ಘೋಡವಾಡಿಯಲ್ಲಿ 40 ಸಾವಿರ ಮೌಲ್ಯದ ಗಾಂಜಾ ವಶ: ಓರ್ವನ ಬಂಧನ

ಬೀದರ:ಸೆ.15- ಹುಮನಾಬಾದ ತಾಲೂಕಿನ ಘೋಡವಾಡಿ ಗ್ರಾಮದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿ ಸೇರಿದಂತೆ 3.5 ಕೆ.ಜಿ ಗಾಂಜಾ ಪ್ಯಾಕೇಟ್ ನ್ನು ಪೋಲಿಸರು ವಶಪಡಿಸಿಕೊಂಡಿರುವ ಘಟನೆ ಸೋಮವಾರ ಮಧ್ಯಾನ ಜರುಗಿದೆ.
ಖಚಿತ ಮಾಹಿತಿ ಮೇರೆಗೆ ಪಿ.ಎಸ್.ಐ ರವಿಕುಮಾರ ಹಾಗೂ ಸಿಬ್ಬಂದಿ ದಾಳಿ ನಡೆಸಿ ಗಾಂಜಾ ಮಾರಾಟ ಮಾಡುತ್ತಿದ್ದ ಗ್ರಾಮದ ಮಹ್ಮದ ಗೌಸ ಬೊಂಗೆ ಎಂಬುವವನ್ನು ಬಂಧಿಸಿ, ಅವನಿಂದ 35 ಸಾವಿರ ರೂ.ಗಳ ಮೌಲ್ಯದ 3.5 ಕೆ.ಜಿ ಗಾಂಜಾ ಪ್ಯಾಕೇಟ್ ಹಾಗೂ ನಗದು 4,970 ರೂ.ಗಳನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತ ವ್ಯಕ್ತಿ ಸ್ಥಳೀಯ ವ್ಯಕ್ತಿಯಿಂದ ಪಡೆದು ಮಾರಾಟ ಮಾಡುತ್ತಿರುವುದಾಗಿ ಹೇಳಿದ್ದಾನೆ ಎಂದು‌ ಪೊಲೀಸ್ ಮೂಲಗಳು ತಿಳಿಸಿವೆ. ಈ ಕುರಿತು ಹುಮನಾಬಾದ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.