ಗ್ಲೋಬಲ್ ಸೈನಿಕ ಅಕಾಡೆಮಿಯ ವಿದ್ಯಾರ್ಥಿ ಕರ್ನಾಟಕ ರಾಜ್ಯ ಬೋರ್ (ರೈಫಲ್ ಮತ್ತು ಪಿಸ್ತೂಲ್) ಸ್ಪರ್ಧೆಯಲ್ಲಿ ಅತ್ಯುತ್ತಮ ಸಾಧನೆ

ಬೀದರ :ಜು.22:ನಗರದ ಹೊರವಲಯದಲ್ಲಿರುವ ಗ್ಲೋಬಲ್ ಸೈನಿಕ ಅಕಾಡೆಮಿಯ 9 ನೇ ತರಗತಿಯ ವಿಧ್ಯಾರ್ಥಿ ಧವಲ ಪರುಳೇಕರ್ 10 ನೇ ಕರ್ನಾಟಕ ರಾಜ್ಯ ಸಣ್ಣ ಬೋರ್ (ರೈಫಲ್ ಮತ್ತು ಪಿಸ್ತೂಲ್) ಶೂಟಿಂಗ್ ಸ್ಪರ್ಧೆಯ 10 ಮೀಟರ್ ಏರ್ ರೈಫಲ್ ಸಬ್ ಯೂಥ್ ಪುರುಷರ ವ್ಯಯಕ್ತಿಕ ವಿಭಾಗದಲ್ಲಿ 591.3/600 ಅಂಕಗಳನ್ನು ಪಡೆದು 8 ನೇ ಸ್ಥಾನ ಪಡೆದಿರುತ್ತಾನೆ.

ಯೂಥ್ ಮೆನ್ ವ್ಯಯಕ್ತಿಕ ವಿಭಾಗದಲ್ಲಿ 591.3/600 16 ನೇ ಸ್ಥಾನ ಹಾಗೂ ಜೂನಿಯರ್ ಮೆನ್ ವ್ಯಯಕ್ತಿಕ ವಿಭಾಗದಲ್ಲಿ 591.31/600 21ನೇ ಸ್ಥಾನ ಪಡೆದು ಸೆಪ್ಟೆಂಬರ್ ನಲ್ಲಿ ಜರುಗಲಿರುವ ದಕ್ಷಿಣ ವಲಯದ ಪೂರ್ವರಾಷ್ಟ್ರೀಯ ರೈಫಲ್ ಮತ್ತು ಪಿಸ್ತೂಲ್ ಸ್ಫರ್ಧೆಗೆ ಧವಲ್ ಆಯ್ಕೆಯಾಗಿರುತ್ತಾರೆ.

ಗ್ಲೂಬಲ್ ಸೈನಿಕ ಅಕಾಡೆಮಿಯ ವಿದ್ಯಾರ್ಥಿ ರಾಜ್ಯಮಟ್ಟದ ರೈಫಲ್ ಸ್ಫರ್ಧೆಯಲ್ಲಿ ಉತ್ತಮ ಸಾಧನೆ ಮಾಡಿ ದಕ್ಷಿಣ ವಲಯದ ಪೂರ್ವ ರಾಷ್ಟ್ರೀಯ ರೈಫಲ್ ಮತ್ತು ಪಿಸ್ತೂಲ್ ಸ್ಪರ್ಧೆಗೆ ಆಯ್ಕೆಯಾಗಿ ಬೀದರ ಜಿಲ್ಲೆಗೆ ಧವಲ್ ಕೀರ್ತಿ ತಂದಿರುತ್ತಾರೆ. ಇದು ಗ್ಲೋಬಲ್ ಸೈನಿಕ ಅಕಾಡೆಮಿಗೆ ಅತ್ಯಂತ ಹೆಮ್ಮೆಯ ಮತ್ತು ಸಂತಸ ವಿಷಯವಾಗಿದೆ ಎಂದು ಗ್ಲೋಬಲ್ ಸೈನಿಕ ಅಕಾಡೆಮಿಯ ಅಧ್ಯಕ್ಷರಾದ ಕರ್ನಲ್ ಶರಣಪ್ಪ ಸಿಕೇನ್ಪೂರೆ ಅವರು ತಿಳಿಸಿದರು.

ಪ್ರಾಶುಪಾಲರಾದ ಇವ್ಲಿನ್ ಜಾರ್ಜ,ಪಿಆರೋ ಕಾರಂಜಿ, ಶಿಕ್ಷಕರು ಮತ್ತು ಸಿಬ್ಬಂದಿಗಳು ಧವಲ್ ಅವರ ಸಾಧನೆಗೆ ಹರ್ಷವ್ಯಕ್ತ ಪಡಿಸಿದರು.