಜನರಿಗೆ ಮಲೇರಿಯಾ, ಡಂಗು, ನಿಮೋನಿಯಾ ಜ್ವರ ಭಾಷೆ ಕಾಡುವ ಸಾದ್ಯತೆ ಇದೆ. ಸಂಬಂಧಪಟ್ಟ ಪುರಸಭೆ ಅಧ್ಯಕ್ಷರು, ಮತ್ತು ಸದಸ್ಯರುಗಳ ವಿಶೇಷವಾಗಿ ಪುರಸಭೆ ಮುಖ್ಯ ಅಧಿಕಾರಿಗಳು ಅವರ ಗಮನಹರಿಸಿ ಆದಷ್ಟು ಬೇಗನೆ ಚಿಂಚೋಳಿ ಮತ್ತು ಚಂದಾಪುರ ವಾಡ್ರ್ಗಳಲ್ಲಿ ಸ್ವಚ್ಛತೆಗೊಳಿಸಬೇಕೆಂದು ಅವರು ಆಗ್ರಹಿಸಿದ್ದಾರೆ.