ಗ್ಲೋಬಲ್ ಸೈನಿಕ ಅಕಾಡೆಮಿಯಲ್ಲಿ ಕನ್ನಡ ರಾಜ್ಯೋತ್ಸವ ಮತ್ತು ಗ್ಲೋಬಲ್ ಸೈನಿಕ ಅಕಾಡೆಮಿಯ 9 ನೇ ವಾರ್ಷಿಕ ದಿನಾಚರಣೆ

ಬೀದರ:ನ.2:ಗ್ಲೋಬಲ್ ಸೈನಿಕ ಅಕಾಡೆಮಿಯಲ್ಲಿ 1 ನೇ ನವೆಂಬರ್ ಬುಧವಾರದಂದು ಕನ್ನಡ ರಾಜ್ಯೋತ್ಸವ ಮತ್ತು ಗ್ಲೋಬಲ್ ಸೈನಿಕ ಅಕಾಡೆಮಿಯ 9 ನೇ ವಾರ್ಷಿಕ ದಿನಾಚರಣೆಯನ್ನು ಆಚರಿಸಲಾಯಿತು. ಮೊದಲಿಗೆ ಸಂಸ್ಥೆಯ ಅಧ್ಯಕ್ಷರಾದ ಕರ್ನಲ್ ಶರಣಪ್ಪ ಸಿಕೇನಪೂರೆ ಅವರು ಭುವನೇಶ್ವರಿ ದೇವಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಧ್ವಜಾರೋಹಣವನ್ನು ನಡೆಕೊಟ್ಟರು ನಂತರ ಗ್ಲೋಬಲ್ ಸೈನಿಕ ಅಕಾಡೆಮಿಯ 250 ವಿದ್ಯಾರ್ಥಿಗಳಿಂದ ಆಕರ್ಷಕವಾದ ಪಥಸಂಚಲನ ನೋಡುಗರ ಕಣ್ಮನ ಸೆಳೆಯಿತು.
ಸಂಸ್ಥೆಯ ಅಧ್ಯಕ್ಷರು ಮತ್ತು ಅತಿಥಿಗಳಿಂದ ಜ್ಯೋತಿ ಬೆಳಗುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಶಾಲಾ ವಿದ್ಯಾರ್ಥಿಗಳು ಹಲವು ಸಾಂಸ್ಕøತಿಕ ಕರ್ಯಕ್ರಮಗಳನ್ನು ನಡೆಸಿಕೊಟ್ಟರು, ಭಾಷಣ, ಕನ್ನಡ ಏಕೀಕರಣದ ಇತಿಹಾಸ, ಕನ್ನಡದ ಮಹಾನ್ ವೇಷಧಾರಿಗಳ ಪಾತ್ರ, ನಾಟಕ, ನಾಟ್ಯ, ಗಾಯನ ವಿವಿಧ ಕಾರ್ಯಕ್ರಮಗಳು ನಡೆದವು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಗ್ಲೋಬಲ್ ಸೈನಿಕ ಅಕಾಡೆಮಿಯ ಅಧ್ಯಕ್ಷರಾದ ಕರ್ನಲ್ ಶರಣಪ್ಪ ಸಿಕೇನಪೂರೆ ಅವರು ಕರ್ನಾಟಕವು ಅತ್ಯಂತ ಸುಂದರ ವೈಭವ, ಸಿರಿಸಂಪತ್ತಿನಿಂದ ಕೂಡಿದ ರಾಜ್ಯವಾಗಿದೆ, ಕನ್ನಡ ಸಾಹಿತ್ಯದಲ್ಲಿ ಆದಿಕವಿ ಪಂಪ, ಕುಮಾರವ್ಯಾಸ, ಕುವೆಂಪು, ದರಾ ಬೇಂದ್ರೆ ಅವರಂತಹ ಮಾಹಾನ್ ಕವಿಗಳ ನಾಡು ನಮ್ಮ ಹೆಮ್ಮೆಯ ಕನ್ನಡ ನಾಡು ಎಂದು ಅವರು ಸ್ಮರಿಸಿದರು. ಕನ್ನಡ ಭಾಷೆಯ ಲಿಪಿಯನ್ನು ವಿಶ್ವ ಲಿಪಿಗಳ ರಾಣಿ ಎಂದು ವಿನೋಬಾ ಭಾವೆ ಕರೆದಿದ್ದು ಕನ್ನಡಿಗರಿಗೆ ಹೆಮ್ಮೆಯ ವಿಷಯ ಎಂದು ತಿಳಿಸಿದರು. ಗ್ಲೋಬಲ್ ಸೈನಿಕ ಅಕಾಡೆಮಿಯು ಕಳೆದ 9 ವರ್ಷಗಳಿಂದ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಒತ್ತು ನೀಡಿ ಶಿಕ್ಷಣ ನೀಡುತ್ತಿದೆ ಹಾಗೂ ಕನ್ನಡ ಭಾಷೆಗೆ ನಮ್ಮ ಶಾಲೆಯಲ್ಲಿ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿವೆ ಎಂದರು. ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿ ನಮ್ಮ ಗುರಿ ಇದಕಾಗಿ ಸದಾ ಕಾರ್ಯ ಮಾಡುತ್ತೇನೆ ಎಂದು ಅವರು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕಿ ಜ್ಯೋತಿ ರಾಗ, ಪಿ.ಆರ್.ಓ ಕಾರಂಜಿ ಸ್ವಾಮಿ, ಪೂರ್ವ ಪ್ರಾಥಮಿಕ ಮುಖ್ಯಸ್ಥರು ಡಾ. ಮನಿಷಾ ಚೌಕೆಡೆ, ಅಡ್ಮಿನ್ ಮ್ಯಾನೆಂಜರ್ ಸುಬೇದಾರ್ ಮಡೆಪ್ಪ, ಶಿಕ್ಷಕರು, ಸಿಬ್ಬಂದಿಗಳು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.