ಚಂಡಮಾರುತದಿಂದ ಬೆಳೆ ಹಾನಿ ಸಮೀಕ್ಷೆ ನಡೆಸಿದ ಶಾಸಕ ಯಶ್ವಂತರಾಯಗೌಡ ಪಾಟೀಲ

ಇಂಡಿ :ನ.29:ಸುಮಾರು ಎರಡು ವಾರದಿಂದ ಚಂಡಮಾರುತದಿಂದ ಮುಸುಕು ಹಾಕಿದ ವಾತಾವರಣ ಹಾಗೂ ಮಂಜಿನಿಂದ ಕೂಡಿದ ವಾತಾವರಣದಿಂದ ತೋಗರಿ,ದ್ರಾಕ್ಷಿ ಬೆಳೆ ಹಾನಿಗೊಳಗಾದ ತಾಲೂಕಿನ ಹೊರ್ತಿ,ದೇಗಿನಾಳ, ಹಳಗುಣಕಿ ಗ್ರಾಮಗಳ ರೈತರ ಜಮೀನುಗಳಿಗೆ ಶಾಸಕ ಯಶವಂತರಾಯಗೌಡ ಪಾಟೀಲ ಭಾನುವಾರ ಭೇಟಿ ನೀಡಿ ಹಾನಿಗೊಳಗಾದ ಬೆಳೆಗಳನ್ನು ವಿಕ್ಷಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಯಶವಂತರಾಯಗೌಡ ಪಾಟೀಲ, ತಾಲೂಕಿನಲ್ಲಿ 1 ಲಕ್ಷ ಹೆಕ್ಟರ್   (ಶೇ.90) ರಷ್ಟು ತೊಗರಿ ಬೆಳೆ ಹಾನಿಯಾಗಿದೆ. 3308 ಹೆಕ್ಟರ್ ಪ್ರದೇಶದಲ್ಲಿನ  ದ್ರಾಕ್ಷಿ ಬೆಳೆ ಹಾನಿಯಾಗಿದೆ.ಕಲಬುರಗಿ ಜಿಲ್ಲೆಯಲ್ಲಿ ಪ್ಲಡ್‍ನಿಂದ ಹಾನಿಯಾದ ಬೆಳೆಗಳಿಗೆ ಪರಿಹಾರ ನೀಡುತ್ತಿರುವ ಮಾದರಿಯಲ್ಲಿ ವಿಜಯಪುರ ಜಿಲ್ಲೆಯಲ್ಲಿ ಹಾನಿಯಾದ ತೊಗರಿ,ದ್ರಾಕ್ಷಿ ಬೆಳೆಗಳಿಗೆ ಪರಿಹಾರ ನೀಡುವ ಕುರಿತು ಕೃಷಿ ಹಾಗೂ ತೋಟಗಾರಿಕೆ ಸಚಿವರ ಗಮನಕ್ಕೆ ತಂದು ಪರಿಹಾರ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ದಾಳಿಂಬೆ ಬೆಳೆಯೂ ಕೂಡಾ ಸ್ವಲ್ಪ ಪ್ರಮಾಣದಲ್ಲಿ ಹಾನಿಯಾಗಿದೆ.ಹಾನಿಯಾದ ಬೆಳೆಗಳಿಗೆ ಪರಿಹಾರ ನೀಡುವ ಕುರಿತು ಬೆಳಗಾವಿಯಲ್ಲಿ ನಡೆಯುವ ಅ„ವೇಶನದಲ್ಲಿ ಸದನದ ಗಮನ ಸೆಳೆಯಲಾಗುತ್ತದೆ. ರೈತರು ಆತ್ಮಸ್ಥೈರ್ತ ಕಳೆದುಕೊಳ್ಳದೆ ಧೈರ್ಯವಾಗಿ ಇರಬೇಕು. ನಿಮ್ಮ ಹಿಂದೆ ನಾವಿದ್ದೇವೆ ಎಂದು ಹೇಳಿದರು.

