ಘನತ್ಯಾಜ್ಯ ನಿರ್ಮಾಣ ಘಟಕಕ್ಕೆ ಕೃಷ್ಣಬೈರೇಗೌಡ ಭೂಮಿಪೂಜೆ

ಬೆಂಗಳೂರು: ಬೆಟ್ಟಹಲಸೂರು ಮತ್ತು ಮೀನುಕುಂಟೆ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಎಂಬಸಿ ಸಮೂಹ ಹಾಗೂ ಇಕೋಗ್ರಾಮ್ ಸಹಯೋಗದೊಂದಿಗೆ ಸುಮಾರು ೧.೪೫ ಕೋಟಿ ರೂ. ಅಂದಾಜುವೆಚ್ಚದಲ್ಲಿ ನೂತನವಾಗಿ ಬಹುಗ್ರಾಮ ಘನತ್ಯಾಜ್ಯ ನಿರ್ಮಾಣ ಘಟಕ ಸ್ಥಾಪಿಸಲಾಗುತ್ತಿದೆ.
ಬೆಟ್ಟಹಲಸೂರು ಸರ್ವೆ.ನಂ.೨೫೯ರಲ್ಲಿ ನಿರ್ಮಿಸುತ್ತಿರುವ ಬಹುಗ್ರಾಮ ಘನತ್ಯಾಜ್ಯ ನಿರ್ಮಾಣ ಘಟಕಕ್ಕೆ ಶಾಸಕ, ಮಾಜಿ ಸಚಿವ ಕೃಷ್ಣಬೈರೇಗೌಡ ಇಂದು ಭೂಮಿಪೂಜೆ ನೆರವೇರಿಸಿದರು.
ನಂತರ ಮಾತನಾಡಿದ ಅವರು, ಗ್ರಾಮಾಂತರ ಪ್ರದೇಶಗಳಲ್ಲಿ ಕಸ ಬೇರ್ಪಡಿಸುವುದು ಸವಾಲಿನ ಕೆಲಸ. ಕಸ ಎಲ್ಲೆಂದರಲ್ಲಿ ಸುಲಭವಾಗಿ ಎಸೆಯುವುದರಿಂದ ಹಲವಾರು ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ.ಗ್ರಾಮಗಳ ನೈರ್ಮಲ್ಯ ಕಾಪಾಡುವ ನಿಟ್ಟಿನಲ್ಲಿ ಇಂದು ಘನತ್ಯಾಜ್ಯ ನಿರ್ವಹಣಾ ಘಟಕ ನಿರ್ಮಾಣ ಕಾಮಗಾರಿಗೆ ಇಂದು ಭೂಮಿಪೂಜೆ ನೆರವೇರಿಸಲಾಗಿದೆ ಇದಕ್ಕೆ ಸ್ಥಳೀಯರ ಸಹಕಾರ ಅಗತ್ಯ.ನೀರು, ವಿದ್ಯುತ್, ಪ್ಲಾಸ್ಟಿಕ್ ಸೀಮಿತವಾಗಿ ಬಳಸುವ ಬದಲಾವಣೆಯಾಗಬೇಕು ಎಂದರು.
ಕಳೆದ ಕೆಲವರ್ಷಗಳಿಂದ ಎಂಬಸಿ ಸಮೂಹದವರು ಕರ್ನಾಟಕದಲ್ಲಿ ಇದೇ ಪ್ರಥಮ ಬಾರಿಗೆ ಸಹಭಾಗಿತ್ವದಲ್ಲಿ ತ್ಯಾಜ್ಯವಿಂಗಡಣಾ ಘಟಕ ನಿರ್ಮಾಣ ಮಾಡುತ್ತಿದ್ದಾರೆ. ಇದೇ ಮಾದರಿಯಲ್ಲಿ ಬೇರೆ ಖಾಸಗಿ ಕಂಪನಿಗಳು ಸಹ ಗ್ರಾಮಗಳ ಅಭಿವೃದ್ಧಿಗೆ ಮುಂದಾಗಬೇಕೆಂದು ಹೇಳಿದರು.
ಈ ವೇಳೆ ಅಧ್ಯಕ್ಷೆ ರಜನಿ ಪ್ರಕಾಶ್, ಉಪಾಧ್ಯಕ್ಷ ಕೃಷ್ಣಮೂರ್ತಿ,ಎಂಬಸ್ಸಿ ಗ್ರೂಪ್ ನ ಶೈನಾಗಣಪತಿ, ಆದಿತ್ಯ ವಿರ್ವಾನಿ, ಜಿ.ಪಂ. ಸದಸ್ಯ ಪಿ.ವೆಂಕಟೇಶ್, ತಾ.ಪಂ.ಸದಸ್ಯ ಪಿ.ನಾಗರಾಜು,ಪಿಡಿಓ ಸಿ.ರಾಜಕುಮಾರ್, ಕಾರ್ಯದರ್ಶಿ ಶಿವಕುಮಾರ್, ಎಸ್.ಡಿ.ಎ ಎಸ್.ಎಮ್.ನಾಗರಾಜು, ಬಿಲ್ ಕಲೆಕ್ಟರ್, ಆರ್.ಧನಂಜಯ, ಬಿಎಂಟಿಸಿ ನಿರ್ದೇಶಕ ಟಿ.ಪಿ ಪ್ರಕಾಶ್, ಕಾಂಗ್ರೆಸ್ ಮುಖಂಡ ಮಂಜುನಾಥ ಗೌಡ,ಜೆ.ಶ್ರೀನಿವಾಸ್, ಹಾಲೇಶ್ ಜಿ.ಪಂ.ಜಿಲ್ಲಾ ಸ್ವಚ್ಛಭಾರತ್ ಕೋಆರ್ಡಿನೇಟರ್ ಸೇರಿದಂತೆ ಗ್ರಾಮಪಂಚಾಯಿತಿ ಸದಸ್ಯರು ಉಪಸ್ಥಿತರಿದ್ದರು.