ಗ್ಲೋಬಲ್ ಸೈನಿಕ ಅಕಾಡೆಮಿಯಲ್ಲಿ ಬಸವ ಜಯಂತಿ ಆಚರಣೆ

ಬೀದರ :ಎ.24:ನಗರದ ಹೊರವಲಯದ ಬೆನಕನ್ನಳ್ಳಿ ರಸ್ತೆಯಲ್ಲಿರುವ ಗ್ಲೋಬಲ್ ಸೈನಿಕ ಅಕಾಡೆಮಿಯ ಶಾಲೆಯಲ್ಲಿ 23ನೇ ಏಪ್ರೀಲ್ ಭಾನುವಾರ ದಂದು ಬಸವ ಜಯಂತಿ ಆಚರಣೆ ಮಾಡಲಾಯಿತು. ಮೊದಲಿಗೆ ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಪೂಜಿಸಲಾಯಿತು. ನಂತರ ಶಿಕ್ಷಕರು ವಿದ್ಯಾರ್ಥಿಗಳು ಬಸವಣ್ಣನವರ ವಚನಗಳ ಪಠಣ ಹಾಗೂ ಅವರ ಜೀವನ ಸಾಧನೆ ಸಮಾಜಕ್ಕೆ ನೀಡಿದ ಕೊಡುಗೆಗಳ ಬಗ್ಗೆ ವಿವರವಾಗಿ ಭಾಷಣ ನೀಡಿದರು. ಬಸವ ಜಯಂತಿಯ ನಿಮಿತ್ಯವಾಗಿ ಗ್ಲೋಬಲ್ ಸೈನಿಕ ಅಕಾಡೆಮಿಯ ವಿದ್ಯಾರ್ಥಿಗಳಿಗಾಗಿ ಚಿತ್ರಕಲೆ ವಚನ ಪಠಣ ಸ್ಫರ್ಧೇಗಳನ್ನು ಏರ್ಪಡಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಗ್ಲೋಬಲ್ ಸೈನಿಕ ಅಕಾಡೆಮಿಯ ಅಧ್ಯಕ್ಷರಾದ ಕರ್ನಲ್ ಶರಣಪ್ಪ ಸಿಕೇನ್ಪೂರೆ ಎಲ್ಲರಿಗೂ ಬಸವ ಜಯಂತಿಯ ಶುಭಾಶಯಗಳನ್ನು ಕೋರಿ ಮಾತನಾಡಿ ಬಸವಣ್ಣನವರು ಜಗತ್ತಿಗೆ ಜ್ಯೋತಿಯಾಗಿದ್ದಾರೆ, ವಿಶ್ವಕ್ಕೆ ಪ್ರಥಮ ಸಂಸತ್ತು ನೀಡಿದ ಶ್ರೇಯಸ್ಸು ಬಸವಣ್ಣನವರಿಗೆ ಸಲ್ಲುತ್ತದೆ, ಬಸವಣ್ಣನವರ ವಚನಗಳು ಇಂದಿಗೂ ಮನುಷ್ಯನಿಗೆ ಆದರ್ಶ ಹಾಗೂ ಉತ್ತಮ ಜೀವನ ರೂಪಿಸಿಕೊಳ್ಳಲು ಮಾರ್ಗದರ್ಶಕವಾಗಿವೆ. ನಾವೆಲ್ಲರೂ ಬಸವಣ್ಣನವರ ವಚನಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಜೀವನ ರೂಪಿಸಿಕೊಳ್ಳಬೇಕೆಂದು ಹೇಳಿದರು.
ಇದೆ ಸಂಧರ್ಭದಲ್ಲಿ ಖ್ಯಾತ ಸಂಗೀತ ಕಲಾವಿದರಾದ ಶ್ರೀ ರಾಮಲು ಗಾದಗಿ ಅವರಿಗೆ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಪಿ.ಆರ್.ಓ ಕಾರಾಂಜಿ ಸ್ವಾಮಿ, ಶ್ರೀಮತಿ ಗೀತಾ ಉಪ್ಪಿನ್, ಶಿಕ್ಷಕರು, ವಿದ್ಯಾರ್ಥಿಗಳು ಸಿಬ್ಬಂಧಿ ವರ್ಗ ಇನ್ನಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.