ಕಳೆದ ವರ್ಷ ಇಂಡಿ,ಸಿಂದಗಿ,ಚಡಚಣ ಭಾಗದಲ್ಲಿ ಪ್ಲಡ್ ಬಂದು ಹಾನಿಯಾದ ಬೆಳೆಗಳಿಗೆ ಇಲ್ಲಿಯವರೆಗೆ ಇನ್ನೂ ಪರಿಹಾರ ನೀಡದೆ ಇರುವುದು ದುರ್ದೈವದ ಸಂಗತಿ. 2014 ರಲ್ಲಿ ಬಂದ ಆಲಿಕಲ್ಲು ಮಳೆಯಿಂದ ಹಾನಿಯಾದ ಬೆಳೆಗಳಿಗೆ ಸಾವಿರಾರು ಕೋಟಿ ಅನುಧಾನ ಬಿಡುಗಡೆ ಮಾಡಿಸಿದ್ದೇನೆ ಎಂದು ಹೇಳಿದರು.ಕಳೆದ ವರ್ಷ ತಾಲೂಕಿನ ಕೆಲ ಗ್ರಾಮದಲ್ಲಿನ ಬೆಳೆಗಳಿಗೆ ರೈತರು ಬೆಳೆ ವಿಮೆ ಮಾಡಿಸಿದ್ದರೂ ಸಹ ಬೆಳೆ ಹಾನಿಯಾದರೂ ರೈತರಿಗೆ ವಿಮೆ ಹಣ ಬಂದಿರುವುದಿಲ್ಲ. ಒಂದು ಗ್ರಾಮಕ್ಕೆ ವಿಮೆ ಬಂದಿದೆ.ಇನ್ನೊಂದು ಗ್ರಾಮಕ್ಕೆ ವಿಮೆ ಬಂದಿರುವುದಿಲ್ಲ. ಈ ಬಾರಿ ಈ ರೀತಿ ಆಗದಂತೆ ಕೃಷಿ ಇಲಾಖೆಯ ಅ„ಕಾರಿ,ಇನ್ಸುರನ್ಸ ಕಂಪನಿ ಸರಿಯಾದ ಸರ್ವೆ ಮಾಡಿ ರೈತರಿಗೆ ಅನುಕೂಲ ಕಲ್ಪಿಸಿಕೊಡಬೇಕು ಎಂದು ಹೇಳಿದರು.

ಪ್ರತಿ ವರ್ಷ ಈ ಭಾಗದ ರೈತರ ಮೇಲೆ ಅತೀವೃಷ್ಠಿ, ಅನಾವೃಷ್ಠಿ ಹಾಗೂ ನೆರೆಹಾವಳಿಯಿಂದ ಬೆಳೆಗಳು ,ಮನೆ ,ಮಠಗಳನ್ನು ಕಳೆದುಕೊಂಡು ರೈತರು ದಿಕ್ಕು ತೊಚದೆ ಕಂಗಾಲಾಗುತ್ತಿದ್ದಾರೆ.ಇಂತಹ ಸಂದಿಗ್ದ ಪರಸ್ಥಿತಿಯಲ್ಲಿ ಸರಕಾರಗಳು ಅಲ್ಪಾವ„ ಹಾಗೂ „ರ್ಘಾವ„ ಬೆಳೆಗಳ ಮೇಲೆ ವಿಶೇಷ ಯೋಜನೆಗಳನ್ನು ರೂಪಿಸಿ ರೈತರಿಗೆ ಆತ್ಮಸ್ಥೆರ್ಯ ತುಂಬಬೇಕು ಎಂದು ಹೇಳಿದರು.

