ಗ್ಲೋಬಲ್ ಸೈನಿಕ ಅಕಾಡೆಮಿಯಲ್ಲಿ ಕ್ರಿಸ್ಮಸ್ ಆಚರಣೆ

ಬೀದರ್:ಡಿ.25: ತಾಲೂಕಿನ ಬೆನಕನಳ್ಳಿ ರಸ್ತೆಯಲ್ಲಿರುವ ಗ್ಲೋಬಲ್ ಸೈನಿಕ ಅಕಾಡೆಮಿಯಲ್ಲಿ ಶನಿವಾರ ಕ್ರಿಸ್ಮಸ್ ಆಚರಣೆ ಮಾಡಲಾಯಿತು,
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ವಿವಿಧ ಸಾಂಸ್ಕøತಿಕ ಕಾರ್ಯ ಕ್ರಮಗಳನ್ನು ನಡೆಸಿಕೊಟ್ಟರು. ಇವುಗಳಲ್ಲಿ ಸಂಗೀತ, ನೃತ್ಯ ಮತ್ತು ಯೇಸು ಕ್ರಿಸ್ತರ ಹುಟ್ಟಿದ ಕುರಿತಾದ ನಾಟಕ ಇವುಗಳಲ್ಲಿ ಪ್ರಮುಖವಾಗಿತ್ತು. ಸಾಂತಾಕ್ಲಾಸ್ ವೇಷಧಾರಿಗಳು ಎಲ್ಲರ ಗಮನ ಸೆಳೆದು ಮಕ್ಕಳಿಗೆ ಉಡುಗೊರೆಗಳನ್ನು ಕೊಟ್ಟಿದ್ದು ವಿಶೇಷವಾಗಿತ್ತು.
ಸಂಸ್ಥೆಯ ಅಧ್ಯಕ್ಷರಾದ ಕರ್ನಲ್ ಶರಣಪ್ಪ ಸಿಕೇನ್ಪುರೆ ಅವರು ಮಾತನಾಡಿ, ಎಲ್ಲರಿಗು ಕ್ರಿಸ್ಮಸ್ ಶುಭಾಶಯಗಳನ್ನು ಕೋರಿದರು, ಕ್ರಿಸ್ಮಸ್ ಹಬ್ಬ ಪ್ರೀತಿ ಮತ್ತು ಶಾಂತಿ ಸಾರುವ ಹಬ್ಬವಾಗಿದೆ ನಾವೆಲ್ಲ ಪರಸ್ಪರ ಪ್ರೀತಿಯಿಂದ ಜೀವಿಸಬೇಕು ಯೇಸುಕ್ರಿಸ್ತರು ತಮ್ಮ ಜೀವನವನ್ನು ಇತರರಿಗಾಗಿ ತ್ಯಾಗ ಮಾಡಿದ್ದಾರೆ ನಾವು ಸಹ ಯೇಸು ಕ್ರಿಸ್ತರ ಬದುಕಿನಿಂದ ಅನೇಕ ಸಂಗತಿಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಶಾಲೆಯ ಮುಖ್ಯ ಶಿಕ್ಷಕಿ ಜ್ಯೋತಿ ರಾಗ, ಪಿ. ಆರ್. ಓ ಕಾರಂಜಿ ಸ್ವಾಮಿ, ಸುಬೇದಾರ್ ಮೇಜರ್ ಮಡೆಪ್ಪ ಸೇರಿದಂತೆ ಎಲ್ಲ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.