ಗ್ಲ್ಲುಕೊಮಾ ಕಾಯಿಲೆಯ ಬಗ್ಗೆ ನಿರ್ಲಕ್ಷ್ಯ ಬೇಡ

ಕಲಬುರಗಿ: ಮಾ.18:ಗ್ಲ್ಲುಕೊಮಾವು ಕಾಯಿಲೆಯು ಕಣ್ಣಿಗೆ ಸಂಬಂಧಿಸಿದ್ದು, ದೃಷ್ಟಿನರಗಳು ಹಾನಿಗೊಳಗಾಗುವ ಕಾರಣದಿಂದ ಉಂಟಾಗುತ್ತದೆ. ಯಾವುದೇ ಮುನ್ಸೂಚನೆ ನೀಡದೆ ದೃಷ್ಟಿನಾಶ ಮಾಡುತ್ತದೆ. ಇದರ ಬಗ್ಗೆ ಬಹಳಷ್ಟು ಜನರಿಗೆ ತಮ್ಮ ಅರಿವಿಗೆ ಬರುವದಿಲ್ಲ. ಆರಂಭದಲ್ಲಿಯೇ ಗುರುತಿಸಿ ಚಿಕಿತ್ಸೆ ನೀಡುವದರಿಂದ ಅದರ ಪರಿಣಾಮ ಕಡಿಮೆಗೊಳಿಸಬಹುದಾಗಿದ್ದು, ಅದರ ಬಗ್ಗೆ ನಿರ್ಲಕ್ಷ್ಯ ಬೇಡ ಎಂದು ವೈದ್ಯಾಧಿಕಾರಿ ಡಾ.ಅನುಪಮಾ ಎಸ್.ಕೇಶ್ವಾರ ಹೇಳಿದರು.

   ನಗರದ ಶೇಖರೋಜಾದಲ್ಲಿರುವ ಶಹಾಬಜಾರನ 'ನಗರ ಪ್ರಾಥಮಿಕ ಆರೋಗ್ಯ ಕೇಂದ'್ರದಲ್ಲಿ 'ಬಸವೇಶ್ವರ ಸಮಾಜ ಸೇವಾ ಬಳಗ'ದ ಸಹಯೋಗದೊಮದಿಗೆ ಜರುಗಿದ 'ವಿಶ್ವ ಗ್ಲೌಕೊಮಾ ಸಪ್ತಾಹ' ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಇದೊಂದು ವಂಶಪಾರಂಪರೆಯ ರೋಗವಾಗಿದ್ದು, ಒಂದು ಮನೆಯಲ್ಲಿ ಒಬ್ಬ ವ್ಯಕ್ತಿಗೆ ಈ ರೋಗ ಬಂದರೆ, ಅವರ ಸಹೋದರ ಮತ್ತು ಮಕ್ಕಳಲ್ಲಿ ಬರುವ ಸಂಭವ ಹೆಚ್ಚಾಗಿದೆ. ಆದರೆ ಸಂಪೂರ್ಣವಾಗಿ ನಿವಾರಣೆ ಮಾಡಲಾರದ ಕಣ್ಣಿನ ರೋಗ ಇದಾಗಿದೆ. ಹನಿ ಔಷಧ ಬಳಸಬೇಕು. ಜೊತಗೆ ಕೆಲವು ಸಂದರ್ಭಗಳಲ್ಲಿ ಲೇಸರ್ ಮತ್ತು ಶಸ್ತ್ರಚಿಕಿತ್ಸೆಯ ಮೂಲಕ ಚಿಕಿತ್ಸೆ ಮಾಡಬಹುದಾಗಿದೆ ಎಂದರು.

  ಉಪನ್ಯಾಸಕ ಎಚ್.ಬಿ.ಪಾಟೀಲ ಮಾತನಾಡಿ, ನಿರಂತರವಾಗಿ ಕಂಪ್ಯೂಟರ, ಟಿವಿ ಮತ್ತು ಮೋಬೈಲ್ ವೀಕ್ಷಣೆ ಕಣ್ಣಿಗೆ ಹಾನಿಯನ್ನುಂಟು ಮಾಡುತತಿದೆ. ಕಣ್ಣಿಗೆ ಸಂಬಂಧಿಸಿದಂತೆ ಏನಾದರೂ ತೊಂದರೆಯನ್ನು ಕಂಡುಬಂದರೆ ಸ್ವಯಂ ವೈದ್ಯರಾಗಿ ಯಾವುದೋ ಕಣ್ಣಿನ ಡ್ರಾಪ್ಸ್ ಹಾಕಿಕೊಳ್ಳುವುದರ ಬದಲು, ತಜ್ಞ ವೈದ್ಯರನ್ನು ಬೇಟಿಯಾಗಿ ಸೂಕ್ತ ಚಿಕಿತ್ಸೆ ಪಡೆಯಬೇಕು. ಹಸಿರು ತರಕಾರಿ, ಹಾಲು, ಹಣ್ಣು, ವಿಟಾಮಿನ್-ಎ ಇರುವ ಆಹಾರವನ್ನು ಸೇವಿಸುವುದು, ಅಧ್ಯಯನ ಮಾಡುವಾಗ ಬೆಳಕು ನಿಮ್ಮ ಎಡಭಾಗದಿಂದ ಹಾದುಹೋಗುವಂತೆ ನೋಡಿಕೊಳ್ಳುವುದು, ಬಹಳಷ್ಟು ಪ್ರಖರ ಹಾಗೂ ಮಬ್ಬಾದ ಬೆಳಕಿನಲ್ಲಿ ಓದಬಾರದು, ನಿರಂತರವಾಗಿ ಓದದೇ, 45 ನಿಮಿಷಗಳ ನಂತರ ಕಡ್ಡಾಯವಾಗಿ ಕಣ್ಣಿಗೆ 10 ನಿಮಿಷ ವಿಶ್ರಾಂತಿ ನೀಡಬೇಕು ಎಂದು ಕಣ್ಣಿನ ಆರೋಗ್ಯಕ್ಕೆ ಸಂಬಂಧಿಸಿದಂತೆ ಸಲಹೆಗಳನ್ನು ವೈದ್ಯಲೋಕದಲ್ಲಿ ಉಲ್ಲೇಖಿಸಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ದೇವೇಂದ್ರಪ್ಪ ಗಣಮುಖಿ, ಜಗನಾಥ ಗುತ್ತೇದಾರ, ಪುಷ್ಪಾ ಆರ್.ರತ್ಮಹೊನ್ನದ್, ಕಿರಣ ಪಾಟೀಲ ಸೇರಿದಂತೆ ಮತ್ತಿತರರಿದ್ದರು.