ಗ್ಲೋಬಲ್ ಸೈನಿಕ ಅಕಾಡೆಮಿಯ 6ನೇ ವರ್ಷದ ಶಂಕು ಸ್ಥಾಪನೆ ದಿನಾಚರಣೆ

ಬೀದರ:ನ.3: ನಗರದ ಹೊರವಲಯದ ತಾಲ್ಲೂಕಿನ ಬೆನಕನಳ್ಳಿ ರಸ್ತೆಯಲ್ಲಿರುವ ಗ್ಲೋಬಲ್ ಸೈನಿಕ ಅಕಾಡೆಮಿ ಶಾಲೆಯಲ್ಲಿ ಭಾನುವಾರ ಕನ್ನಡ ರಾಜ್ಯೋತ್ಸವ ದಿನಾಚರಣೆ ನಿಮಿತ್ಯ ಗ್ಲೋಬಲ್ ಸೈನಿಕ್ ಅಕಾಡೆಮಿ ಶಾಲೆಯ 6ನೇ ಶಂಕುಸ್ಥಾಪನೆ ದಿನಾಚರಣೆ ಜರುಗಿತು.
ಸಂಸ್ಥೆ ಅಧ್ಯಕ್ಷ ಕರ್ನಲ್ ಶರಣಪ್ಪ ಸಿಕೇನಪುರೆ ಅವರು ತಾಯಿ ಭುವನೇಶ್ವರಿ ದೇವಿಯ ಪೂಜೆ ಮತ್ತು ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಕನ್ನಡ ರಾಜ್ಯೋತ್ಸವದ ಶುಭಾಶಯ ಕೋರಿ ಈ ದಿನ ನಮ್ಮ ಶಾಲೆಯ ಶಂಕುಸ್ಥಾಪನೆ ಮಾಡಿ 6 ವರ್ಷಗಳಾದವು, ಶಾಲೆ ಬೆಳೆಯಲು ಶಿಕ್ಷಕರು ಮತ್ತು ಸಿಬ್ಬಂದಿಗಳ ಪಾತ್ರ ಪ್ರಮುಖವಾಗಿದೆ ಮುಂದೆಯೂ ಸಹ ಹೀಗೆ ಎಲ್ಲರ ಸಹಕಾರ ಇರಲಿ ಎಂದು ಹೇಳಿದರು.
ಶಿಕ್ಷಕ ವಿಲ್ಸನ ಭಾಸ್ಕರ ಮಾತನಾಡಿ, ಅಖಂಡ ಕರ್ನಾಟಕ ನಿರ್ಮಾಣವಾಗಲು ಕನ್ನಡದ ಹಲವರು ಶ್ರಮಿಸಿದ್ದಾರೆ. ಅವರಲ್ಲಿ ಕನ್ನಡ ಕುಲಪುರೋಹಿತರಾದ ಆಲೂರು ವೆಂಕಟರಾವ, ಡೆಪ್ಯುಟಿ ಚನ್ನಬಸಪ್ಪ, ಬಿ.ಎಮ್.ಶ್ರೀ, ಗೋವಿಂದ ಪೈ, ,ಕುವೆಂಪು, ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಮುಂತಾದವರ ಪಾತ್ರ ಹಿರಿದಾಗಿದೆ ಎಂದು ಸ್ಮರಿಸಿದರು.
ಸಂಸ್ಥೆಯ ನಿರ್ದೇಶಕ ರಮೇಶ ಪಾಟೀಲ ಸೋಲಪುರ ಮಾತನಾಡಿ, ಕನ್ನಡ ರಾಜ್ಯೋತ್ಸವ ದಿನದಂದು ನಮ್ಮ ಶಾಲೆಯ ಶಂಕು ಸ್ಥಾಪನೆ ಮಾಡಿದ ದಿನ ವಿರುವುದು ನಮ್ಮೆಲ್ಲರಿಗೆ ಹೆಮ್ಮೆಯ ವಿಷಯ ಹಾಗೂ 6 ವರ್ಷಗಳಲ್ಲಿ ಶಾಲೆಯು ಇಷ್ಟೊಂದು ಸಾಧನೆ ಮಾಡುವಲ್ಲಿ ಕರ್ನಲ್ ಶರಣಪ್ಪ ಸಿಕೇನಪುರೆ ಅವರ ಸತತ ಪರಿಶ್ರಮವೇ ಕಾರಣ ಎಂದು ಹೇಳಿದರು.
ಈ ವೇಳೆ ಸಂಸ್ಥೆಯ ನಿರ್ದೇಶಕರಾದ ಡಾ. ರಘು ಕೃಷ್ಣಮೂರ್ತಿ, ಶ್ರೀನಿವಾಸ ವಾಸು, ವಿಮಲಾ ಸಿಕೇನಪುರೆ ಮುಖ್ಯ ಗುರು ಜ್ಯೋತಿ ರಾಗಾ, ಪಿ ಆರ್ ಓ ಕಾರಂಜಿ ಸ್ವಾಮಿ, ಶಾಲೆಯ ಸಿಬ್ಬಂದಿಗಳಾದ ಮಡೆಪ್ಪ, ಪ್ರಹ್ಲಾದ, ಅಶೋಕ, ಸಚಿನ್, ಶಿಕ್ಷಕ ವೃಂದದವರು ಹಾಗೂ ಇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.