ಚಂದಾಪುರ:ಪ.ಜಾ.ವಿದ್ಯಾರ್ಥಿಗಳ ವಸತಿ ಶಾಲೆ ವಾರ್ಷಿಕೋತ್ಸವ

ಚಿಂಚೋಳಿ,ಮಾ.1-ಪಟ್ಟಣದ ಚಂದಾಪುರದ ಭಾಗ್ಯೋದಯ ವಿದ್ಯಾವಧ9ಕ ಡಾ.ಬಿ.ಆರ್.ಅಂಬೇಡ್ಕರ್ ಕೇಂದ್ರ ಸರ್ಕಾರದ ನೆರವಿನ ಪ.ಜಾ.ವಿದ್ಯಾರ್ಥಿಗಳ ವಸತಿ ಶಾಲೆಯ ವಾರ್ಷಿಕೋತ್ಸವ ಸಮಾರಂಭ ಜರಗಿತು. ಕಾರ್ಯಕ್ರಮ ಉದ್ದೇಶಿಸಿ ಭಾಗ್ಯೋದಯ ವಿದ್ಯಾವಧ9ಕ ಸಂಘದ ಅಧ್ಯಕ್ಷÀ ರಮೇಶ ಯಾಕಾಪೂರ್ ಅವರು ಮಾತನಾಡಿ, ಭಾಗ್ಯೋದಯ ವಿದ್ಯಾವಧ9ಕ ಡಾ.ಬಿ.ಆರ್.ಅಂಬೇಡ್ಕರ್ ಕೇಂದ್ರ ಸರ್ಕಾರದ ನೆರವಿನ ಪ.ಜಾ.ವಿದ್ಯಾರ್ಥಿಗಳ ವಸತಿ ಶಾಲೆ ಪ್ರಾರಂಭವಾಗಿ ಇಂದಿಗೆ 30 ವರ್ಷವಾಯಿತು. ವಸತಿ ಶಾಲೆಯ ಮಕ್ಕಳಿಗೆ ಶಿಕ್ಷಣ ಮತ್ತು ಉಚಿತ ಊಟದ ವ್ಯವಸ್ಥೆ ಹಾಗೂ ಮಕ್ಕಳಿಗೆ ಕರಾಟೆ ತರಬೇತಿಯು ಉಚಿತವಾಗಿ ನೀಡುತ್ತಿದ್ದು, ಮಕ್ಕಳಿಗೆ ವಾರಕ್ಕೆ ಎರಡು ಬಾರಿ ಉಚಿತ ಆರೋಗ್ಯ ತಪಾಸಣೆ ಮಾಡುವ ಮುಖಾಂತರ ಮಕ್ಕಳ ಬಗ್ಗೆಯೂ ಕಾಳಜಿ ವಹಿಸಲಾಗುತ್ತಿದೆ. ವಸತಿ ಶಾಲೆಯಲ್ಲಿ ಹಗಲಿರುಳೆನ್ನದೆ ಮಕ್ಕಳನ್ನು ಕಾಳಜಿಯಿಂದ ನೋಡಿಕೊಳ್ಳುವ ಆಡಳಿತ ಮಂಡಳಿಯ ಸದಸ್ಯರು ಮತ್ತು ಶಾಲೆಯ ಶಿಕ್ಷಕರು ಸೇವೆಯನ್ನು ಅವರು ಶ್ಲಾಘಿಸಿದರು. ಶಾಲೆಯಲ್ಲಿ ಸಿಸಿ ಕ್ಯಾಮೆರಾ ಅಳುವಡಿಕೆ ಮಾಡಲಾಗಿದ್ದು, ಈ ಶಾಲೆಯಲ್ಲಿ ಕಲಿತ ಮಕ್ಕಳು ನ್ಯಾಯಾಧೀಶರು, ವೈದ್ಯರು, ಇಂಜಿನಿರಗಳು, ಪೆÇಲೀಸ್ ಅಧಿಕಾರಿಗಳು ಮತ್ತು ಶಿಕ್ಷಕರಾಗಿ ವಿವಿಧ ಸರ್ಕಾರಿ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಶಾಲೆಯು ಯಾವುದೇ ಖಾಸಗಿ ಶಾಲೆಗಿಂತ ಕಡಿಮೆಯಿಲ್ಲ. ಆದರೂ ಕೂಡ ಕೆಲವು ಪಾಲಕರು ಲಕ್ಷಾಂತರ ರೂ.