ಚಂದಾಪೂರ: ಜನ ಸಂಪರ್ಕ ಸಭೆ

ಚಿಂಚೋಳಿ,ಜು.21- ತಾಲೂಕಿನ ಚಂದಾಪೂgದÀ ಸಿ.ಬಿ. ಪಾಟೀಲ್ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆ ಮೈಸೂರು, ತಾಲೂಕಾ ಪಂಚಾಯತ್ ಹಾಗೂ ಸರಕಾರಿ ಇಲಾಖೆಗಳ ಸಹಭಾಗಿತ್ವದಲ್ಲಿ ಆಯೋಜಿಸಿದ್ದ “ಜನ ಸಂಪರ್ಕ ಸಭೆ” ಕಾರ್ಯಕ್ರಮಕ್ಕೆ ಶÀರಬಸಪ್ಪಾ ಬೆಳಗುಂಪಿ, ಶಿಶು ಅಭಿವೃದ್ದಿ ಯೋಜನಾಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಚಿಂಚೋಳಿ ಅವರು ಚಾಲನೆ ನೀಡಿದರು.
ವಿವಿಧ ಗ್ರಾಮಗಳಿಂದ ಆಗಮಿಸಿದ ಜನರ ಸಮಸ್ಯೆಗಳ ಅಹವಾಲುಗಳನ್ನು ಸ್ವೀಕರಿಸಿ ಮಾತನಾಡಿದ ಅವರು, ತಮ್ಮ ಇಲಾಖೆಗೆ ಸಂಬಂಧಿಸಿದ ಯಾವೂದೇ ಸಮಸ್ಯೆಗಳು ಇದ್ದರು ಜನರು ನೇರವಾಗಿ ದೂರುಗಳನ್ನು ನಮಗೆ ಸಲ್ಲಿಸಬಹುದು, ನಮ್ಮ ಇಲಾಖೆಯು ಯಾವಾಗಲೂ ಜನರ ಸಮಸ್ಯೆಗಳನ್ನು ಪರಿಹರಿಸಲು ಸದಾ ಸಿದ್ಧವಿರುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ತೆಯನ್ನು ವಹಿಸಿಕ್ಕೊಂಡಿದ್ದ ವಾಯ್. ಎಲ್. ಹಂಪಣ್ಣಾ, ಕಾರ್ಯನಿರ್ವಾಹಕ ಅಧಿüಕಾರಿಗಳು, ತಾಲ್ಲೂಕಾ ಪಂಚಾಯತ್ ವಹಿಸಿದ್ದರು.
ಸಭೆಯಲ್ಲಿ ಹೆಚ್ಚಿನ ಸಮಸ್ಯೆಗಳು ಶಾಲೆಗಳಿಗೆ ಸಂಬಂಧಿಸಿದಂತೆ ಪ್ರಸ್ತಾಪವಾದವು ಮುಖ್ಯವಾಗಿ ಶಾಲೆ ಕೋಣೆಗಳು ಸೋರುವುದು, ಶೌಚಾಲಯದ ಸಮಸ್ಯೆ, ಹೆಣ್ಣು ಮಕ್ಕಳ ಪ್ರತ್ಯೇಕ ಶೌಚಾಲಯ, ಶಿಕ್ಷಕರ ಕೊರತೆ, ಶುದ್ಧ ಕುಡಿಯುವ ನೀರಿನ ಸಮಸ್ಯೆ, ಶಾಲೆ ತಡೆಗೋಡೆ, ಶಾಲಾ ವಠಾರದಲ್ಲಿ ಸಾರ್ವಜನಿಕರು ಬಂದು ಮಧ್ಯಪಾನ ಮತ್ತು ಧೂಮಪಾನ ಮಾಡುವುದು, ಬಿಸಿ ಊಟದ ಅಡುಗೆ ಕೋಣೆ, ಶಾಲೆಗೆ ಹೊಸ ಕಟ್ಟಡ, ಶಿಕ್ಷಕರು ಶಾಲೆಗೆ ತಡವಾಗಿ ಬರುವುದು ಮತ್ತು ತರಗತಿಗಳನ್ನು ಸರಿಯಾಗೆ ನಡೆಸದೆ ಇರುವುದು ಹೀಗೆ ನಾನ ಸಮಸ್ಯೆಗಳನ್ನು ಗ್ರಾಮಸ್ಥರು ವ್ಯಕ್ತಪಡಿಸಿದಾಗ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಹಾಜರಿದ್ದ ವಲಯ ಶಿಕ್ಷಣ ಸಂಪನ್ಮೂಲ ವ್ಯಕ್ತಿ ಯಶವಂತ್ ಇವರು ಮಾತನಾಡುತ್ತಾ ಶಾಲೆಗೆ ಸಂಬಂಧಿಸಿದ ಈ ಸಮಸ್ಯೆಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ಗಮನಕ್ಕೆ ತರುವುದಾಗಿ ಮತ್ತು ಆದಷ್ಟು ಬೇಗ ಇವುಗಳನ್ನು ಪರಿಹಾರ ಮಾಡಿಸುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು ಹಾಗೂ ಗ್ರಾಮ ಮಟ್ಟದಲ್ಲಿ ಆಯಾ ಪಂಚಾಯತ್ ಮತ್ತು ಶಾಲಾ ಮೇಲುಸ್ತುವಾರಿ ಮತ್ತು ಅಭಿವೃದ್ಧಿ ಸಮಿತಿ ಮೂಲಕ ಸಮಸ್ಯೆಗಳನ್ನು ನಿವಾರಣೆ ಮಾಡುವ ನಿಟ್ಟಿನಲ್ಲಿ ಸೂಕ್ತ ನಿರ್ದೇಶನ ನೀಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಹಾಜರಿದ್ದ ಶ್ರೀ.ಇಮ್ರಾನ್ ಅಲಿ, ಕೃಷಿ ಅಧಿಕಾರಿಗಳು, ರೈತ ಸಂಪರ್ಕ ಕೇಂದ್ರ ಇವರು ಮಾತನಾಡುತ್ತಾ ಕೃಷಿ ಇಲಾಖೆಯಿಂದ ರೈತರಿಗೆ ಇರುವ ವಿವಧ ಸೇವೆಗಳು ಮತ್ತು ರೈತರ ಮಕ್ಕಳಿಗೆ ಇರುವ ವಿವಿಧ ವಿದ್ಯಾರ್ಥಿ ವೇತನ ಮತ್ತು ಬೆಳೆ ವಿಮೆ ಕುರಿತು ವಿವರವಾಗಿ ಮಾಹಿತಿಯನ್ನು ನೀಡಿದರು ಹಾಗೂ ರೈತರ ಯಾವೂದೇ ಸಮಸ್ಯೆಗಳು, ಬೆಳೆ ನಷ್ಟ ಹೀಗೆ ಎನೇ ತೊಂದರೆಗಳು ಇದ್ದರು ರೈತರ ಸಹಾಯಕ್ಕೆ ಕೃಷಿ ಇಲಾಖೆ ಸದಾ ಸಿದ್ಧವಿರುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆ ಮೈಸುರು, ಯೋಜನಾ ಸಂಯೋಜಕರಾದ ಸಂಪತ್ ಕಟ್ಟಿ ಇವರು ಪ್ರಾಸ್ಥಾವಿಕ ಮಾತನಾಡಿದರು.
