
ಸಂಜೆವಾಣಿ ವಾರ್ತೆ
ಸಂಡೂರು: ಮಾ: 9: ಮಾಜಿ ಮಂತ್ರಿಗಳಾದ ಎಂ.ವೈ.ಘೋರ್ಪಡೆ ಹಾಗೂ ಎಂ.ಪಿ. ಪಕ್ರಾಶರವರು ಜಿಲ್ಲೆಗೆ ಉತ್ತಮ ಸಂಸ್ಕೃತಿ ಮತ್ತು ಸಂಸ್ಕಾರವನ್ನು ಕಲಿಸಿದ್ದಾರೆ. ನಾನು ಅವರ ಒಡನಾಡಿ ಅಗಿದ್ದು ಇವರಿಂದ ಉತ್ತಮ ಸಂಸ್ಕಾರ, ಸಂಸ್ಕೃತಿಯನ್ನು ಕಲಿತಿದ್ದೇನೆ, ತಾಲೂಕಿನ ದೌಲತ್‍ಪುರ ಗ್ರಾಮದಲ್ಲಿ 110. ಕೆ.ವಿ. ವಿದ್ಯುತ್ ಉಪಕೇಂದ್ರವನ್ನು ಸ್ಥಾಪಿಸಲಾಗುತ್ತಿದೆ. ಗಂಡಿ ಬಸವೇಶ್ವರ ದೇವಸ್ಥಾನದಲ್ಲಿ 1.50 ಕೋಟಿ ವೆಚ್ಚದಲ್ಲಿ ಕೂಡಲ ಸಂಗಮದ ಮಾದರಿಯಲ್ಲಿ ಅಭಿವೃದ್ದಿ ಪಡಿಸುವ ಕಾಮಗಾರಿಗೆ ಚಾಲನೆಯಲ್ಲಿ ಇದೆ ಎಂದು ಈ.ತುಕರಾಂ ಹೇಳಿದ್ದಾರೆ.
ಅವರು ತಾಲೂಕಿನ ಲಕ್ಷ್ಮೀಪುರ ಗ್ರಾಮದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದರು.
ಸಂಡೂರಿನ ಪ್ರಭುಮಹಾಸ್ವಾಮಿಗಳು ಮಾತನಾಡಿ, ತಾಲೂಕಿನಲ್ಲಿ ಐತಿಹಾಸಿಕ ಶ್ರೀ ಕುಮಾರಸ್ವಾಮಿ ದೇವಾಲಯ, ಪಾರ್ವತಿದೇವಾಲಯಗಳ ಜೊತೆಯಲ್ಲಿ ಹಲವು ವಿಶೇಷ ದೇಗುಲಗಳಿವೆ, ಹರಿಶಂಕರ ಸೇರಿ ಹಲವು ತೀರ್ಥಕ್ಷೇತ್ರಗಳಿವೆ, ಇಲ್ಲಿನ ನಾರೀಹಳ್ಳದಲ್ಲಿ ಔಷಧೀಯ ಗುಣಗಳಿವೆ 1990 ರಲ್ಲಿ ಕಂಚಿ ಶ್ರೀಗಳು ಈ ಹಳ್ಳದ ದಂಡೆಯಲ್ಲಿ ಕುಳಿತು ಪೂಜಿಸಿದ್ದರು. ನಗರೀಕರಣದ ಹೊಡೆತದಿಂದ ನಾರೀಹಳ್ಳ ಕಲುಷಿತವಾಗಿದೆ. ಇದೀಗ ಹಳ್ಳದ ಸ್ವಚ್ಚತೆ ಹಾಗೂ ಫಿನಿಷಿಂಗ್ ಮಾಡುವ ಕಾಮಗಾರಿಯನ್ನು ಸಂಡೂರಿನ ಶಾಸಕರು ಕೈಗೆತ್ತಿಗೊಂಡಿದ್ದು ಉತ್ತಮ ಬೆಳವಣಿಗೆಯಾಗಿದೆ ಎಂದರು
ಪುರಸಭಾ ಅಧ್ಯಕ್ಷೆ ಅನಿತಾ ವಸಂತಕುಮಾರ್, ಉಪಾಧ್ಯಕ್ಷ ಈರೇಶ್ ಸಿಂಧೆ, ಮಾಜಿ ಅಧ್ಯಕ್ಷ ಗಡಂಬ್ಲಿ ಚನ್ನಪ್ಪ, ಎಲ್.ಹೆಚ್. ಶಿವಕುಮಾರ್, ತಾ.ಪಂ. ಸದಸ್ಯ ಬಿ.ಜಿ. ಉಜ್ಜನಗೌಡ, ಪಿಡಬ್ಲಯೂಡಿ. ಎಂ.ಇ. ಕೃಷ್ಣಾನಾಯ್ಕ ಸಣ್ಣ ನೀರಾವರಿ ಇಲಾಖೆಯ ಎಂ.ಇ. ರಾಮಾಂಜನೇಯ, ಜೆ.ಇ. ಪರಮೆಶ್ವರಪ್ಪ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಚಿತ್ರಿಕಿ ಸತೀಶ್, ಮುಖಂಡರುಗಳಾದ ವೆಂಕಟೇಶ್, ಘೋಡ್ಕೆ, ಕೆ.ಸತ್ಯಪ್ಪ, ಶ್ರೀನಿವಾಸ ಘೋಷಿ, ಡಾ. ನಾರಾಯಿಣಿ, ಜಿ. ವೀರೇಶ್, ಮೂಲಿಮನಿ ಈರಣ್ಣ, ಗ್ರಾಮಸ್ಥರೊಡಗೂಡಿ ಪುರಸಭೆಯು ಸದಸ್ಯರಾದ ಅಗಸರ ಪಂಪಣ್ಣ, ಸಂತೋಷ್, ಬ್ರಹ್ಮಾನಂದ, ನಂದಿಹಳ್ಳಿ ಹನುಮೇಶಿ, ಕೆ.ವಿ. ಸುರೇಶ್, ಸಿ.ಕೆ. ಅಶೋಕ, ಎಂ. ವತ್ಸಲಾ, ಯರ್ರೆಮ್ಮ, ಲತಾ ಎಂ.ಸಿ. ಅಲ್ಲದೆ ಪುರಸಭೆಯ ಹಲವಾರು ಸದಸ್ಯರು ಉಪಸ್ಥಿತರಿದ್ದರು.
One attachment • Scanned by Gmail