ಚಂದನಕೇರಾ: ಕೋವಿಡ-19 ಜಾಗೃತಿ ಸಭೆ

ಚಿಂಚೋಳಿ,ಏ.28- ತಾಲೂಕಿನ ಚಂದನಕೇರಾ ಗ್ರಾಮದಲ್ಲಿ ಕೋವಿಡ್- 19 ಸೋಂಕಿನ ಜಾಗೃತಿಯ ಕುರಿತು ಸಭೆ ಜರಗಿತು.
ಸಭೆ ಉದ್ದೇಶಿಸಿ ಮಾತನಾಡಿದ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಮತ್ತು ಕೋವಿಡ್ ನೋಡಲ್ ಅಧಿಕಾರಿ ಪ್ರಭುಲಿಂಗ ವಾಲಿ ಅವರು, ಕೋವಿಡ್ ನಿಯಮ ತಪ್ಪದೇ ಪಾಲಿಸಬೇಕು ಎಂದು ಕರೆ ನೀಡಿದರು.
ರಾಜ್ಯದಲ್ಲಿ ಕೋವಿಡ್ 19 ಎರಡನೇ ಅಲೆ ದಿನ ದಿನಕ್ಕೆ ಹೆಚ್ಚಾಗುತ್ತಿದ್ದು, ಚಂದನಕೇರಾ ಗ್ರಾಮದ ವ್ಯಾಪ್ತಿಯ ಜನರು ಕಡ್ಡಾಯವಾಗಿ, ಸಮಾಜಿಕ ಅಂತರ, ಮಾಸ್ಕ್ ಹಾಕಿಕೊಳ್ಳಬೇಕು ಮತ್ತು ಸನಿಟೇಜರ್ ಇಲ್ಲವೇ ಸಾಬುನಿನಿಂದ ಕೈತೊಳೆದುಕೊಳ್ಳಬೇಕು ಎಂದರು.
ವ್ಯಾಪಾರಸ್ಥರು ತಮ್ಮ ತಮ್ಮ ಅಂಗಡಿಗೆ ಗ್ರಹಕರ ಬಂದರೆ ಕೊವಿಡ್ ನಿಯಮವಳಿ ಪಾಲಿಸಬೇಕು, ಅವಶ್ಯಕತೆ ಇದ್ದರೆ ಮಾತ್ರ ಹೊರಗಡೆ ಬರಬೇಕು ಇಲ್ಲದಿದ್ದರೆ ತಮ್ಮ ತಮ್ಮ ಮನೆಯಲ್ಲೇ ಇದ್ದು ಕೊರನಾ ವೈರಸ್ ಹರಡುವುದನ್ನು ತಪ್ಪಿಸಬೇಕು ಎಂದರು.
ಕೋರೊನಾ ಸೋಂಕಿನಿಂದ ಚಂದನಕೇರಾ ಗ್ರಾಮ ಪಂಚಾಯತ ಮುಕ್ತಗೊಳಿಸಲು 14ದಿನಗಳ ಲಾಕ್ಡೌನ್ ಜಾರಿಯ ನಿಯಮ ಪಾಲಿಸಬೇಕು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ. ಚಂದನಕೇರಾ ಗ್ರಾಮ ಪಂಚಾಯತ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಹಾಗೂ ಗ್ರಾಮ ಪಂಚಾಯತ ಸದಸ್ಯರು ಮತ್ತು ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಹಾಗೂ ಅಂಗನವಾಡಿ ಕಾರ್ಯಕರ್ತರು ಮತ್ತು ಆಶಾ ಕಾರ್ಯಕರ್ತರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಗಳು ಸಭೆಯಲ್ಲಿ ಭಾಗಿಯಾದರು.