ಘನತ್ಯಾಜ್ಯ ಸಾಗಿಸುವ ವಾಹನ ಚಾಲಕರ ಸೇವೆ ಖಾಯಂಗೆ ಆಗ್ರಹ

ಕಲಬುರಗಿ,ನ.9-ಘನ ತ್ಯಾಜ್ಯ ಸಾಗಿಸುವ ವಾಹನ ಚಾಲಕರು ಮತ್ತು ಪೌರಕಾರ್ಮಿಕರನ್ನು ಖಾಯಂಗೊಳಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು, ಅವರಿಗೆ ಘನತೆಯ ಜೀವನ, ಯೋಗ್ಯವಾದ ಕೆಲಸದ ವಾತಾವರಣ, ದಬ್ಬಾಳಿಕೆಯಿಂದ ಸ್ವಾತಂತ್ರ್ಯ ಮತ್ತು ಬದುಕಲು ಅವಶ್ಯಕವಾದ ವೇತನ ನೀಡಬೇಕು ಎಂದು ಕೇ.ಪ್ರ.ತ್ಯಾ.ಸಾ.ವಾ.ಚಾ.ಸಂಘ (ಎಐಸಿಸಿಟಿಯು)ದ ಪ್ರಧಾನ ಕಾರ್ಯದರ್ಶಿ ಪಿ.ಪಿ ಅಪ್ಪಣ್ಣ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ ಪಟ್ಟಣ ಪಂಚಾಯಿತಿ ಕೆಲಸ ನಿರ್ವಹಿಸುತ್ತಿರುವ ಕಸ ಸಂಗ್ರಹಿಸುವ ಮತ್ತು ವಿಲೇವಾರಿ ಮಾಡುವ ವಾಹನಗಳ ಚಾಲಕರು, ಲೋಡರ್‍ಗಳು ಮತ್ತು ಕ್ಲೀನರ್‍ಗಳು ನೇರ ವೇತನ ಪಾವತಿಯಡಿ ತಂದು ಏಕ ಕಾಲಕ್ಕೆ ಪೌರಕಾರ್ಮಿಕರೆಂದು ಖಾಯಂಗೊಳಿಸಬೇಕು, ಏಳನೇ ವೇತನ ಆಯೋಗದ ಪ್ರಕಾರ ಮತ್ತು ಸಮಾನ ಕೆಲಸಕ್ಕೆ ಸಮಾನ ವೇತನ ” ತತ್ವದ ಆಧಾರದ ಮೇಲೆ ವಾಹನಗಳ ಚಾಲಕರು , ಲೋಡರ್‍ಗಳು ಮತ್ತು ಕ್ಲೀನರ್‍ಗಳು ಸಮಾನ ವೇತನ ನೀಡಬೇಕು, ಎಲ್ಲಾ ಕಾರ್ಮಿಕರಿಗೆ ಕಳೆದ 4 ವರ್ಷಗಳಿಂದ ವೇತನ ಹೆಚ್ಚಳವಾಗಿಲ್ಲ ಎಲ್ಲಾರಿಗೂ 35,000/- ವರೆಗು ಹೆಚ್ಚಿಸಬೇಕು, ನೆಪ ಮಾತ್ರ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ ಪೌರಕಾರ್ಮಿಕರನ್ನು ಒಳಗೊಂಡಂತೆ ಇತರೆ ಎಲ್ಲ ಮರಣ ಹೊಂದಿದ್ದಲ್ಲಿ, ಅವರ ವರಿಗೆ ತಕ್ಷಣವೇ ಲಕ್ಷ ರೂ.