ಘನತ್ಯಾಜ್ಯ ಮರುಬಳಕೆ ಸಂಗ್ರಹ ಕೇಂದ್ರಕ್ಕೆ ಚಾಲನೆ

ಬ್ಯಾಡಗಿ,ಮೇ22: ನಾವು ಬದಲಾಗದೇ ಸಮಾಜ ಬದಲಾವಣೆ ಸಾಧ್ಯವಿಲ್ಲ ಪರಿಸರದ ಜೊತೆ ಜೊತೆಗೆ ನಾವು ಬದುಕು ಸಾಗಿಸಬೇ ಕಾಗಿದೆ ಘನತ್ಯಾಜ್ಯ ವಸ್ತುಗಳು ಬಹಳಷ್ಟು ಅಪಾಯಕಾರಿ ಫಲಿತಾಂಶ ನೀಡಲಿದ್ದು ನೈರ್ಮಲ್ಯ ಕಾಪಾಡುವಲ್ಲಿ ನಾವೆಲ್ಲ ಸಾಮೂಹಿಕ ಹೊಣೆಗಾರಿಕೆ ತೋರಬೆಕಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಬಿ.ಬಿ.ಗೊರೋಶಿ ಹೇಳಿದರು.
`ನನ್ನಜೀವನ ನನ್ನ ಸ್ವಚ್ಚನಗರ’ ಯೋಜನೆಯಡಿ ಘನತ್ಯಾಜ್ಯ ಮರುಬಳಕೆ ಸಂಗ್ರಹ ಕೇಂದ್ರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ನಗರ ಪ್ರದೇಶದ ಜನರು ಕ್ರಮಬದ್ಧ ಜೀವನ ನಡೆಸುತ್ತಿಲ್ಲ ಸತ್ಯವಾದ ಮಾತು, ಮನೆ ಬಾಗಿಲಲ್ಲೇ ಕಸ ಸಂಗ್ರಹಣೆ ವೈಜ್ಞಾನಿಕವಾಗಿ ವಿಲೇವಾರಿ ಬೀದಿಗೊಂದು ಸಾರ್ವಜನಿಕ ನೈರ್ಮಲ್ಯ ವಿಚಾರದಲ್ಲಿ ಬಹಳಷ್ಟು ಹಿಂದು ಳಿದಿದ್ದಾರೆ ಕಸ ಸಂಗ್ರಹಣೆ ಇನ್ನಿತರ ವ್ಯವಸ್ಥೆಗಳನ್ನು ಪೌರಾಡಳಿತ ಇಲಾಖೆ ಸೇರಿದಂತೆ ಸರ್ಕಾರಗಳು ಕಲ್ಪಿಸಿದ್ದರೂ ಸಹ
ಬೀದಿ ಬದಿಯಲ್ಲಿ ಕಸ ಸಂಗ್ರಹಣೆಯಾಗುತ್ತಿದೆ ಎಂದು ಖೇದ ವ್ಯಕ್ತಪಡಿಸಿದರು.
ಘನತ್ಯಾಜ್ಯ ವಿಲೇವಾರಿ ಮಾಡುವುದು ಸುಲಭದ ಕೆಲಸವಲ್ಲ, ನಿಗದಿತ ವೇಳೆಯಲ್ಲಿ ಕಸ ಸಂಗ್ರಹಣೆ ಮತ್ತು ವೈಜ್ಞಾನಿಕ ವಿಲೇವಾರಿ ಇತ್ಯಾದಿ ವಿಷಯವನ್ನೊಳಗೊಂಡಿದ್ದು ಇದರಲ್ಲಿ ವಿಫಲವಾದರೆ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿ ಣಾಮ ನಿಶ್ಚಿತ ಹೀಗಾಗಿ ಪಟ್ಟಣದ ವ್ಯಾಪ್ತಿಯಲ್ಲಿ ಸಂಪೂರ್ಣ ಸ್ವಚ್ಛತೆ ಸಾಧಿಸಲು ಹೆಚ್ಚಿನ ಪ್ರಯತ್ನ ಮಾಡುವಂತೆ ಸಲಹೆ ನೀಡಿದರು.
