
ಚಿಂಚೋಳಿ,ಆ.19- ತಾಲೂಕಿನ ಚಂದನಕೇರಾ ಗ್ರಾಮದಲ್ಲಿ ಹಿಂದುಳಿದ ಜಾತಿ ವರ್ಗಗಳ ಒಕ್ಕೂಟದ ತಾಲೂಕ ಘಟಕದ ನೆತೃತ್ವದಲ್ಲಿ ವಿವಿಧ ಬೇಡಿಕೆಗಳಿಗೆ ಆಗ್ರಹಿ ಪ್ರತಿಭಟನೆ ಮಾಡಲಾಯಿತು.
ಪ್ರತಿಭಟನೆ ಉದ್ದೇಶಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಅಧ್ಯಕ್ಷರಾದ ಶರಣಬಸಪ್ಪ ಮಮಶೆಟ್ಟಿ, ಅವರು ಮಾತನಾಡಿ, ಚಂದನಕೇರಾ ಗ್ರಾಮದಲ್ಲಿ 2021-22ನೇ ಸಾಲಿನ ಜೆ.ಜೆ.ಎಮ್. ಕಾಮಗಾರಿಯ ಒಟ್ಟು ಮೊತ್ತ 1,6 ಕೋಟಿ ರೂಪಾಯಿಯ ಕಾಮಗಾರಿಯನ್ನು ಕಳಪೆ ಮಾಡಿರುತ್ತಾರೆ. ಮತ್ತು 2021-22ನೇ ಸಾಲಿನ 105 ಆಶ್ರಯ ಮನೆಗಳನ್ನು ಗ್ರಾಮ ಸಭೆ ಮಾಡದೇ ಫಲಾನುಭವಿಗಳನ್ನು ಆಯ್ಕೆ ಮಾಡಿರುತ್ತಾರೆ. ಹಾಗೂ 2021- 22ನೇ ಸಾಲಿನ 15ನೇ ಹಣಕಾಸು ಹಣವನ್ನು ಗ್ರಾಮೀಣ ನೀರು ಮತ್ತು ನೈರ್ಮಲ್ಯ ನೀರಿನ ತೊಟ್ಟಿ(ಟ್ಯಾಂಕ)ಗೆ ಪೈಸ್ಟೈನ್ ಮಾಡದೇ ಹಣ ದೂರುಪಯೋಗ ಮಾಡಿರುತ್ತಾರೆ ಎಂದರು.
ಉದ್ಯೋಗ ಖಾತ್ರಿ ಕಾಮಗಾರಿಯನ್ನು ಕೂಡಲೇ
ಪ್ರಾರಂಬಿಸಲು ಹಾಗೂ ಆದರ್ಶ ಗ್ರಾಮ ಯೋಜನೆ ಅಡಿಯಲ್ಲಿ 10 ಲಕ್ಷ ರೂಪಾಯಿಯ ಕಾಮಗಾರಿಗಳನ್ನು ಕಳಪೆ ಮಾಡಿರುತ್ತಾರೆ ಇಲ್ಲಿನಡೆದ ದುರುಯೋಗದ ಕುರಿತು ಸೂಕ್ತ ತನೀಖೆ ಮಾಡಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಜೆ.ಜೆ. ಎಮ್. ಕಾಮಗಾರಿ ಕಳಪೆ ಮಾಡಿರುವವರ ಮೇಲೇ ಸೂಕ್ತ ಕ್ರಮ ಜರುಗಿಸುವುದು ಮತ್ತು ಕಾಮಗಾರಿ ಪೂರ್ಣ ಗೋಳಿಸಬೇಕು. 2021-22ನೇ ಸಾಲಿನ 105 ಮನೆಗಳನ್ನು ಗ್ರಾಮ ಸಭೆ ಮೂಲಕ ಪುನರ್ ಆಯ್ಕೆ ಮಾಡುವುದು 2021-22ನೇ ಸಾಲಿನ 15ನೇ ಹಣಕಾಸು ಹಣವನ್ನು ಗ್ರಾಮೀಣ ನೀರು ಮತ್ತು ನೈರ್ಮಲ್ಯ ನೀರಿನ ತೊಟ್ಟಿ(ಟ್ಯಾಂಕ)ಗೆ ಪೈಫೈನ್ ಮಾಡದೇ ಹಣ ದೂರುಪಯೋಗ ಮಡಿರುವವ ಮೇಲೆ ಸೂಕ್ತ ಕ್ರಮ ಜರುಗಿಸಬೇಕು, ಸದರಿ ಕಾಮಗಾರಿ ಪೂರ್ಣ ಗೊಳೀಸಬೇಕು ಆದರ್ಶ ಗ್ರಾಮ ಯೋಜನೆ ಅಡಿಯಲ್ಲಿ 10 ಲಕ್ಷ ರೂಪಾಯಿಯ ಕಾಮಗಾರಿಗಳನ್ನು ಕಳಪೆ ಮಾಡಿರುವವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು.
ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕೂಲಿ ಕಾರ್ಮಿಕರಿಗೆ ದಿನಾಲು ಕೆಲಸ ಕೊಡಬೇಕು ಎಂದು ಶರಣಬಸಪ್ಪ ಮಮಶೆಟ್ಟಿ, ಅವರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಹಿಂದುಳಿದ ಜಾತಿ ವರ್ಗದ ಒಕ್ಕೂಟದ ತಾಲೂಕ ಅಧ್ಯಕ್ಷರಾದ ಹನುಮಂತ ಪೂಜಾರಿ, ಮುಖಂಡರಾದ ತುಕಾರಾಂ ಬಸ0ತಪೂರ, ರೇವಣಸಿದ್ದಪ್ಪ ಚಂದನ್, ಮಮ್ಮದ್ ಮಸ್ತಾನ್, ಜಗದೇವಿ, ಗೋಪಾಲ ಮಕೇರಿ, ಪುಂಡಲೀ ಬಸ0ತಪೂರ, ಕಾಶಿನಾಥ್ ಮಕೇರಿ, ಮತ್ತು ಅನೇಕ ಕೂಲಿ ಕಾರ್ಮಿಕರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.