ಚಂಡಮಾರುತ ಅಬ್ಬರ:ಗುಜರಾತ್ ತತ್ತರ

ನವದೆಹಲಿ,ಜೂ.೧೭:ಗುಜರಾತ್ ಕರಾವಳಿ ಭಾಗದಲ್ಲಿ ಬಿಪರ್ ಜಾಯ್ ಚಂಡಮಾರುತ ಅವಾಂತರವನ್ನೇ ಸೃಷ್ಟಿ ಮಾಡಿದ್ದು ಅಪಾರ ಪ್ರಮಾಣ ಹಾನಿಯಾಗಿದೆ. ಅದರಲ್ಲಿಯೂ ಸೌರಾಷ್ಟ್ರ ಮತ್ತು ಕಚ್ ಭಾಗದಲ್ಲಿ ಸಂಪೂರ್ಣ ಜಲಾವೃತವಾಗಿದೆ.ನೀರು ಎಲ್ಲೆಡೆ ತುಂಬಿರುವುದರಿಂದ ಮನೆಗಳಲ್ಲಿ ಜನರು ಪರದಾಡುವಂತಾಗಿದೆ. ರಸ್ತೆಗಳು ಕಾಣದಂತಾಗಿದೆ.ಹಲವು ಮರಗಳು ವಿದ್ಯುತ್ ಕಂಬಗಳು ಧರೆಗುಳಿದಿವೆ. ಕಛ್ ಒಂದರಲ್ಲೇ ಸುಮಾರು ೮೦,೦೦೦ ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದು, ಸುಮಾರು ೩೩,೦೦೦ ಹೆಕ್ಟೇರ್ ಕೃಷಿ ಭೂಮಿಗೆ ಹಾನಿಯಾಗಿದೆ ಎಂದು ಅಂದಾಜು ಮಾಡಲಾಗಿದೆ.
ಈ ನಡುವ ಗುಜರಾತ್‌ನಲ್ಲಿ ಸುರಿದ ಮಳೆಯಿಂದ ಹಲವು ಪ್ರದೇಶಗಳು ನೀರಿನಲ್ಲಿ ಮುಳುಗಿವೆ. ಬಹುತೇಕ ಕಡೆ ಭೂಕುಸಿತ ಸಂಭವಿಸಿ ಅಪಾರ ಪ್ರಮಾಣದ ಹಾನಿಯಾಗಿದೆ. ಭಾರೀ ಮಳೆಯಿಂದಾಗಿ ವಾಯುವ್ಯ ರೈಲ್ವೇ ವಲಯದಲ್ಲಿ ರೈಲು ಸಂಚಾರಕ್ಕೆ ತೊಂದರೆಯಾಗಿದ್ದು, ೧೪ ರೈಲುಗಳನ್ನು ರದ್ದುಗೊಳಿಸಲಾಗಿದೆ.
ಸೌರಾಷ್ಟ್ರದ ಕಚ್‌ನಲ್ಲಿನ ಸಂಪೂರ್ಣ ಜಲಾವೃತವಾಗಿದೆ. ಮನೆಗಳಿಗೆ ನೀರು ನುಗ್ಗಿ ಜನರು ಪರದಾಡುವಂತಾಗಿದೆ. ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಮನೆಯಲ್ಲಿದ್ದ ವಸ್ತುಗಳೆಲ್ಲಾ ತೇಲುತ್ತಿವೆ. ಅವುಗಳನ್ನು ಸಂಗ್ರಹಿಸುವುದು ಮನೆ ಮಂದಿಗೆ ಇನ್ನಿಲ್ಲದ ಸಮಸ್ಯೆ ತಂದೊಂಡಿದೆ.
ಬಾಗಿಲು ತೆರೆದ ದೇವಸ್ಥಾನ:
ಬಿಪರ್‌ಜಾಯ್ ಚಂಡಮಾರುತದ ಹಿನ್ನೆಲೆಯಲ್ಲಿ ಮುಚ್ಚಲಾಗಿದ್ದ ದೇವಭೂಮಿ ದ್ವಾರಕಾದಲ್ಲಿರುವ ದ್ವಾರಕಾಧೀಶ ದೇವಾಲಯವನ್ನು ಇಂದು ಭಕ್ತರಿಗಾಗಿ ತೆರೆಯುತ್ತಿದ್ದಂತೆ ಭಕ್ತರು ನೃತ್ಯ ಮಾಡಿ ಸಂಭ್ರಮಿಸಿದ್ದಾರೆ.ಚಂಡಮಾರುತದ ಬಿರುಗಾಳಿ ಸ್ಥಿತಿಯು ಜನರೇಟರ್‌ನಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿದ್ದು ಆಸ್ಪತ್ರೆಯ ಶಸ್ತ್ರಚಿಕಿತ್ಸಾ ಕೊಠಡಿಗಳಲ್ಲಿ ಬ್ಯಾಟರಿ ಬೆಳಕಿನಲ್ಲಿ ಶಸ್ತ್ರ ಚಿಕಿತ್ಸೆ ಮಾಡುವಂತಾಗಿದೆ ಎಂದು ಡಾ ಮಂಥನ್ ಫಫಲ್ ತಿಳಿಸಿದ್ದಾರೆ.
ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ ಮತ್ತು ತಾಯಿ ಮತ್ತು ಮಗಳು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಡಾ. ಕಾರ್ಯಾಚರಣೆಯಲ್ಲಿ ಭಾರ್ಗವ್ ಗಧ್ವಿ, ಡಾ ಕೈಲಾಸಗಿರಿ ಗೌಸ್ವಾಮಿ ಮತ್ತು ಡಾ ಕೃಪಾಲ್ ಅಗ್ರವತ್ ತಿಳಿಸಿದ್ದಾರೆ.
ರಾಜಸ್ತಾನದತ್ತ ಚಂಡಮಾರುತ
ಬಿಪರ್ ಜಾಯ್ ಚಂಡಮಾರತದ ತೀವ್ರತೆ ಕಡಿಮೆಯಾಗಿದ್ದು ಇದೀಗ ರಾಜಸ್ತಾನದ ಕರಾವಳಿಯತ್ತ ಮುಖಮಾಡಿದ್ದು ಬಾರಿ ಮಳೆಯಾಗುವ ಸಾಧ್ಯತೆಗಳಿವೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.’ಬಿಪರ್‌ಜಾಯ್’ ಚಂಡಮಾರುತ ದುರ್ಬಲಗೊಂಡಿದೆ ಮತ್ತು ಮುಂದಿನ ೧೨ ಗಂಟೆಗಳಲ್ಲಿ ಮತ್ತಷ್ಟು ದುರ್ಬಲಗೊಳ್ಳುವ ನಿರೀಕ್ಷೆಯಿದೆ .ಗುಜರಾತ್‌ನಿಂದ ರಾಜಸ್ಥಾನದ ಕೆಲವು ಪ್ರದೇಶಗಳಲ್ಲಿ ಭಾರೀ ಮಳೆಯಾಗಿದೆ ಎಂದು ತಿಳಿಸಿದೆ.ರಾಜಸ್ಥಾನದ ಉದಯಪುರದಲ್ಲಿ ಮಳೆ ಮತ್ತು ರಭಸದ ಗಾಳಿಯ ನಂತರ, ಕಟ್ಟಡದ ಎರಡನೇ ಮಹಡಿಯಿಂದ ಗಾಜು ಪುಡಿ ಉಡಿಯಾಗುವ ದೃಶ್ಯ ವಿಡಿಯೋದಲ್ಲಿ ದಾಖಲಾಗಿದೆ.