ಚಂದನ್ ಶೆಟ್ಟಿ, ನಿವೇದಿತಾ ಗೌಡ ವಿಚ್ಛೇದನ

ಬೆಂಗಳೂರು, ಜೂ.೮- ಬಿಗ್ ಬಾಸ್ ವಿನ್ನರ್ ಹಾಗೂ ರ್‍ಯಾಪರ್ ಚಂದನ್ ಶೆಟ್ಟಿ, ನಟಿ ನಿವೇದಿತಾ ಗೌಡ ದಂಪತಿ ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಪಡೆದುಕೊಂಡಿದ್ದಾರೆ. ಬೆಂಗಳೂರು ಕೌಟುಂಬಿಕ ನ್ಯಾಯಾಲಯ ಆದೇಶ ಹೊರಡಿಸಿದೆ. ಚಂದನ್ ಶೆಟ್ಟಿ ೨೦೧೯ ರ ಮೈಸೂರು ಯುವ ದಸರಾ ವೇದಿಕೆಯಲ್ಲಿ ನಿವೇದಿತಾಗೆ ಪ್ರೇಮನಿವೇದನೆ ಮಾಡಿದ್ದರು. ೨೦೨೦ ಫೆಬ್ರವರಿ ೨೬ ರಂದು ಅದ್ಧೂರಿಯಾಗಿ ವಿವಾಹ ಮಹೋತ್ಸವ ನೆರವೇರಿತ್ತು. ನಂತರ ಅನ್ಯೋನ್ಯವಾಗಿದ್ದ ಜೋಡಿ, ಕಳೆದ ವರ್ಷ ‘ಕ್ಯಾಂಡಿಕ್ರಶ್ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು.
ಮದುವೆಯಾದ ಬಳಿಕ ಅನ್ಯೋನ್ಯತೆಯಿಂದಿದ್ದ ದಂಪತಿ ಸೋಶಿಯಲ್ ಮೀಡಿಯಾ ಹಾಗೂ ಮಾಧ್ಯಮಗಳ ಮೂಲಕ ಹಲವು ವಿಚಾರಗಳನ್ನು ಹಂಚಿಕೊಂಡು ಅನ್ಯೋನ್ಯತೆ ಮೆರೆಯುತ್ತಿದ್ದರು. ವಿಚ್ಛೇದನಕ್ಕೂ ಮೊದಲು ಕೋರ್ಟ್‌ಗೆ ಒಂದೇ ಕಾರಿನಲ್ಲಿ ಕೈ ಕೈ ಹಿಡಿದುಕೊಂಡು ಬಂದಿದ್ದರು. ವಿಚ್ಛೇದನದ ಬಳಿಕವೂ ಕೈಕೈ ಹಿಡಿದು ನಡೆದು ಅಚ್ಚರಿ ಮೂಡಿಸಿದರು. ಬಣ್ಣದ ಬದುಕಿನ ಭವಿಷ್ಯದ ದೃಷ್ಟಿಯಿಂದ ಈ ಜೋಡಿ ಪರಸ್ಪರ ಒಪ್ಪಿಗೆ ಮೂಲಕ ದೂರವಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ವಿಚ್ಛೇದನವೇಕೆ?: ಚಂದನ್, ನಿವೇದಿತಾ ಮದುವೆಯಾಗಿ ೪ ವರ್ಷಗಳು ಕಳೆದಿವೆ. ಈ ಇದೀಗ ಕುಟುಂಬದವರು ಮಗು ಮಾಡಿ ಕೊಳ್ಳುವಂತೆ ಇಬ್ಬರಿಗೂ ಹೇಳಿದ್ದು, ಸದ್ಯಕ್ಕೆ ಮಗು ಬೇಡ ಎಂದು ನಿವೇದಿತಾ ಹೇಳಿದ ಕಾರಣ ಈ ಜೋಡಿ.
ಪರಸ್ಪರ ಒಪ್ಪಿಗೆಯ ಮೂಲಕ ವಿಚ್ಛೇದನ ಪಡೆದು, ಸ್ನೇಹಿತರಾಗಿ ತಮ್ಮ ಮುಂದಿನ ಭವಿಷ್ಯ ರೂಪಿಸಿ ಕೊಳ್ಳಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ವಿಚ್ಛೇದನ ನಂತರ ವಿದೇಶಕ್ಕೆ?: ಚಂದನ್ ಸದ್ಯ ಸಂಗೀತ ನಿರ್ದೇಶಕನಾಗಿ ಮಾತ್ರವಲ್ಲದೆ ನಾಯಕನಾಗಿಯೂ ನಾಲ್ಕು ಸಿನಿಮಾ ಮಾಡುತ್ತಿದ್ದಾರೆ. ವಿಚ್ಚೇದನದ ನಂತರ ನಿವೇದಿತಾ ಹೆಚ್ಚಿನ ವಿದ್ಯಾಭ್ಯಾಸಕ್ಕೆ ವಿದೇಶಕ್ಕೆ ಹೋಗಲು ಸಿದ್ಧತೆ ಮಾಡಿಕೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.