ಚಂದಾಪುರ: ಸರಳವಾಗಿ ಆಚರಿಸಿದ ಹನುಮ ಜಯಂತಿ

ಚಿಂಚೋಳಿ,ಏ.27- ಕೋವಿಡ್-19 ಎರಡನೆ ಅಲೆಯ ಸೋಂಕಿನ ಹಿನ್ನೆಲೆಯಲ್ಲಿ ಇಲ್ಲಿನ ಚಂದಾಪುರ ಪಟ್ಟಣದ ಹನುಮಾನ ಮಂದಿರದಲ್ಲಿ ಅತಿ ಸರಳವಾಗಿ ಹನುಮ ಜಯಂತೋತ್ಸವ ಆಚರಿಸಲಾಯಿತು. ಎಂದು ಚಂದಾಪುರದ ಹನುಮಾನ ದೇವಾಲಯದ ಟ್ರಸ್ಟಿನ ಉಪಾಧ್ಯಕ್ಷರಾದ ಜಗನ್ನಾಥ ಗೌಂಡಿ. ಅವರು ತಿಳಿಸಿದರು.
ಮಹಾಮಾರಿ ಕೋವಿಡ್-19 ವÉೈರಸ್ ಹರಡುವುದನ್ನು ತಡೆಯಲು ರಾಜ್ಯ ಸರ್ಕಾರ ಜಾರಿ ಮಾಡಿರುವ ಲಾಕ್‍ಡೌನ್ ಹಾಗೂ ಕಡ್ಡಾಯ ಕೋವಿಡ ನಿಯಮವಳಿಯಮತೆ ಈ ವರ್ಷದ ಹನುಮ ಜಯಂತಿಯನ್ನು ಭಕ್ತರಿಲ್ಲದೇ ದೇವಸ್ಥಾನದಲ್ಲಿ ಧಾರ್ಮಿಕ ಪೂಜೆ ತೊಟ್ಟಿಲು ಕಾರ್ಯಕ್ರಮವನ್ನು ಅರ್ಚಕರೊಬ್ಬರು ನಡೆಸಿಕೊಟ್ಟರು.
ಭಕ್ತರು ತಮ್ಮ ಮನೆಗಳಲ್ಲಿಯೇ ಇದ್ದರುಕೊಂಡು ಹನುಮ ಸ್ಮರಣೆ ಹಾಗೂ ಪೂಜೆಯನ್ನು ಕೈಗೊಂಡು ಮಹಾಮಾರಿ ಕೊರೊನಾ ಸೋಂಕನ್ನು ತೊಲಗಿಸುವಂತೆ ಪ್ರಾರ್ಥಿಸುವಂತೆ ಅವರು ಕೋರಿದ್ದಾರೆ.