ಸಂಸ್ಥೆಯು ಪ್ರಸ್ತುತ ಚಿಂಚೋಳಿ ತಾಲೂಕಿನ 9 ಗ್ರಾಮ ಪಂಚಾಯ್ತಿ ವ್ಯಾಪ್ತಿಯ 40 ಗ್ರಾಮಗಳಲ್ಲಿ ಕಾರ್ಯನಿರ್ವಹಿಸುತಿದ್ದು, ಕೋವಿಡ್ ನಂತರದ ಸಂದರ್ಭದಲ್ಲಿ ಹೆಚ್ಚಿನ ಮಕ್ಕಳು ನಿರಂತರವಾಗಿ ಶಾಲೆಗೆ ತೆರಳುತ್ತಿಲ್ಲ ಮತ್ತು ಬಾಲಕಾರ್ಮಿಕತೆಗೆ ತುತ್ತಾಗುವ ಸಂದರ್ಭಗಳು ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಸಂಸ್ಥೆಯ ವತಿಯಿಂದ ಮಕ್ಕಳ ಹಕ್ಕುಗಳ ಗುಂಪಿನ ರಚನೆ, ಶಾಲೆ ಬಿಟ್ಟ ಮಕ್ಕಳನ್ನು ಶಾಲೆಗೆ ಸೇರಿಸುವುದು, ಸಂಜೆ ಶಾಲೆಗಳ ಮುಖಾಂತರ ಪೂರಕ ಶಿಕ್ಷಣ, ಪೋಷಕರಿಗೆ ಮತ್ತು ಮಕ್ಕಳಿಗೆ ಶಿಕ್ಷಣ ಕುರಿತು ಜಾಗೃತಿ ನೀಡುವ ಮೂಲಕ ಮಕ್ಕಳನ್ನು ಶಿಕ್ಷಣ ಮುಖ್ಯವಾಹಿನಿಗೆ ತರಲು ನಿರಂತರವಾಗಿ ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಗಿರಿರಾಜು ಕಿರಿಯ ಅಭಿಯಂತರರು, ಲೋಕೋಪಯೋಗಿ ಇಲಾಖೆ ಉಪ ವಿಭಾಗ ಚಿಂಚೋಳಿ, ಶ್ರೀಮತಿ. ಗುರುಬಸಮ್ಮಾ, ಹದಿಹರೆಯದವರ ಆರೋಗ್ಯ ಆಪ್ತ ಸಮಾಲೋಚಕರು, ರಾಷ್ಟ್ರೀಯ ಕಿಶೋರ ಅರೋಗ್ಯ ಸ್ವಾಥ್ಯ ಕಾರ್ಯಕ್ರಮ, ಶ್ರೀಮತಿ.ಸುಮಾ ಗ್ರಾಮ ಲೆಕ್ಕಾಧಿಕಾರಿಗಳು ಚಿಂಚೋಳಿ ಇವರು ಕಾರ್ಯಕ್ರಮದಲ್ಲಿ ಹಾಜರಿದ್ದು ಜನರು ಹೇಳಿರುವ ಸಮಸ್ಯೆಗಳನ್ನು ಶಿಘ್ರವಾಗಿ ಪರಿಹರಿಸುವುದಾಗಿ ತಿಳಿಸಿದರು. ವೇದಿಕೆಯಲ್ಲಿ ಡಾ.ಎಮ್.ಎನ್.ಸುಲ್ತಾನಪೂರ, ಪ್ರಾಂಶುಪಾಲರು, ಸಿ.ಬಿ ಪಾಟೀಲ್ ಕಲಾ ಮತ್ತು ವಾಣಿಜ್ಯ ಕಾಲೇಜು ಮತ್ತು ಶ್ರೀ.ಚಿತ್ರಲೇಖ ಪಾಟೀಲ್, ರಾಜ್ಯ ಸಂಚಾಲಕರು, ಬಿ.ಆರ್.ಎಸ್.ಎಸ್ ಸಂಘ ಚಿಂಚೋಳಿ ಇವರು ಉಪಸ್ಥಿತರಿದ್ದರು.
