ಘನ ತ್ಯಾಜ್ಯ ವಿಲೇವಾರಿ ಘಟಕಗಳ ನಿರ್ಮಾಣಕ್ಕೆ ಭೂಮಿ ಪೂಜೆ

ವಿಜಯಪುರ, ಜು.27-ವಿಜಯಪುರ ತಾಲೂಕಿನ ನಾಗಠಾಣ ಮತಕ್ಷೆತ್ರದ ಹೊನ್ನುಟಗಿ ಮತ್ತು ಹಡಗಲಿ ಗ್ರಾಮಗಳಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕಗಳ ನಿರ್ಮಾಣಕ್ಕೆ ಅರಣ್ಯ ಹಾಗೂ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವರಾದ ಉಮೇಶ ಕತ್ತಿ ಅವರು ಜುಲೈ 25ರಂದು ಭೂಮಿ ಪೂಜೆ ನೆರವೇರಿಸಿದರು.
ಅಂದು ಮಧ್ಯಾಹ್ನವರೆಗೆ ನಡೆದ ಕೆಡಿಪಿ ಸಭೆಯ ಬಳಿಕ ಸಚಿವರು ನೇರವಾಗಿ ಹೊನ್ನುಟಗಿ ಗ್ರಾಮಕ್ಕೆ ಬಳಿಕ ಹಡಗಲಿ ಗ್ರಾಮಕ್ಕೆ ತೆರಳಿ ತಲಾ 11.90 ಲಕ್ಷ ರೂ ವೆಚ್ಚದಲ್ಲಿ ಘನ ತ್ಯಾಜ್ಯ ನಿರ್ಮಾಣ ಘಟಕಗಳಿಗೆ ಭೂಮಿ ಪೂಜೆ ನೆರವೇರಿಸಿದರು.
ಜಿಲ್ಲಾ ಪಂಚಾಯತ್, ಪಂಚಾಯತ್ ರಾಜ್ಯ ಎಂಜಿನಿಯರಿಂಗ್ ವಿಭಾಗದ ಆಶ್ರಯದಲ್ಲಿ 2020-21ನೇ ಸಾಲಿನ ಸ್ವಚ್ಚ ಭಾರತ ಮಿಷನ್ ಕಾರ್ಯಕ್ರಮದಡಿಯಲ್ಲಿ ಈ ಕಾಮಗಾರಿಗಳಿಗೆ ಸಚಿವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ನಾಗಠಾಣ ಮತಕ್ಷೇತ್ರದ ಶಾಸಕರಾದ ಡಾ.ದೇವಾನಂಧ ಫೂ ಚವ್ಹಾಣ್, ಶಾಸಕರಾದ ಸೋಮನಗೌಡ ಬಿ ಪಾಟೀಲ ಸಾಸನೂರ, ರಮೇಶ ಬೂಸನೂರ, ಜಿಲ್ಲಾಧಿಕಾರಿಗಳಾದ ಡಾ.ವಿಜಯಮಹಾಂತೇಶ ದಾನಮ್ಮನವರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂಧೆ, ಅಪರ ಜಿಲ್ಲಾಧಿಕಾರಿ ರಮೇಶ ಕಳಸದ, ಸಹಾಯಕ ಆಯುಕ್ತರಾದ ಬಲರಾಮ ಲಮಾಣಿ, ರಾಮಚಂದ್ರ ಗಡಾದೆ, ತಹಸೀಲ್ದಾರ ಸಿದ್ದರಾಯ ಬೋಸಗಿ, ಹೊನ್ನುಟಗಿ ಗ್ರಾಪಂ ಅಧ್ಯಕ್ಷರಾದ ರಾಜು ಚವ್ಹಾಣ್, ಉಪಾಧ್ಯಕ್ಷೆ ಲಕ್ಷ್ಮಿ ಭಜಂತ್ರಿ, ಸದಸ್ಯರಾದ ಸೀತಾ ಚವ್ಹಾಣ್, ಅಶೋಕ ರಾಠೋಡ, ಅಪ್ಪು ಚವ್ಹಾಣ್, ಸದಾಶಿವ ಬಿಸನಾಳ, ಹಡಗಲಿ ಗ್ರಾಪಂ ಅಧ್ಯಕ್ಷೆ ಸುಶಿಲಾಬಾಯಿ ಜಾದವ್, ಉಪಾಧ್ಯಕ್ಷರಾದ ಬಾಪುಗೌಡ ಬಿರಾದಾರ, ಸದಸ್ಯರಾದ ಸೋಮು ಜಾದವ್, ಪಿಡಿಓ ರಾಚಯ್ಯ ಶಂಕರ ಪಠಪತಿ, ಆಶಾ ಕಾರ್ಯಕರ್ತೆಯರಾದ ಗೀತಾ ಚವ್ಹಾಣ್, ಪ್ರೇಮಾ ಕಸೋಳಿ, ಪೂಜಾ ಚೂರಿ, ಅಂಗನವಾಡಿ ಕಾರ್ಯಕರ್ತೆಯರಾದ ಸುಲೋಚನಾ ಮನಗೂಳಿ, ಸುಮಾ ನಾಯಿಕೊಡಿ, ಸಿದ್ದಮ್ಮ ಗುಂಟಿ, ರೇಣುಕಾ ಜುಮನಾಳ, ಹಡಗಲಿ ಗ್ರಾಮದ ಹಿರಿಯರಾದ ಸುಭಾಷಗೌಡ ಪಾಟೀಲ ರಮೇಶ ನಾಗಠಾಣ ಹಾಗೂ ಇತರರು ಇದ್ದರು.