ಗಳನ್ನು ವಿತರಿಸಬೇಕ ಮತ್ತು ಅನುಕಂಪದ ನೇಮಕಾತಿಯಡಿ ಅವಲಂಬಿತರನ್ನು ಸೇವೆಗೆ ತೆಗೆದುಕೊಳ್ಳಬೇಕು, ಐಪಿಡಿ ಸಾಲಪ್ಪ ವರದಿಯನ್ನು ತಕ್ಷಣವೇ ಜಾರಿಗೊಳಿಸಬೇಕು, ರಾಜ್ಯ ಸರ್ಕಾರ 2013 ರಲ್ಲಿ ನೇಮಿಸಿದ್ದ ತ್ರಿಸದಸ್ಯ ಸಮಿತಿಯ ಶಿಫಾರಸ್ಸುಗಳನ್ನು ಅನುಷ್ಠಾನಗೊಳಿಸಬೇಕು, ತ್ಯಾಜ್ಯ ನಿರ್ವಹಣೆಯಲ್ಲಿನ ಎಲ್ಲಾ ರೀತಿಯ ಗುತ್ತಿಗೆ ಪದ್ಧತಿಯನ್ನು ರದ್ದುಗೊಳಿಸಬೇಕು, ಎಲ್ಲಾ ವಾಹನಗಳ ಚಾಲಕರು, ಲೋಡರ್‍ಗಳು ಮತ್ತು ಕ್ಲೀನರ್‍ಗಳು ಉಚಿತವಾಗಿ ವಸತಿ ಸೌಲಭ್ಯವನ್ನು ಒದಗಿಸಬೇಕು, ವಾಹನಗಳ ಚಾಲಕರು, ಲೋಡರ್‍ಗಳು ಮತ್ತು ಕ್ಲೀನರ್‍ಗಳು ಮಕ್ಕಳಿಗೆ ಪ್ರಾಥಮಿಕ-ಉನ್ನತ ಶಿಕ್ಷಣವನ್ನು ಉಚಿತವಾಗಿ ನೀಡಬೇಕು, ವಾಹನಗಳ ಚಾಲಕರು, ಲೋಡರ್‍ಗಳು ಮತ್ತು ಕ್ಲೀನರ್‍ಗಳು ಎಲ್ಲಾ ರೀತಿಯ ರಜೆ ಸೌಲಭ್ಯಗಳನ್ನು ನೀಡಬೇಕು, ಅಧಿಕಾರಿಗಳು ಮತ್ತು ಸಾರ್ವಜನಿಕರು ಪೌರಕಾರ್ಮಿಕರೊಂದಿಗೆ ಗೌರವ ಮತ್ತು ಘನತೆಯಿಂದ ವರ್ತಿಸುವ ಮೂಲಕ ಅವರ ಜಾತಿವಾದಿ ಮತ್ತು ವರ್ಗವಾದಿ ಪೂರ್ವಾಗ್ರಹಗಳನ್ನು ನಿಲ್ಲಿಸಬೇಕು, ಎಲ್ಲಾ ಕಾರ್ಮಿಕರಿಗೆ ಕೆಲಸ ನಿರ್ವಹಿಸುವ ಸ್ಥಳದಲ್ಲಿ ಕುಡಿಯುವ ನೀರು, ವಿಶ್ರಾಂತಿಕೊಠಡಿ, ಶೌಚಾಲಯ, ಲಾಕರ್‍ಗಳು, ಸುರಕ್ಷತಾ ಉಡುಗೆ, ಬಟ್ಟೆ ಬದಲಾಯಿಸುವ ಕೊಠಡಿ ಮತ್ತು ಇತರ ಅಗತ್ಯ ಸೌಲಭ್ಯಗಳನ್ನು ದೊರಕಿಸಿಕೊಡಬೇಕು ಎಂದು ಅವರು ಆಗ್ರಹಿಸಿದರು.
ಸಂಘದ ರಾಜ್ಯ ಉಪಾಧ್ಯಕ್ಷ ಮೈತ್ರಿ ಕೃಷ್ಣನ್, ಜಂಟಿ ಕಾರ್ಯದರ್ಶಿ ನಾಗರಾಜ ಪೂಜಾರ, ಜಿಲ್ಲಾ ಅಧ್ಯಕ್ಷ ಬಾಬು ಬೊವಿ, ಉಪಾಧ್ಯಕ್ಷ ಶಿವಾಜಿ ತಾರಾಸಿಂಗ್, ಜಿಲ್ಲಾ ಕಾರ್ಯದರ್ಶಿ ಶಿವಾಜಿ ಪಾಂಡುರಂಗ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.