ಗ್ಲೌಸ್, ಮಾಸ್ಕ್, ಸಾನಿಟೈಸರ್ ವಿತರಣೆ

ದೇವದುರ್ಗ.ನ.೨೦- ತಾಲೂಕಿನ ಗಬ್ಬೂರು ಹೋಬಳಿಯ ಕ್ಯಾದಿಗೇರಾ, ಮುಷ್ಟೂರು, ಮಸರಕಲ್, ಶಾವಂತಗೇರಾ ಗ್ರಾಮದ ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಸಹಾಯಕಿಯರಿಗೆ ಬೆಂಗಳೂರಿನ ಕ್ರೈ ಸಂಸ್ಥೆ, ಶೃತಿ ಸಾಂಸ್ಕೃತಿಕ ಸಂಸ್ಥೆ ಹಾಗೂ ಹಿಮಾಲಯ ಕಂಪನಿಯಿಂದ ಸಾನಿಟೈಸರ್, ಮಾಸ್ಕ್, ಗ್ಲೌಸ್ ಹಾಗೂ ಸಾಬೂನು, ಶಾಂಪ್ ಒಳಗೊಂಡ ಕಿಟ್ ಗುರುವಾರ ವಿತರಣೆ ಮಾಡಲಾಯಿತು.
ಹೈಕ ವಿಮೋಚನಾ ವೇದಿಕೆ ತಾಲೂಕು ಅಧ್ಯಕ್ಷ ರಾಮಣ್ಣ ಎನ್.ಗಣೇಕಲ್ ಮಾತನಾಡಿ, ಕರೊನಾ ಬಗ್ಗೆ ಜನರು ಭಯಭೀತರಾಗದೆ, ಎಚ್ಚರಿಕೆ ವಹಿಸಬೇಕು. ರೋಗ ನಿವಾರಣೆಗೆ ಶ್ರಮಿಸುತ್ತಿರುವ ಆಶಾ, ಅಂಗವನಾಡಿ ಕಾರ್ಯಕರ್ತೆಯರಿಗೆ ಕಿಟ್ ವಿತರಣೆ ಮಾಡಲಾಗುತ್ತಿದೆ. ಅರಕೇರಾ, ಜಾಡಲದಿನ್ನಿ, ಜರದಬಂಡಿ, ಶಿವಂಗಿ, ಮುಷ್ಟೂರು ಸೇರಿ ವಿವಿಧ ಗ್ರಾಮದ ಕರೊನಾ ವಾರಿಯಸ್೯ಗೆ ಕಿಟ್ ವಿತರಣೆ ಮಾಡಲಾಗುತ್ತಿದೆ ಎಂದು ಹೇಳಿದರು.
ಅಂಗನವಾಡಿ ಕಾರ್ಯಕರ್ತೆ ವೀರಮ್ಮ ಅಗಳಕೇರಾ ಇತರರು ಇದ್ದರು.