ನೈರ್ಮಲ್ಯದ ಪ್ರಾಮುಖ್ಯತೆಯನ್ನು ಸಮುದಾಯದ ಜನರು ಅರ್ಥೈಸಿಕೊಳ್ಳಬೇಕು, ಮುಂಬರುವ ಪೀಳಿಗೆಗೆ ಆರೋಗ್ಯ ವಂತ ಸಮಾಜ ನೀಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಸಾರ್ವಜನಿಕರ ಅನುಕೂಲಕ್ಕೆ ಪಟ್ಟಣದಲ್ಲಿ ಸಕಲ ಸೌಲಭ್ಯ ಗಳನ್ನು ಪುರಸಭೆ ಒದಗಿಸುತ್ತಿದ್ದು ಎಂದರು.
ಅಧ್ಯಕ್ಷೆ ಫಕ್ಕೀರಮ್ಮ ಛಲವಾದಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು, ಉಪಾಧ್ಯಕ್ಷೆ ಮಲ್ಲಮ್ಮ ಪಾಟೀಲ, ಸದಸ್ಯರಾದ ಕಲಾವತಿ ಬಡಿಗೇರ, ಸರೋಜಾ, ಗಾಯತ್ರಿ ರಾಯ್ಕರ್, ಶಿವರಾಜ್ ಅಂಗಡಿ, ಮೆಹಬೂಬ್ ಅಗಸನಹಳ್ಳಿ ವ್ಯವಸ್ಥಾಪಕಿ ನಾಗರತ್ನಾ ಹೊಸ್ಮನಿ, ಸಿಬ್ಬಂದಿ ಮಲ್ಲಿಕಾರ್ಜುನ ಯಲ್ಲಣ್ಣವರ, ಶಿವಪುತ್ರ ದೊಡ್ಮನಿ, ತಬಸ್ಸುಮ್, ಶೃತಿ, ಮಾಲತೇಶ ಮೋಟೆಬೆನ್ನೂರ, ಎನ್‍ಜಿಓ ವಿದ್ಯಾಶೆಟ್ಟಿ ಇನ್ನಿತರರಿದ್ದರು.


ಪಟ್ಟಣದ ಸಂತೇ ಮೈದಾನ ಮತ್ತು ಕಲಾಭವನದ ಬಳಿ ಘನತ್ಯಾಜ್ಯ ಮರುಬಳಕೆ ಸಂಗ್ರಹ ಕೇಂದ್ರಗಳನ್ನು ಆರಂಭಿಸಿದ್ದು, ಬೆಳಿಗ್ಗೆ 7 ರಿಂದ ಮದ್ಯಾಹ್ನ 1 ರವರೆಗೆ ಕಾರ್ಯನಿರ್ವಹಿಸಲಿದೆ. ಈ ವೇಳೆ ಸಾರ್ವಜನಿಕರು ತಮ್ಮ ಬಳಿಯಿದ್ದ ಹಳೆಬಟ್ಟೆ, ಪುಸ್ತಕ, ಪ್ಲಾಷ್ಟಿಕ್ ಚೀಲ, ದಿನಪತ್ರಿಕೆ ಮಾಸ ಪತ್ರಿಕೆ ಇನ್ನಿತರ ವಸ್ತುಗಳನ್ನು ನಮಗೆ ನೀಡಿ ಬಳಿಕ ನಮ್ಮಿಂದ ಬಟ್ಟೆ ಚೀಲ ಪುಸ್ತಕ ಇನ್ನಿತರ ವಸ್ತುಗಳನ್ನು ಪೆದುಕೊಳ್ಳಬಹುದಾಗಿದೆ.. ಚನ್ನಪ್ಪ ಅಂಗಡಿ ಪರಿಸರ ಅಭಿಯಂತರ..