ಕಾಯಕ್ರಮದಲ್ಲಿ ತಾಲೂಕಿನ 9 ಗ್ರಾಮ ಪಂಚಾಯತ್‍ನ 40 ಗ್ರಾಮಗಳಿಂದ ಸುಮಾರು 250ಕ್ಕೂ ಹೆಚ್ಚು ಸಮುದಾಯದ ಜನರು ಭಾಗವಹಿಸಿ ನಿವೇಶನ, ಶೌಚಾಲಯ, ರಸ್ತೆ ಸಮಸ್ಯೆ, ಸಾರ್ವಜನಿಕ ಸಾರಿಗೆ ಸೌಲಭ್ಯ, ಕುಡಿಯುವ ನೀರಿನ ಸಮಸ್ಯೆ, ವಿಧವಾ ವೇತನ, ವೃದಾಪ್ಯ ವೇತನ, ಪಡಿತರ ಚಿಟಿ ಸಮಸ್ಯೆ, ಆಧಾರ್ ಕಾರ್ಡು ಸಮಸ್ಯೆ, ಶಾಲೆಗಳಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ, ಶಿಕ್ಷಕರ ಕೊರತೆ, ವಿಕಲಚೇತನರ ಮಾಸಾಶನ ಸಮಸ್ಯೆ, ಆರೋಗ್ಯ ಸಮಸ್ಯೆ, ಕೋವಿಡ್‍ನಿಂದ ಮೃತಪಟ್ಟವರಿಗೆ ಪರಿಹಾರ ದೊರಕದಿರುವ ಸಮಸ್ಯೆ, ರೈತ ನೊಂದಣಿ ಸಂಖ್ಯೆ ಸಮಸ್ಯೆ, ಶಾಲೆ ಕಟ್ಟಡ ಸಮಸ್ಯೆ, ಅಂಗನಾಡಿಗಳಲ್ಲಿ ಫಲಾನುಭವಿಗಳಿಗೆ ಸರಿಯಾಗಿ ಆಹಾರ ವಿತರಣೆ ಮಾಡದಿರುವುದು ಮತ್ತು ಅಂಗನವಾಡಿ ಕೇಂದ್ರಗಳನ್ನು ಸರಿಯಾಗಿ ಕಾರ್ಯನಿರ್ವಹಿಸದೆ ಇರುವ ಸಮಸ್ಯೆ, ಶಾಲೆಗಳಲ್ಲಿ ಸಾರ್ವಜನಿಕರಿಂದ ಆಗುತ್ತಿರುವ ಸಮಸ್ಯೆ, ವಿದ್ಯಾರ್ಥಿ ವೇತನ ಸಮಸ್ಯೆ, ಭಾಗ್ಯಲಕ್ಷ್ಮೀ ಬಾಂಡ್ ಹೀಗೆ ನಾನ ಸಮಸ್ಯೆಗಳ ಕುರಿತು ಜನರು ತಮ್ಮ ಸಮಸ್ಯೆಗಳನ್ನು ಮುಕ್ತವಾಗಿ ಇಲಾಖೆ ಅಧಿಕಾರಿಗಳ ಮುಂದೆ ಹಂಚಿಕೊಂಡಿರುತ್ತಾರೆ ಮತ್ತು ಪತ್ರದ ಮೂಲಕ ಮನವಿಗಳನ್ನು ಸಲ್ಲಿಸಿದರು.
ಸಂಸ್ಥೆಯ ಸಮುದಾಯ ಸಂಘಟಕರಾದ ಚಂದ್ರಕಾಂತ್ ಎಮ್ ಇವರು ಧನ್ಯವಾದಗಳನ್ನು ಸಲ್ಲಿಸಿ, ಶ್ರೀ.ಉಮೇಶ್, ವೃತ್ತಿ ಮಾರ್ಗದರ್ಶನ ಆಪ್ತಸಮಾಲೋಚಕರು ಇವರು ಸ್ವಾಗತಿಸಿ ಶ್ರೀಮತಿ.ಸರುಬಾಯಿ ದೊಡ್ಡಿ, ಜಿಲ್ಲಾ ಸಂಯೋಜಕರು ಇವರು ಕಾರ್ಯಕ್ರಮವನ್ನು ನಿರೂಪಿಸಿದರು.