ಘಾಜಿಯಾಬಾದ್ ನಲ್ಲಿ ಛಾವಣಿ ಕುಸಿದು 18 ಮಂದಿ ಸಾವು

ನವದೆಹಲಿ, ಜ 3-ಉತ್ತರ ಪ್ರದೇಶ ಘಾಜಿಯಾಬಾದ್​ನ ಮುರದ್​ನಗರ್​ನಲ್ಲಿ ಚಿತಾಗಾರವೊಂದರ ಛಾವಣೆ ಕುಸಿತು 18ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವ ಘಟನೆ ಸಂಭವಿಸಿದೆ.
ಈ ದುರಂತದಲ್ಲಿ ಕಟ್ಟಡದ ಅವಶೇಷಗಳಡಿ ಇನ್ನೂ ಅನೇಕರು ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, ಎನ್​ಡಿಆರ್​ಎಫ್ ಮತ್ತು ಪೊಲೀಸರ ತಂಡಗಳು ಸ್ಥಳಕ್ಕೆ ದೌಡಾಯಿಸಿ ರಕ್ಷಣಾ ಕಾರ್ಯಾಚರಣೆಯಲ್ಲಿ ನಿರತರಾಗಿದ್ದಾರೆ.
ಕುಸಿದು ಬಿದ್ದ ಛಾವಣಿಯು ನಿರ್ಮಾಣ ಹಂತದಲ್ಲಿದ್ದ ಕಟ್ಟಡದ ಭಾಗಕ್ಕೆ ಸೇರಿತ್ತು. ಅವಘಡಕ್ಕೆ ಸಿಲುಕಿವರಲ್ಲಿ ಬಹುತೇಕ ಮಂದಿ ರಾಮ್ ಧನ್ ಎಂಬ ವ್ಯಕ್ತಿಯೊಬ್ಬರ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಲು ಬಂದಿದ್ದರೆಂದು

ಪ್ರದಾನಿ‌ ಸಂತಾಪ
ಉತ್ತರ ಪ್ರದೇಶದ ಮುರಾದ್‌ನಗರದಲ್ಲಿ ಚಾವಣಿ ಕುಸಿದು 18 ಮಂದಿ ಮೃತಪಟ್ಟ ಘಟನೆಯನ್ನು ‘ದುರದೃಷ್ಟಕರ’ ಎಂದು ಪ್ರಧಾನಿ ಮೋದಿ ತೀವ್ರ ಸಂತಾಪ‌‌ ವ್ಯಕ್ತಪಡಿಸಿದ್ದಾರೆ.
ದುರ್ಘಟನೆಯಲ್ಲಿ ಸಾವಿಗೀಡಾದವರ ಕುಟುಂಬ ಸದಸ್ಯರಿಗೆ ಟ್ವೀಟ್‌ ಮೂಲಕ ಸಂತಾಪ ಸೂಚಿಸಿದ್ದಾರೆ .ಗಾಯಾಳುಗಳು ಶೀಘ್ರವಾಗಿ ಗುಣಮುಖರಾಗಲಿ ಎಂದು ಪ್ರಾರ್ಥಿಸಿದ್ದಾರೆ.