ಚಂದಾಪೂರ: ಗೃಹಲಕ್ಷ್ಮೀ ಯೋಜನೆಯ ನೊಂದಾಣಿ

(ಸಂಜೆವಾಣಿ ವಾರ್ತೆ)
ಚಿಂಚೋಳಿ,ಜು.27- ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯ ಲಾಭವನ್ನು ಸಾರ್ವಜನಿಕರಿಗೆ ತಲುಪಿಸುವ ಉದ್ದೇಶದಿಂದ ಫಲಾನುಭವಿಗಳು ಅನ್ ನೋಂದಣಿ ಮಾಡಿಕೊಳ್ಳಲು ವಾರ್ಡ್ ಸಂಖ್ಯೆಯ ಅನುಗುಣವಾಗಿ ಕೇಂದ್ರಗಳು ಪ್ರಾರಂಭಿಸಲಾಗಿದೆ.
ಚಂದಾಪೂರ ಪಟ್ಟಣದ ಸಾರ್ವಜನಿಕರು ಈ ಕೇಂದ್ರಗಳಿಗೆ ಭೇಟಿನೀಡಿ ಸದುಪಯೋಗ ಪಡೆದುಕೊಳ್ಳಬೇಕು ಎಂದು ಪುರಸಭೆ ಅಧಿಕಾರಿಗಳಾದ ಕಾಶಿನಾಥ ಧನ್ನಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಈಗಾಗಲೇ ಪುರಸಭೆ ಕಛೇರಿಯಲ್ಲಿ ವಾರ್ಡ್ ನಂ.1 ರಿಂದ 7ರವರೆಗೆ ನೋಂದಣಿ ಮಾಡಲು ಪ್ರಾರಂಭವಾಗಿದ್ದು, ವಾರ್ಡ್ ನಂ.8 ರಿಂದ 14ರವರೆಗೆ ನೂತನ ಪುರಸಭೆ ಕಟ್ಟಡ ಬೀದರ್ ವೃತ್ತದಲ್ಲಿ ಹತ್ತಿರ ಅನ್ನೈನ ಕೇಂದ್ರ ತೆರೆಯಲಾಗಿದೆ.
ವಾರ್ಡ್ ನಂ.15ರಿಂದ 23ರವರೆಗೆ ಚಂದಾಪೂರ ಪಟ್ಟಣದ ಗಾಂಧಿ ವೃತ್ತ ಪುರಸಭೆ ಮಳಿಗೆಯಲ್ಲಿ ಆಸ್ಟ್ರೇನ್ ಕೇಂದ್ರ ಮಾಡಲಾಗಿದ್ದು ಸಾರ್ವಜನಿಕರು ಬೆಳಿಗ್ಗೆ 9 ರಿಂದ ಸಾಯಂಕಾಲ 6ಗಂಟೆಯವರೆಗೆ ಉಚಿತವಾಗಿ ನೋಂದಣಿ ರವಿವಾರ ಹೊರತುಪಡಿಸಿ ಉಳಿದ ಎಲ್ಲ ದಿನಗಳಲ್ಲಿ ನಡೆಯುತ್ತದೆ. ಎಂದು ಅವರು ತಿಳಿಸಿದ್ದಾರೆ