ಚಂಡ್ರಿಕಿ ಗ್ರಾಮದಲ್ಲಿ ಕುಡಿಯುವ ನೀರಿನ ಪೈಪ್ ಗಳು ಲಿಕೆಜ್

ಗುರುಮಠಕಲ್:ಮಾ.1: ತಾಲೂಕು ಸಮಿಪದ ಚಂಡ್ರಿಕಿ ಗ್ರಾಮದಲ್ಲಿ ಕುಡಿಯುವ ನೀರಿನ ಪೈಪ್ ಗಳು ಸಾರ್ವಜನಿಕರಿಗು ಶುದ್ಧವಾದ ಕುಡಿಯುವ ನೀರನ್ನು ಕುಡಿಸುವಲ್ಲಿ ಗ್ರಾಮ ಪಂಚಾಯಿತಿಯ ಪಾತ್ರ ಬಹಳ ಮುಖ್ಯವಾದದ್ದು ಆದರೆ ಮುಂಜಾನೆಯ ಸಮಯದಲ್ಲಿ ಸಾರ್ವಜನಿಕರಿಗೆ ಕುಡಿಯುವ ಪೈಪ್ ಗಳ ಮೂಲಕ ನಳದ ಮುಖಾಂತರ ಜನರಿಗೆ ಕುಡಿಯುವ ನೀರು ಬರುತ್ತವೆ ಆದರೆ ಕುಡಿಯುವ ನೀರು ಬರುವ ಸಮಯದಲ್ಲಿ ಗ್ರಾಮವೆಲ್ಲ ಸುತ್ತಾಡಿ ನೋಡಿದಾಗ ನೀರಿನ ಪೈಪುಗಳು ಲಿಕೆಜ್ ಆಗಿದ್ದು ಪೈಪುಗಳ ಮೂಲಕ ನಡುರಸ್ತೆಯಲ್ಲಿ ಎಲ್ಲೆಂದರಲ್ಲಿ ಹೊರಗೆ ಬಂದು ಅವೆ ನೀರು ಭೂಮಿ ನುಂಗುವದರ ಜೋತೆಗೆ ಹೆಚ್ಚಾದ ನೀರು ಪೈಪುಗಳ ಮೂಲಕ ಒಳಗೆ ಹೋಗಿ ಅವೆ ನೀರನ್ನು ಜನಸಾಮಾನ್ಯರು ಕುಡಿಯುತ್ತಿದ್ದಾರೆ ಇದಕ್ಕು ಮೊದಲು ಪೈಪುಗಳಿಂದ ಅಲ್ಲಲ್ಲಿ ಸುರಿಯುತ್ತಿರುವ ನೀರಿನ ದೃಶ್ಯಾವಳಿಗಳನ್ನು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಗಮನಕ್ಕೆ ತಂದರು ಸರಿಮಾಡಿಸುತ್ತೆನೆ ಎಂದು ತಿಳಿಸಿದರು ಆದರೆ ಈಗ ಗ್ರಾಮದಲ್ಲಿ ಪೈಪ್ ಲೈನ್ ಲಿಕೆಜ್ ಇರುವುದರಿಂದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಎಲ್ಲಾ ಜೀವ ಸಂಕುಲಕ್ಕು ಉಪಯೋಗ ವಾಗುವ ನೀರಿನ ಬಗ್ಗೆ ಬಹಳ ಕಳಾಜಿ ತೆಗೆದುಕೊಂಡು ಶುದ್ಧ ಕುಡಿಯುವ ನೀರು ಸಾರ್ವಜನಿಕರಿಗೆ ಕೊಡ ಬೇಕೆಂದು ಗ್ರಾಮಸ್ಥರು ತಿಳಿಸಿದರು. ಇದೆ ರೀತಿ ಮುಂದುವರೆದರೆ ಗ್ರಾಮದ ಸಾರ್ವಜನಿಕರು ಬೆರೊಂದು ಕಾಯಿಲೆಗೆ ತುತ್ತಾಗುವದರಲ್ಲಿ ಸಂಶಯವೇ ಇಲ್ಲ.