
ಬೀದರ್:ಮೇ.16: ಜಿಲ್ಲೆಯ ಹೊರವಲಯದಲ್ಲಿರುವ ಗ್ಲೋಬಲ್ ಸೈನಿಕ ಅಕಾಡೆಮಿಯಲ್ಲಿ ರವಿವಾರ 14/05/23 ರಂದು ಸಾಯಂಕಾಲ ವಿಷಯವಾಗಿ ಆಯೋಜಿಸಲಾದ “ಬೇಸಿಗೆ ಶಿಬಿರ ” ದ ಸಮಾರೋಪ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಸುಮಾರು 14 ದಿನಗಳ ಕಾಲ ಯಶಸ್ವಿವಾಗಿ ನೆಡೆದ ಈ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕರ್ನಲ್ ಶರಣಪ್ಪಾ ಸಿಕೇನಪುರೆ ವಹಿಸಿದರು. ಮುಖ್ಯ ಅತಿಥಿಗಳಾಗಿ ಕ್ಯಾಪ್ಟನ್ ಟಿ. ಸಿ. ಪಲಂಗಪ್ಪಾ ವಿಶಿಷ್ಟಾ ಸೇವಾ ಮೆಡಲ್, ಅತಿಥಿಗಳಾದಕರ್ನಲ್ ಧಾಲಿ ವಾಲ್ ಹಾಗೂ ರೇವಣಸಿದ್ಧಪ್ಪಾ ಜಾಲದೆ ಉಪಸ್ಥಿತರಿದ್ದರು.ಈ ವೇಳೆ ಶಿಬಿರದಲ್ಲಿ ಏರ್ಪಡಿಸಿದ ಸ್ಪರ್ಧೆಗಳಲ್ಲಿ ಗೆದ್ದ ಮಕ್ಕಳಿಗೆ ಸನ್ಮಾನಿಸಲಾಯಿತು. ಕೆಲವು ಮಕ್ಕಳು ಶಿಬಿರದಲ್ಲಿ ಆದ ಒಳ್ಳೆಯ ಅನುಭವಗಳನ್ನು ಹಂಚಿಕೊಂಡರು. ಮಕ್ಕಳಿಗೆ ಶಿಬಿರದಲ್ಲಿದ್ದ ಶೂಟಿಂಗ್, ಸ್ಕೆಟಿಂಗ್, ಸ್ವಿಮ್ಮಿಂಗ್ ಟ್ರೇಕ್ಕಿಂಗ್ ನಲ್ಲಿ ಬೆಟ್ಟ ಹತ್ತುವ ಸಾಹಸಮಯ ದೃಶ್ಯ ಮನಸಾರೆ ಆನಂದಿಸಿದೆವು ಎಂದು ತಮ್ಮ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ನಂತರ ಕರ್ನಲ್ ಧಾಲಿವಾಲ್ ಮಾತನಾಡಿ ನಾವು ಚಿಕ್ಕವರಿದ್ದಾಗ ಈ ರೀತಿಯ ಯಾವುದೇ ಕಲಿಕೆಯ ಸೌಲಭ್ಯಗಳು ಇದ್ದಿಲ್ಲ ಇಂತಹ ಶಿಬಿರದ ಸದುಪಯೋಗವನ್ನು ಎಲ್ಲಾ ಪಾಲಕರು ಪಡೆದುಕೊಂಡು ತಮ್ಮ ಮಕ್ಕಳ ಅಭಿವೃದ್ಧಿಗೆ ಸಹಾಯವಾಗಬೇಕು ಎಂದರು. ತದ ನಂತರ ಗ್ಲೋಬಲ್ ಸೈನಿಕ ಅಕಾಡೆಮಿಯ ಅಧ್ಯಕ್ಷರಾದ ಕರ್ನಲ್ ಶರಣಪ್ಪ ಸಿಕೆಂಪುರೆ ಅವರು ಮಾತನಾಡಿ ಬೇಸಿಗೆ ಶಿಬಿರದ ಉದ್ದೇಶ ಮಕ್ಕಳು ಇತರೆ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಅವರಲ್ಲಿರುವ ಪ್ರತಿಭೆಯನ್ನು ಹೊರತೆಗೆದು ಆ ಆ ಕ್ಷೇತ್ರದಲ್ಲಿ ಉನ್ನತಿಯನ್ನು ಸಾಧಿಸಲು ಅವರನ್ನು ಅಣಿ ಮಾಡುವುದೇ ಆಗಿದೆ ಎಂದರು. ಮನೋರಂಜನೆಯ ಜೊತೆಗೆ ವಿಭಿನ್ನ ಕೌಶಲ್ಯಗಳ ಕಲಿಕೆಗೆ ಅವಕಾಶಗಳನ್ನು ಮಕ್ಕಳಿಗೆ ನಮ್ಮ ಬೇಸಿಗೆ ಶಿಬಿರದಲ್ಲಿ ಕಲ್ಪಿಸಿ ಕೊಡಲಾಗಿತ್ತು. ಒಳ್ಳೆಯ ರೀತಿಯಲ್ಲಿ ಭಾಗವಹಿಸಿದ ಮಕ್ಕಳನ್ನು ಕಂಡು ಸಂತೋಷವನ್ನು ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಪಿ.ಆರ್. ಓ. ಕಾರಂಜಿ ಸ್ವಾಮಿ, ಮೆ. ರಾಮ್ ದವಲಜೆ, ಸು. ಮಡೆಪ್ಪ, ಶ್ರೀ ಅಶೋಕ ಪಾಟೀಲ, ಡಾ. ಗಹನಿನಾಥ್, ಶಿಕ್ಷಕರು, ಪಾಲಕರು ಇನ್ನಿತರ ಸಿಬ್ಬಂದಿಗಳು ಹಾಗೂ ಮಕ್ಕಳು ಪಾಲ್ಗೊಂಡಿದ್ದರು.