
ಚಿಂಚೋಳಿ,ಏ.16- ತಾಲೂಕಿನ ಚಂದನಕೇರಾ ಗ್ರಾಮದಲ್ಲಿ ನಡೆದ ಕಲ್ಲು ತೂರಾಟ ಪ್ರಕರಣದಲ್ಲಿ ಅಮಾಯಕರನ್ನು ಜೈಲಿಗೆ ಅಟ್ಟಲಾಗಿದ್ದು, ಇಂತಹ ಘಟನೆ ನಡೆಯದಂತೆ ಹಾಗೂ ಗ್ರಾಮದಲ್ಲಿ ಶಾಂತಿ ಸುವ್ಯಸ್ಥೆ ಕಾಪಾಡಲು ಶಿಘ್ರವೇ ಜಿಲ್ಲಾಡಳಿತ ಶಾಂತಿ ಸಭೆ ನಡೆಸುವಂತೆ ಹಿರಿಯ ಸಮಾಜ ಸೇವಕ ರಮೇಶ ಯಾಕಾಪೂರ ಅವರು ಮನವಿ ಮಾಡಿದ್ದಾರೆ.
ಚುನಾವಣೆಗಳು ಶಾಂತಿ ಮತ್ತು ನ್ಯಾಯಸಮ್ಮತವಾಗಿ ನಡೆಯಬೇಕು, ಚಂದನಕೇರಾದಲ್ಲಿ ನಡೆದಿರುವ ಕಲ್ಲು ತೂರಾಟ ಘಟನೆಗೆ ತಮ್ಮ ವಿಷಾಧವಿದೆ, ಈ ಪ್ರಕರಣದಲ್ಲಿ ದಲಿತ, ಹಿಂದುಳಿದ ಹಾಗೂ ಅಲ್ಪಸಂಖ್ಯಾರ ಸಮುದಾಯಕ್ಕೆ ಸೇರಿದ 30 ಜನ ಯುವಕರನ್ನು ಜೈಲಿಗೆ ಹಾಕಿರುವುದು ಅವರ ಭವಿಷ್ಯಕ್ಕೆ ಮಾರಕ ವಾಗಲಿದೆ. ಅವರನ್ನು ಶಿಘ್ರವೆ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಅವರು ಹೇಳಿಕೆಯಲ್ಲಿ ಮನವಿ ಮಾಡಿದ್ದಾರೆ.