ಗ್ಲೋಬಲ್ ಸೈನಿಕ ಅಕಾಡೆಮಿಯ ಪೂರ್ವ ಸೈನ್ಯ ಭರ್ತಿ ಶಿಬಿರಕ್ಕೆ ಡಾ. ಗುರುರಾಜ್ ಕರ್ಜಗಿ ಭೇಟಿ

ಬೀದರ:ನ.21:ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕøತಿಕ ಸಂಘ ಅಡಿಯಲ್ಲಿ ಗ್ಲೋಬಲ್ ಸೈನಿಕ್ ಅಕಾಡೆಮಿ ಪೂರ್ವ ಸೈನ್ಯ ಭರ್ತಿ ಶಿಬಿರಕ್ಕೆ ಡಾ. ಗುರುರಾಜ್ ಕರ್ಜಗಿ ಅವರು ಭೇಟಿ ನೀಡಿ ಅಲ್ಲಿನ ಅಭ್ಯರ್ಥಿಗಳನ್ನು ಉದ್ದೇಶಿಸಿ ಮಾತನಾಡಿ ಯಾವುದೇ ಕೆಲಸ ಮಾಡಲು ಪ್ರಯತ್ನಪಡುತ್ತೇನೆ ಅನ್ನುವ ಬದಲು ಮಾಡೇ ಮಾಡುತ್ತೇನೆ ಅನ್ನುವ ಪ್ರವೃತ್ತಿ ಬೆಳೆಸಿಕೊಳ್ಳಿ ಅವಾಗ ಗುರಿ ಮುಟ್ಟಲು ಸಾಧ್ಯ ಎಂದರು.
ಒಬ್ಬ ಸೈನಿಕನು ಹೋರಾಟಕ್ಕೆ ಅವನ ದೇಹ ಒಂದುಪಟ್ಟು ಬಲಿಷ್ಠಗೊಂಡು ಸಿದ್ಧವಾದರೆ, ಅವನ ಮನಸ್ಸು ಅವನ ದೇಹಕ್ಕಿಂತ ಮೂರುಪಟ್ಟು ಬಲಿಷ್ಠವಾದಾಗ ಮಾತ್ರ ಅವರಲ್ಲಿ ಪೂರ್ಣತೆ ಬರುವುದು, ಮನಸ್ಸಿಗೆ ತೃಪ್ತಿ ನೀಡುವ, ಮನಸ್ಸಿಗೆ ಖುಷಿ ನೀಡುವ ಕೆಲಸ ಯಶಸ್ಸು ಕಾಣಲು ಸಾಧ್ಯ ಅದಕ್ಕೆ ಯಾವುದೇ ಕೆಲಸಯನ್ನು ಖಿಷಿಯಿಂದ, ಮನಸ್ಸಿನಿಂದ ಮಾಡಬೇಕು ಕಷ್ಟಪಟ್ಟು, ಬಲವಂತದಿಂದ ಮಾಡೋದಲ್ಲ. ಕರ್ನಲ್ ಶರಣಪ್ಪ ಸಿಕೇನಪುರೆ ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಈ ಸೇನಾ ಪೂರ್ವ ಭರ್ತಿ ಶಿಬಿರದ ಉಪಯೋಗ ಪಡೆದುಕೊಳ್ಳಿ ಇದು ನಿಮ್ಮ ಜೀವನದಲ್ಲಿ ಶಿಸ್ತು ಬೆಳೆಸುತ್ತದೆ ಎಂದು ಹೇಳಿದರು.

ಈ ಪ್ರದೇಶದ ಜನರು ಭಾರತ ಸೇನೆ ಸೇರಿ ಉನ್ನತ ಅಧಿಕಾರಿಗಳಾಗಿ ಸೇವೆ ಸಲ್ಲಿಸುವಂತಾಗಬೇಕು ಎಂದು ಅವರು ಅಭ್ಯರ್ಥಿಗಳನ್ನು ಉತ್ತೇಜನ ಪಡಿಸಿದರು.

ಈ ವೇಳೆ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಂಸೃತಿಕ ಸಂಘದ ನಿರ್ದೇಶಕರಾದ ರೇವಣಸಿದ್ಧಪ್ಪಾ ಜಾಲದೆ, ಗ್ಲೋಬಲ್ ಸೈನಿಕ ಅಕಾಡೆಮಿಯ ಅಧ್ಯಕ್ಷ ಕರ್ನಲ್ ಶರಣಪ್ಪ ಸಿಕೇನಪುರೆ,, ಪ್ರಾಂಶುಪಾಲರಾದ ಸ್ಕ್ವಾಡನ್ ಲೀಡರ್ ಇವ್ಲಿನ್ ಜಾರ್ಜ್, ಮಡೆಪ್ಪ, ಪಿಆ??? ಕಾರಂಜಿ ಸ್ವಾಮಿ, ಶಿಕ್ಷಕರು, ಸೇನಾ ಪೂರ್ವ ತರಬೇತಿಯ ಅಭ್ಯರ್ಥಿಗಳು, ಎಲ್ಲಾ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.