
* ಚಿ.ಗೋ ರಮೇಶ್
ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ , ನಿರ್ದೇಶಕ ಶ್ರೀನಿ ಕಾಂಬಿನೇಷನ್ ಬಹುನಿರೀಕ್ಷಿತ ಚಿತ್ರ ” ಘೋಸ್ಟ್ ” ಬಹುತೇಕ ಚಿತ್ರೀಕರಣ ಪೂರ್ಣಗೊಳಿಸಿದ್ದು ಬಾಕಿ ಇರುವ ಚಿತ್ರದ ಚಿತ್ರೀಕರಣವನ್ನು ಏಪ್ರಿಲ್ ಮದ್ಯಭಾಗದಲ್ಲಿ ಮಾಡಲು ತಂಡ ಮುಂದಾಗಿದೆ. ಹಿರಿಯ ನಟ ಅನುಮಪ್ ಖೇರ್, ಮಲೆಯಾಳಂ ನಟ ಜಯರಾಮ್ ಸೇರಿದಂತೆ ಘಟಾನುಘಟಿಗಳು ಘೋಸ್ಟ್ ನಲ್ಲಿ ಮುಖಾಮುಖುಲಿಯಾಗಲಿದ್ಸಾರೆ.
ಸಂದೇಶ್ ನಾಗರಾಜ್ ಚಿತ್ರಕ್ಕೆ ಬಂಡವಾಳ ಹಾಕಿದ್ದು ಕನ್ನಡದ ಜೊತೆಗೆ ತೆಲುಗು,ತಮಿಳು, ಮಲೆಯಾಳಂ ಮತ್ತು ಹಿಂದಿಯಲ್ಲಿ ಆಗಸ್ಟ್ ವೇಳೆಗೆ ಚಿತ್ರ ತೆರೆಗೆ ಬರುವ ಸಾದ್ಯತೆ ಇದೆ.
ಇದೇ ಮೊದಲ ಬಾರಿಗೆ ಚಿತ್ರತಂಡ ಪತ್ರಕರ್ತರ ಜೊತೆ ಮುಖಾಮುಖಿಯಾಗಿತ್ತು. ಈ ವೇಳೆ ಶಿವಣ್ಣ, ಐದು ತಿಂಗಳ ಹಿಂದೆ ಚಿತ್ರೀಕರಣ ಆರಂಭವಾಗಿತ್ತು. ಚಿತ್ರದಲ್ಲಿ ಮೂರು ವಿಭಿನ್ನ ಗೆಟಪ್ ಬರಲಿದೆ. ಥ್ರಿಲ್ಲರ್ ಚಿತ್ರ. ಪ್ರತಿಯೊಂದು ಸನ್ನಿವೇಶ ಮತ್ತು ಪ್ರೇಮ್, ಮಹೇಂದ ಸಿಂಹ ಛಾಯಾಗ್ರಹಣದಲ್ಲಿ ಪೈಟಿಂಗ್ ರೀತಿ ಮೂಡಿ ಬಂದಿದೆ. ಚಿತ್ರದಲ್ಲಿನ ಸಂಭಾಷಣೆ ಸೆನ್ಸಿಬಲ್ ಆಗಿದೆ ಎಂದರು.
ಮಲೆಯಾಳಂ ನಟ ಜಯರಾಮ್ ಕನ್ನಡದಲ್ಲಿ ಮೊದಲ ಚಿತ್ರ. ಅವಕಾಶ ಸಿಗಲು ಶಿವಣ್ಣ ಕಾರಣ. ಚಿತ್ರದ ಶತದಿನೋತ್ಸವ ಸಮಾರಂಭದಲ್ಲಿ ಕನ್ನಡದಲ್ಲಿ ಮಾತನಾಡುತ್ತೇನೆ. ಕನ್ನಡ ಮುದ್ದಾದ ಭಾಷೆ ಕಲಿಯುವುದು ಸುಲಭ ಎಂದರು.
ಬಾಲಿವುಡ್ ನಟ ಅನುಪಮ್ ಖೇರ್ , ಮೊದಲ ಚಿತ್ರ ಕನ್ನಡದಲ್ಲಿ ಮಾಡುತ್ತಿದ್ದೇನೆ. ನನ್ನ ಕೆರಿಯರ್‌ನ 535ನೇ ಚಿತ್ರ. ಎಲ್ಲಾ ಭಾಷೆಯಲ್ಲಿ ಅಳು,ನಗು, ಕ್ರೌರ್ಯ ಒಂದೇ ಹೀಗಿರುವಾಗ ಕಾಲಿವುಡ್, ಮಾಲಿವುಡ್, ಟಾಲಿವುಡ್, ಬಾಲಿವುಡ್,ಸ್ಯಾಂಡಲ್ ವುಡ್ ಎನ್ನುವ ವುಡ್ ಸಂಸ್ಜೃತಿ ಯಾಕೆ ಬೇಕು. ನಾವೇಲ್ಲಾ ಭಾರತೀಯ ಸಿನಿಮಾಕ್ಕೆ ಸೇರಿದವರು.ಇತ್ತೀಚೆಗೆ ಪ್ರಾದೇಶಿಕ ಸಿನಿಮಾಗಳು ಪ್ಯಾನ್ ಇಂಡಿಯಾ ಸಿನಿಮಾ ಆಗುತ್ತಿರುವುದು ಹೆಮ್ಮೆಯ ಕ್ಷಣ ಎಂದರು.
ನಿರ್ದೇಶಕ ಶ್ರೀನಿ , ಈಗಾಗಲೇ ಶೇಕಡ 90 ರಷ್ಟು ಚಿತ್ರೀಕರಣ ಮುಗಿದಿದೆ. ಇನ್ನೂ 12 ದಿನ ಚಿತ್ರಿಕರಣ ಬಾಕಿ ಇದೆ. ಏಪ್ರಿಲ್ ತಿಂಗಳಲ್ಲಿ ಚಿತ್ರೀಕರಣ ಮಾಡಲಾಗುವುದು. ಆಕ್ಷನ್ , ಥ್ರಿಲ್ಲರ್ ಸಿನಿಮಾ ಎರಡು ದಿನಗಳಲ್ಲಿ ನಡೆಯಲಿದೆ ಎನ್ನುವ ಮಾಹಿತಿ ನೀಡಿದರು.
ನಿರ್ಮಾಪಕ ಸಂದೇಶ್, ಹಿರಿಯ ಕಲಾವಿದರ ದೊಡ್ಡ ಚಿತ್ರದಲ್ಲಿದೆ. ಘೋಸ್ಟ್ -2 ಚಿತ್ರ ಮಾಡುತ್ತೇವೆ. ಐದು ಭಾಷೆಯಲ್ಲಿ ಚಿತ್ರ ಬಿಡುಗಡೆ ಮಾಡುವ ಉದ್ದೇಶವಿದೆ ಎನ್ನುವ ಮಾಹಿತಿ ಹಂಚಿಕೊಂಡರು. ಹಿರಿಯ ನಟಿ ವಿಜಯ್ ಲಕ್ಣ್ಮಿ ಸಿಂಗ್ ಸೇರಿದಂತೆ ಮತ್ತಿತರು ಗೋಷ್ಠಿಯಲ್ಲಿದ್ದರು.