ಚಂದಾಪುರ ಗ್ರಾಮಕ್ಕೆ ಬಸ್ ವ್ಯವಸ್ಥೆ ಕಲ್ಪಿಸಲು ಆಗ್ರಹ

ಶಹಾಪುರ:ಅ.30:ತಾಲೂಕಿನ ಚಂದಾಪುರ ಗ್ರಾಮಕ್ಕೆ ಬಸ್ ವ್ಯವಸ್ಥೆ ಕಲ್ಪಿಸಲು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಭೀಮವಾದ) ವತಿಯಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಶಹಾಪುರ ಘಟಕ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು.

ಇದೆ ಸಮಯದಲ್ಲಿ ರಾಜು ಚಂದಾಪುರ ಮಾತನಾಡಿ,
ಗ್ರಾಮಕ್ಕೆ ಬಸ್ ವ್ಯವಸ್ಥೆ ಇಲ್ಲದೆ ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ತರಗತಿಗೆ ಹಾಜರಾಗಲು ಸಾಧ್ಯವಾಗದೇ ವಿದ್ಯಾಭಾಸದಿಂದ ವಂಚಿತರಾಗುತ್ತಿದ್ದಾರೆ. ಕೊರೊನಾ ಮಹಾಮಾರಿಯಿಂದ ವಿದ್ಯಾಭಾಸದಿಂದ ದೂರವಿದ್ದಾರೆ ಇಂತಹ ಸಮಯದಲ್ಲಿ ವಿದ್ಯಾರ್ಥಿಗಳು ಬಸ್ ಇರದೇ ಸಮಸ್ಯೆಗೆ ಸಿಲುಕಿರುವುದು ದೂರದುಷ್ಟಕರ ಸಂಗತಿಯಾಗಿದೆ. ಚಂದಾಪುರದಿಂದ ದರ್ಶನಾಪುರ ಕ್ರಾಸ್ ವರೆಗೆ ನಡೆದುಕೊಡು ಬರಬೇಕು. ಮಾರ್ಗ ಮಧ್ಯದಲ್ಲಿ ವಿದ್ಯಾರ್ಥಿನಿಯರಿಗೆ ತೊಂದರೆಯಾದರೆ ಹೊಣೆಯಾರು. ಜೊತೆಗೆ ತಡೆರಹಿತ ಬಸ್ ನಿಲ್ಲಿದಿರುವುದು ತೊಂದರೆಯಾಗುತ್ತಿದೆ. ಆದ್ದರಿಂದ ಕೂಡಲೇ ಎಲ್ಲ ಬಸ್ ಕಲ್ಪಿಸಿ ವಿದ್ಯಾರ್ಥಿಗಳು ವಿದ್ಯಾಭಾಸಕ್ಕೆ
ಅನುಕೂಲ ಮಾಡಿಕೊಡಬೇಕೆಂದು ಆಗ್ರಹಿಸಿದರು

ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕರಾದ ಶಿವು ದೋರನಹಳ್ಳಿ, ಸಿದ್ದು ಮುಂಡಾಸ್, ನಿಂಗಪ್ಪ ದೋರನಹಳ್ಳಿ, ವಿಶ್ವ ನಾಟೇಕರ್, ಮಂಜು ಹಾಲಬಾವಿ, ಶೇಖರ್ ಬಡಿಗೇರ್ ಸೇರಿದಂತೆ ಇತರರು ಇದ್ದರು