ಚಂಡರಿಕಿ ಗ್ರಾಮದಲ್ಲಿ ಸೋದರ ಬಾಂಧವ್ಯ ಹೆಚ್ಚಿಸಿದ ರಕ್ಷಾಬಂಧನ

ಗುರುಮಠಕಲ್:ಆ.31: ಸಹೋದರಿಯು ಇವತ್ತಿನ ದಿನ ಅಣ್ಣ ಅಥವಾ ತಮ್ಮನಿಗೆ ಎಲ್ಲಾಕಾರ್ಯ ಗಳಲ್ಲಿ ಯಶಸ್ಸು ಸಿಗಲಿ. ಸಹೋದರಿಯಾದ ನನಗೆ ನಿಮ್ಮ ಆಸರೆ ಸದಾ ನನಗೆ ಬೇಕು. ಮಾದುವೆಯಾದ ಹೆಣ್ಣು ಮಕ್ಕಳು ಕೂಡ ತವರುಮನೆಗೆ ಬಂದು ಅಣ್ಣ ಅಥವ ತಮ್ಮಂದಿ ಯರಿಗೂ ಕೂಡ ಮನೆಯಲ್ಲಿ ಮುಂಜಾನೆ ಎದ್ದು ಸ್ನಾನ ಮಾಡಿ ಹೊಸ ಬಟ್ಟೆ ಹಾಕಿಕೊಂಡು ಹಾರುತಿ ಎತ್ತಿ ಅಣ್ಣ ನೀನು ನನಗೆ ಆಸರೆಯಾಗಿರ ಬೇಕು ಅಷ್ಟೇ ಅಲ್ಲದೆ ಜಾನಪದ ಗೀತೆಯಲ್ಲಿ ಗರತಿ ತವರು ಮನೆಯಬಗ್ಗೆ ಹಾಡುತ್ತಾಳೆ ** ಹಾಲುಂಡ ತವರಿಗೆ ಏನೆಂದು ಹಾಡಲಿ. ಹೊಳೆ ದಂಡೆಯಲ್ಲಿರುವ ಕರಕಿಯ!! ಹೊಳೆ ದಂಡೆಯಲ್ಲಿರುವ ಕರಕಿಯ ಕೂಡಿಹಾಂಗ ಹಬ್ಬಾಲಿ ನಿನ್ನ ರಸಬಳ್ಳಿ** ಎಂದು ಅಣ್ಣ ನಿನ್ನ ಸಂಸಾರ. ನಿನ್ನ ಕೀರ್ತಿ. ನಿನ್ನ ಅಂತಸ್ತು ಬಹಳ ಎತ್ತರವಾಗಿ ಬೆಳಗಲಿ. ಕರಕಿಯ ಕುಡಿ ಎಷ್ಟು ಚೂಟಿದರು ಕೂಡ ಯಾವರೀತಿ ಮತ್ತೆ ಬೆಳೆಯುತ್ತದೊ ಅದೇ ರೀತಿ ಯಾವತ್ತೂ ನಿನು ಬೆಳೆಯುತ್ತ ಇರು ಎಂದು ಸಹೋದರಿ ಸಹೋದರನಿಗೆ ಕಟ್ಟುವ ನೂಲಿನ ದಾರವೆ ಸಹೋದರ ಸಹೋದರಿಯರ ಅನುಬಂದವೇ ರಕ್ಷ ಬಂದನ. ಜೈತಿರ್ಥ ರಾಯಿಕೊಟಿ. ಮಾದವಿ. ಶರಣಪ್ಪ. ಸ್ನೇಹ. ಶ್ರೇಯಾಸಿ ಇದ್ದರು.