ಚಂದಾಪುರ: ಸ್ಯಾನಿಟಯಜರ್ ಸಿಂಪರಣೆ, ಉಚಿತ ಮಾಸ್ಕ ವಿತರಣೆ

ಚಿಂಚೋಳಿ,ಜೂ.1- ಇಲ್ಲಿನ ಚಂದಾಪುರ ಪಟ್ಟಣದಲ್ಲಿ ಬಿಜೆಪಿಯ ಯುವ ಮುಖಂಡರಾದ ಅಲ್ಲಮ ಪ್ರಭು ಹುಲಿ ಪಾಟೀಲ್ ಅವರು, ತಮ್ಮ ಸ್ವಂತ ವೆಚ್ಚದಲ್ಲಿ ಕೈಗೊಂಡ ಸ್ಯಾನಿಟೈಸರ್ ಸಿಂಪರಣೆ ಮತ್ತು ಸಾರ್ವಜನಿಕರಿಗೆ ಉಚಿತ ಮಾಸ್ಕ್ ಗಳನ್ನು ವಿತರಣೆಗೆ ಶಾಸಕ ಡಾ. ಅವಿನಾಶ್ ಜಾಧವ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಬಿಜೆಪಿ ತಾಲೂಕ ಅಧ್ಯಕ್ಷರಾದ ಸಂತೋಷ ಗಡಂತಿ, ತಾಲೂಕ ಪಂಚಾಯತ ಸದಸ್ಯರಾದ ಪ್ರೇಮಸಿಂಗ ಜಾಧವ. ಅಶೋಕ ಚವ್ಹಾಣ. ಸತೀಶರೆಡ್ಡಿ. ಪ್ರದೀಪ ಮೇತ್ರಿ. ಗಿರಿರಾಜ ನಾಟಿಕರ. ಉಮೇಶ್ ಬೆಳಕೇರಿ. ಕೆ.ಎಂ. ಬಾರಿ. ಅಭಿಷೇಕ ಮಲಕನೋರ. ಪವನಕುಮಾರ ಗೋಪನಪಳ್ಳಿ. ಮಲ್ಲು ಕೋಡಂಬಲ ಚಿಮ್ಮನಚೋಡ. ಅಂಬಾದಾಸ್ ಭೋವಿ. ಗಾಂಧಿ ಪಾಟೀಲ ಸಾಸರ್ಗಾವ್. ವಿವೇಕ್ ಪಾಟೀಲ ದೇಗಲಮಡಿ. ಮತ್ತು ಅನೇಕ ಬಿಜೆಪಿ ಪಕ್ಷದವರು ಉಪಸ್ಥಿತರಿದ್ದರು.