
ಚಂದನವನ ಫಿಲ್ಮ್ ಕ್ರಿಟಿಕ್ ಅಕಾಡಮಿಯ ನಾಲ್ಕನೇ ವರ್ಷದ ನಾಮ ನಿರ್ದೇಶನ ಪ್ರಕಟಾಗಿದ್ದು ಮುಂದಿನ ಭಾನುವಾರ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದೆ.
ನಾಮನಿರ್ದೇಶನ ಪ್ರಕಟಿಸಿದ ನಿರ್ದೇಶಕ ಯೋಗರಾಜ್ ಭಟ್, ನಟಿಯರಾದ ಪಾವನಾ ಗೌಡ, ಸಂಗೀತ ಭಟ್, ಇತಿ ಆಚಾರ್ಯ ಇಡೀ ನಾಮನಿರ್ದೇಶನಗೊಂಡವರಿಗೆ ಶುಭ ಹಾರೈಸಿದರು. ಇದೇ ವೇಳೆ ಟ್ರೋಫಿ ಕೂಡ ಅನಾವರಣ ಮಾಡಿದರು.
ಈ ಬಾರಿ ಪುನೀತ್ ರಾಜ್‍ಕುಮಾರ್ ಹೆಸರಲ್ಲಿ ಅತ್ಯುತ್ತಮ ಚೊಚ್ಚಲ ನಿರ್ಮಾಪಕ , ಅತ್ಯುತ್ತಮ ನಟ ಮೊದಲ ಚಿತ್ರಕ್ಕೆ ಸಂಚಾರಿ ವಿಜಯ್ ಹೆಸರಲ್ಲಿ ಪ್ರಶಸ್ತಿ, ಅತ್ಯುತ್ತಮ ನಿರ್ದೇಶಕ ಮೊದಲ ಚಿತ್ರಕ್ಕಾಗಿ ಶಂಕರ್‍ನಾಗ್ ಹೆಸರಲ್ಲಿ ಪ್ರಶಸ್ತಿ, ಅತ್ಯುತ್ತಮ ನಾಯಕಿ ಮೊದಲ ಚಿತ್ರಕ್ಕೆ ತ್ರಿಪುರಾಂಬ ಹೆಸರಲ್ಲಿ ಹಾಗು ಅತ್ಯುತ್ತಮ ಬರಹಗಾರ ಪ್ರಶಸ್ತಿ ಮೊದಲ ಚಿತ್ರಕ್ಕೆ ಚಿ. ಉದಯ್ ಶಂಕರ್ ಹೆಸರಲ್ಲಿ ಈ ಬಾರಿ ನೀಡಲು ನಿರ್ಧರಿಸಲಾಗಿದೆ.
ಈ ಬಾರಿ ಪ್ರಕಟಿಸಿರುವ ಐದು ಹೊಸ ಪ್ರಶಸ್ತಿ ಸೇರಿದಂತೆ ಒಟ್ಟು 27 ಪ್ರಶಸ್ತಿಗಳನ್ನು ನೀಡಲಾಗುವುದು ಎಂದು ಚಂದನವನ ಫಿಲ್ಮ್ ಕ್ರಿಟಿಕ್ ಅಕಾಡಮಿ ತಿಳಿಸಿದೆ.
ಅತ್ಯುತ್ತ ಚಿತ್ರ ವಿಭಾಗದಲ್ಲಿ ಕಾಂತಾರ, ಕೆಜಿಎಫ್-2, ಧರಣಿ ಮಂಡಲ ಮಧ್ಯದೊಳಗೆ, 777 ಚಾರ್ಲಿ, ವ್ಹೀಲ್ ಚೇರ್ ರೋಮಿಯೋ, ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ವಿಭಾಗದಲ್ಲಿ ಪ್ರಶಾಂತ್ ನೀಲ್, ರಿಷಬ್ ಶೆಟ್ಟಿ, ಕಿರಣ್ ರಾಜ್, ಅನೂಪ್ ಭಂಡಾರಿ ಜಡೇಶ್ ಹಂಪಿ ಹಾಗು ಅತ್ಯುತ್ತ ಚಿತ್ರಕಥೆ ವಿಭಾಗದಲ್ಲಿ ರಿಷಬ್ ಶೆಟ್ಟಿ, ಕಿರಣ್ ರಾಜ್, ಶ್ರೀಧರ್ ಶಿಕಾರಿಪುರ, ಡಾರ್ಲಿಂಗ್ ಕೃಷ್ಣ ಮತ್ತು ಪ್ರಶಾಂತ್ ನೀಲ್ ಸೇರಿದಂತೆ ಹಲವು ಮಂದಿ ಸ್ಪರ್ಧೆಯಲ್ಲಿದ್ದಾರೆ