ಚಂದಾಪುರ: ಸ್ಮಾರ್ಟ್ ಕ್ಲಾಸ್ ಉಪಕರಣ ವಿತರಣೆ

ಚಿಂಚೋಳಿ,ನ.27- ಪುರಸಭೆ ವ್ಯಾಪ್ತಿಯ ಚಂದಾಪುರದ ಶಾರದಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕøತಿಕ ಸಂಘದ ವತಿಯಿಂದ ಸರಬರಾಜುಯ ಮಾಡಲಾದ ಸ್ಮಾರ್ಟ್ ಕ್ಲಾಸ್ ಉಪಕರಣಗಳ ವಉದ್ಘಾಟನೆಗೆ ಸಂಘದ ತಾಲೂಕು ಸಂಚಾಲಕ ಕಾಶೀನಾಥ್ ಮಡಿವಾಳ ಚಾಲನೆ ನೀಡಿದರು.
ಇಂದಿನ ಆಧುನಿಕ ಜಗತ್ತಿನಲ್ಲಿ ಡಿಜಿಟಲ್ ಹಾಗೂ ಗುಣಮಟ್ಟದ ಶಿಕ್ಷಣ ಅವಶ್ಯಕತೆ ಇದೆ ಎಂದು ಅವರು ಹೇಳಿದರು.
ಚಿಂಚೋಳಿ ತಾಲೂಕ ಕರ್ನಾಟಕ ಕಾರ್ಯನಿತರ ಪತ್ರಕರ್ತರ ಸಂಘದ ಗೌರವಾಧ್ಯಕ್ಷರಾದ ಶಾಮರಾವ್ ಓಂಕಾರ್, ಚಿಂಚೋಳಿ ತಾಲೂಕ ಕರ್ನಾಟಕ ಕಾರ್ಯನಿತರ ಪತ್ರಕರ್ತರ ಸಂಘದ ಸಹ ಕಾರ್ಯದರ್ಶಿ ಸಂಜೀವಕುಮಾರ ಪಾಟೀಲ್, ಈಶಾನ್ಯ ವಾರ್ತೆ ಪತ್ರಕರ್ತರಾದ ವೆಂಕಟೇಶ್ ದುದ್ಯಾಲ್, ಸಾಮಾಜಿಕ ಕಾರ್ಯಕರ್ತರಾದ ಸೋಮಶೇಖರ್ ಕರಕಟ್ಟಿ,ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ಮುಖಂಡರಾದ ವೀಣಾ ಕೊರವಿ, ಶಾರದಾ ಶಾಲೆಯ ಅಧ್ಯಕ್ಷರು ರಜಿಯಾಬೇಗಮ್ ನಾವದಾಗಿಕರ ವೇದಿಕೆ ಮೇಲಿದ್ದರು.
ಮುಖ್ಯ ಶಿಕ್ಷಕಿ ರೇಷ್ಮಾ ನಿರೂಪಿಸಿ ಗೌಸಿಯ್ ಬೇಗಮ್ ಸ್ವಾಗತಿಸಿ,ಕರೀಷ್ಮ ನವದಗಿಕರ್ ವಂದಿಸಿದರು..ಶಿಕ್ಷಕಿಯರಾದ ಚಂದ್ರಕಲಾ, ದಿವ್ಯಾ. ನಿತ್ಯಾನಂದ ಹಾಗೂ ಪಾಲಕರು ಮಕ್ಕಳು ಹಾಜರಿದ್ದರು.