ಘನ ತ್ಯಾಜ್ಯ ಸಂಗ್ರಹಣಾ ಶುಲ್ಕ ಅಭಿಯಾನ ಪ್ರಾರಂಭ

ಕೋಲಾರ,ಆ,೨೦:ನರಸಾಪುರ ಗ್ರಾಮ ಪಂಚಾಯಿತಿಯಲ್ಲಿ ಘನ ತ್ಯಾಜ್ಯ ಸಂಗ್ರಹಣಾ ಶುಲ್ಕ ಅಭಿಯಾನವನ್ನು ಹಮ್ಮಿಕೋಳ್ಳಲಾಗಿತ್ತು.
ಗ್ರಾಪಂ ಅಧಿಕಾರಿ ಮುನಿರಾಜು ಮಾತನಾಡಿ ಮೊದಲಿಗೆ ಘನ ತ್ಯಾಜ್ಯ ಸಂಗ್ರಹಣಾ ಶುಲ್ಕ ಅಭಿಯಾನ ಆರಂಭಕ್ಕೆ ಕಾರಣರಾದ ಅಧ್ಯಕ್ಷರಾದ ಕೃಷ್ಣಪ್ಪ ಮತ್ತು ಎಂ.ಬಿ.ಕೆ ಭಾರತಿ ರವರಿಗೆ ಧನ್ಯವಾದಗಳನ್ನು ಹೇಳುತ್ತಾ ಗ್ರಾಮ ಪಂಚಾಯಿತಿಯಲ್ಲಿ ಎಲ್ಲಾ ಮನೆಗಳವರು ಮತ್ತು ಅಂಗಡಿಗಳವರು ಘನ ತ್ಯಾಜ್ಯ ಸಂಗ್ರಹಣಾ ಶುಲ್ಕ ನೀಡಿಬೇಕು ಮುಂದಿನ ದಿನಗಳಲ್ಲಿ ಗ್ರಾಮದ ಎಲ್ಲಾ ಮನೆಗಳವರು ತ್ಯಾಜ್ಯ ನೀಡಿ ಸಹಕರಿಸಿ ವಾರದಲ್ಲಿ ಎರಡು ದಿನ ನಿಮ್ಮ ವಾರ್ಡ್‌ಗಳಿಗೆ ಸ್ವಚ್ಚತಾ ವಾಹಿನಿ ವಾಹನ ಕಳುಹಿಸಿ ಕೋಡಲಾಗುವುದು ಪ್ರತಿ ವಾರ್ಡ್ ಮತ್ತು ಗ್ರಾಮ ತ್ಯಾಜ್ಯ ಮುಕ್ತ ಮಾಡಲು ಎಲ್ಲರ ಪಾತ್ರ ಮುಖ್ಯ ಎಲ್ಲರೂ ತ್ಯಾಜ್ಯ ನೀಡಿ ನಿಮಗೆ ಮತ್ತು ಮುಂದೆ ನಿಮ್ಮ ಮಕ್ಕಳಿಗೆ ಒಳ್ಳೇ ಪರಿಸರ ಕಾಪಾಡಲು ಮನವಿ ಮಾಡಿದರು
ಗ್ರಾಮ ಪಂಚಾಯ್ತಿ ಅಧ್ಯಕ್ಷ ಕೃಷ್ಣಪ್ಪ ಮಾತನಾಡಿ, ಎಲ್ಲಾ ಸದಸ್ಯರುಗಳು ತಮ್ಮ ತಮ್ಮ ವಾರ್ಡ್ ಮತ್ತು ಹಳ್ಳಿಗಳಲ್ಲಿ ತ್ಯಾಜ್ಯ ನೀಡಲು ಮತ್ತು ಘನ ತ್ಯಾಜ್ಯ ಸಂಗ್ರಹಣಾ ಶುಲ್ಕ ನೀಡಲು ಜನರಿಗೆ ಪ್ರೋತ್ಸಹಿಸುವಂತೆ ಮನವಿ ಮಾಡಿದರು,
ಪಂಚಾಯಿತಿ ಅಧ್ಯಕ್ಷ ಕೃಷ್ಣಪ್ಪ, ಉಪಾದ್ಯಕ್ಷ ಪದ್ಮಮ್ಮ, ಸದಸ್ಯರಾದ ಗೊಪಿನಾಥ್, ಹೇಮಾವತಿ, ಹಸೀನಾ, ಪ್ರಭಾಕರ್, ರಾಜೇಂದ್ರ, ಪಾರ್ವತಮ್ಮ, ಗಾಯಿತ್ರಿ, ಮುನಿರಾಜ, ತಬಸ್ಸುಂ,ಕುಮಾರ್,ಅಮರಾವತಿ, ಚಂದ್ರಶೇಖರ್,ಶೈಲ,ಸುಮನ್ ಚಂದ್ರ .ಸುಮಿತ್ರ,ಚಂದ್ರಪ್ಪ, ಬಿಲ್‌ಕಲೆಕ್ಟರ್ ಸಂತೋಷ್, ಸ್ವಚ್ಚತಾ ವಾಹಿನಿ ವಾಹನದ ಚಾಲಕಿ ಸರಸ್ವತಿ ಸಹಾಯಕಿ ಲಕ್ಷಮ್ಮ,ಕೃಷಿ ಸಖಿ,ಪಶು ಸಕಿ,ಎಂ.ಬಿ.ಕೆ.ಭಾರತಿ ಮತ್ತು ನರಸಾಪುರ ಗ್ರಾಮದ ನಿವಾಸಿಗಳು ಇದ್ದರು.