ಕೆಲವು ಭಾಗಗಳಲ್ಲಿ ಕೃಷಿ ಭಾಗ್ಯ ಯೋಜನೆಯಡಿ ತಾಲೂಕಿನ ಕೃಷಿ ಹೊಂಡ ನಿರ್ಮಾಣ ಮಾಡಿ ಸುಮಾರು 8 ರಿಂದ 10 ವರ್ಷಗಳಾಗಿವೆ .ಇದರಿಂದ ಕೃಷಿ ಹೊಂಡಕ್ಕೆ ಹಾಕಿದ ತಾಡಪಾಲುಗಳು ಹಾಳಾಗಿವೆ. ಇದನ್ನು ಬದಲಾವಣೆ ಮಾಡಲು ಕೃಷಿ ಭಾಗ್ಯ ಯೋಜನೆ ಅಡಿಯಲ್ಲಿ ತೋಟಗಾರಿಕೆ, ಕೃಷ್ಠಿ ಇಲಾಖೆಗೆ ಅನುಧಾನ ಮಂಜೂರು ಮಾಡಿದರೆ ರೈತರ ಆಧಾರ ಸ್ಥಂಭವಾದ ಕೃಷಿ ಹೊಂಡದಿಂದ ವಿವಿಧ ಬೆಳೆಗಳನ್ನು ಬೆಳೆದು ರೈತರು ತಮ್ಮ ಉಪಜೀವನ ಸಾಗಿಸಲು ಅನುಕೂಲವಾಗುತ್ತದೆ ಎಂದು ಸರಕಾರಕ್ಕೆ ಒತ್ತಾಯಿಸಿದರು.ಅ„ಕಾರಿಗಳು ಜಿಲ್ಲೆಯಲ್ಲಿ ಹಾನಿಯಾದ ಬೆಳೆ,ರಸ್ತೆ,ಮನೆಗಳ ಸಂಪೂರ್ಣ ಸರ್ವೆ ಮಾಡಿ ಸೂಕ್ತ ವರದಿಯನ್ನು ಪ್ರಸ್ತಾವನೆಯ ಮೂಲಕ ಸರ್ಕಾರಕ್ಕೆ ಸಲ್ಲಿಸಬೇಕು.ಈ ವರದಿಯ ಆಧಾರದ ಮೇಲೆ ಸರ್ಕಾರ ಹಾಗೂ ಸದನದಲ್ಲಿ ಚರ್ಚಿಸುತ್ತೇನೆ ಎಂದು ಹೇಳಿದರು.

ರೈತರಾದ ಅಣ್ಣಪ್ಪ ಪೂಜಾರಿ , ಪ್ರಶಾಂತ ಚವ್ಹಾಣ, ರಾಯಗೊಂಡಪ್ಪ ಬುಯ್ಯಾರ ಜಮೀನದಲ್ಲಿನ ಬೆಳೆಗಳನ್ನು ಶಾಸಕ ಯಶವಂತರಾಯಗೌಡ ಪಾಟೀಲ ಭೇಟಿ ನೀಡಿ ಬೆಳೆ ವೀಕ್ಷಣೆ ಮಾಡಿದರು.

 ಮಹೇಶ ಬದರಿ, ಶ್ರೀಮಂತ ಇಂಡಿ, ಮಲ್ಲಿಕಾರ್ಜುನ ಬಬಲಾದ, ಕೃಷಿ  ಇಲಾಖೆ ಜಂಟಿ ನಿರ್ದೇಶಕ ರಾಜಶೇಖರ ವಿಲಿಯಂ, ತೋಟಗಾರಿಕೆ ಉಪನಿರ್ದೇಶಕ ಬರಗಿಮಠ, ತಾಲೂಕಾ ಕೃಷಿ ಅ„ಕಾರಿ ಇನಾಮದಾರ, ತೋಟಗಾರಿಕಾರಿ ಆರ್.ಟಿ.ಹಿರೇಮಠ ಇತರರು ಈ ಸಂದರ್ಭದಲ್ಲಿ ಇದ್ದರು.