ಚಂಡರಿಕಿ ಸ.ಮಾ.ಪ್ರಾಥಮಿಕ ಶಾಲೆಯಲ್ಲಿ ಬೀಳ್ಕೊಡುಗೆ ಹಾಗೂ ಸನ್ಮಾನ

ಗುರುಮಠಕಲ್:ಸೆ.21:ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಲಯ ಯಾದಗಿರಿ ಸಂಯುಕ್ತ ಆಶ್ರಯದಲ್ಲಿ ಗುರುಮಠಕಲ್ ತಾಲೂಕು ಶತಮಾನಕಂಡ ಚಂಡರಿಕಿ ಸರಕಾರಿ ಮಾದರಿ ಪ್ರಾಥಮಿಕ ಶಾಲೆ 2023-24 ನೇ ಸಾಲಿನಲ್ಲಿ ವರ್ಗಾವಣೆ ಗೊಂಡಿರುವ ಮುಖ್ಯ ಗುರುಗಳು ಮತ್ತು ಸಹಶಿಕ್ಷಕರಿಗೆ ಬೀಳ್ಕೊಡುಗೆ ಹಾಗೂ ಉತ್ತಮ ಶಿಕ್ಷಕ ಪ್ರಶಸ್ತಿಗೆ ಪಾತ್ರರಾದ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.(ಮುಖ್ಯ ಗುರುಗಳು 3 ವರ್ಷ ಸೇವೆ ಸಲ್ಲಿಸಿದ ಶ್ರೀಮೋನಪ್ಪ ಗಚ್ಚಿನ ಮನಿ)(10 ವರ್ಷ ಸೇವೆ ಸಲ್ಲಿಸಿದ ಸಹಶಿಕ್ಷಕರು ಶ್ರೀ ಮಲ್ಲಪ್ಪ ನಾಯಿಕೊಡಿ)(25 ವರ್ಷ ಸೇವೆ ಸಲ್ಲಿಸಿದ ಸಹ ಶಿಕ್ಷಕಿ ಶ್ರೀಮತಿ ಶೋಭಾ) (ಉತ್ತಮ ಶಿಕ್ಷಕಿ ಪ್ರಶಸ್ತಿ (SಃI ಥಿಚಿಜgiಡಿi) ಪಡೆದ ಶ್ರೀಮತಿ ವಿಜಯಲಕ್ಷ್ಮೀ) ಇವರಿಗೆ ಇಂದು ಬೀಳ್ಕೊಡುಗೆ ಹಾಗೂ ಸನ್ಮಾನ ಕಾರ್ಯಕ್ರಮ ಜರುಗಿತು.ಈ ವೇಳೆ ಮುಖ್ಯ ಗುರುಗಳು ಶ್ರೀ ಕಿಷ್ಟರೆಡ್ಡಿಯವರು ಮಾತನಾಡುತ್ತ ವರ್ಗಾವಣೆ ಗೊಂಡಿರುವ ಮೂರು ಜನ ಶಿಕ್ಷಕರು ಹಾಗೂ ಉತ್ತಮ ಶಿಕ್ಷಕಿ ಪ್ರಶಸ್ತಿ ಪಡೆದಿರುವ ಶಿಕ್ಷಕಿ ಯವರಿಗು ಇಂದು ನಾಲ್ಕು ಜನ ಶಿಕ್ಷಕರನ್ನು ಶಾಲೆಯಲ್ಲಿ ಅವರಿಗೆ ಬೀಳ್ಕೊಡುಗೆ ಹಾಗೂ ಸನ್ಮಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದ್ದು ಶಿಕ್ಷಕರು ಉತ್ತಮ ಸೇವೆ ಸಲ್ಲಿಸಿದಕ್ಕಾಗಿ ಅವರನ್ನು ಶಾಲಾ ಮಕ್ಕಳು ಕಣ್ಣೀರು ಇಡುವುದು ನೋಡಿದರೆ ತಿಳಿಯುತ್ತದೆ ಶಿಕ್ಷಕರು ಉತ್ತಮ ಸೇವೆ ಸಲ್ಲಿಸಿದ್ದಾರೆಂದು ಆದರೆ ವರ್ಗಾವಣೆ ಗೊಳ್ಳುವದು ಅನಿವಾರ್ಯ ಇನ್ನು ಮುಂದಿನ ದಿನಗಳಲ್ಲಿ ಬರುವ ಶಿಕ್ಷಕರು ಇದೇ ರೀತಿ ಉತ್ತಮ ಶಿಕ್ಷಣವನ್ನು ಮಕ್ಕಳಲ್ಲಿ ಬೋಧಿಸುತ್ತಾರೆ ವಿಧ್ಯಾರ್ಥಿಗಳು ಚೆನ್ನಾಗಿ ಅಭ್ಯಾಸ ಮಾಡಿ ಉತ್ತಮ ಪ್ರಜೆಗಳಾಗಿ ದೇಶಕ್ಕೆ ಉತ್ತಮ ಸೇವೆ ನೀಡಬೇಕು ಎಂದು ಹೇಳಿದರು. ಈ ವೇಳೆ ವರ್ಗಾವಣೆ ಗೊಂಡಿರುವ ಸಹಶಿಕ್ಷಕ ಶ್ರೀ ಮಲ್ಲಪ್ಪ ಇವರು ಮಾತನಾಡಿದರು. ಈ ವೇಳೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಭೀಮರಾಯ ಮಡಗೋರ್. ಎಸ್ ಡಿ ಎಂ ಸಿ ಅಧ್ಯಕ್ಷ ಹಾಗೂ ಸದಸ್ಯರು. ಸಹಶಿಕ್ಷಕರು. ಅತಿಥಿ ಶಿಕ್ಷಕರು. ಅಡುಗೆ ಸಿಬ್ಬಂದಿ ಯವರು ಹಾಗೂ ಶಾಲಾ ವಿದ್ಯಾರ್ಥಿಗಳ ಬಳಗದವರು. ವಿಧ್ಯಾರ್ಥಿಗಳ ಪಾಲಕ ಪೆÇೀಷಕರು ಗ್ರಾಮದ ಸಾರ್ವಜನಿಕರು ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.