ಡೊನೇಷನ್ ಕೊಟ್ಟು ಬೇರೆ ಶಾಲೆಗೆ ಕಳಿಸುತ್ತಿದ್ದಾರೆ. ವಸತಿ ಶಾಲೆಯಲ್ಲಿ ಶಾಲೆ ಮುಗಿದ ನಂತರವೂ ಸಾಯಂಕಾಲ ಮಕ್ಕಳಿಗೆ ಸ್ಪೆಷಲ್ ಟ್ಯೂಷನ್ ಕ್ಲಾಸ್ ಕೂಡ ನಡೆಸುತ್ತಿದ್ದು, ಅದರಿಂದ ಮಕ್ಕಳು ಬಹಳಷ್ಟು ವಿದ್ಯಾಭ್ಯಾಸ ಮಾಡಲು ಅನುಕೂಲವಾಗುತ್ತಿದೆ. ಮಕ್ಕಳಿಗೆ ವಸತಿ ಶಾಲೆಯಲ್ಲಿ ಶಿಕ್ಷಣ ಮತ್ತು ಊಟದ ವ್ಯವಸ್ಥೆ ಉಚಿತವಾಗಿ ನೀಡುತ್ತಿದ್ದು ತಾಲೂಕಿನ ಜನರು ಸದುಪಯೋಗ ಕೊಳ್ಳಬೇಕೆಂದು ಹೇಳಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ತಾಲೂಕ ಪಂಚಾಯತ ಕಾರ್ಯನಿರ್ವಕ ಅಧಿಕಾರಿ ಶಂಕರ ರಾಠೋಡ್ ಅವರು ಮಾತನಾಡಿ, ಭಾಗ್ಯೋದಯ ವಿದ್ಯಾವಧ9ಕ ಸಂಘÀ ತಾಲೂಕಿನ ಮಕ್ಕಳಿಗೆ ಉಚಿತ ಶಿಕ್ಷಣ ಮತ್ತು ಊಟದ ವ್ಯವಸ್ಥೆ ನೀಡುತ್ತಿದ್ದು, ಇದು ಬಹಳ ಉತ್ತಮ ಕೆಲಸವಾಗಿದೆ. ಇದರಿಂದ ತಾಲೂಕಿನ ಬಡ ವಿದ್ಯಾರ್ಥಿಗಳಿಗೆ ಪಾಲಕರಿಗೆ ಅನುಕೂಲವಾಗುತಿದೆ. ಮಕ್ಕಳು ವಿದ್ಯಾಭ್ಯಾಸ ಮಾಡಬೇಕಾದರೆ ಮೊಬೈಲ್ ಬಳಸದಂತೆ ಎಲ್ಲಾ ಪಾಲಕರು ಗಮನ ಹರಿಸಬೇಕು ಮತ್ತು ಮಕ್ಕಳಿಗೆ ಒಳ್ಳೆಯ ಶಿಕ್ಷಣದ ಜೊತೆಗೆ ಸಂಸ್ಕøತಿ ಕೂಡ ಮಕ್ಕಳಿಗೆ ನೀಡಬೇಕೆಂದು ಹೇಳಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಸಂಜೀವನ ಯಾಕಾಪೂರ್, ಚಂದಾಪುರ ಆಸ್ಪತ್ರೆಯ ಆಡಳಿತಾಧಿಕಾರಿಗಳಾದ ಡಾ ಸಂತೋಷ್ ಪಾಟೀಲ್, ಭಾಗ್ಯೋದಯ ವಿದ್ಯಾವಧ9ಕ ಸಂಘದ ಕೋಶಾಧಿಕಾರಿಗಳಾದ ನಾಗೇಂದ್ರಪ್ಪ ಗುರಂಪಳ್ಳಿ, ಸಂಘದ ಸದಸ್ಯರಾದ ಮಾದೇವಪ್ಪ, ಮಾಣಿಕ ನಿಡಗುಂದಾ, ಶಾಲೆಯ ಮುಖ್ಯ ಗುರುಗಳಾದ ರಶಿದಾ, ಮತ್ತು ಅನೇಕ ಶಾಲೆಯ ಶಿಕ್ಷಕರು ಹಾಗೂ ಶಾಲೆ ಮಕ್ಕಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು..